ಅಜೆಕಾರು ಸತ್ಯೇಂದ್ರ ಕಿಣಿಯವ್ರ ಮಕ್ಕಳ ಹುಟ್ಟು ಹಬ್ಬದ ವಿಶೇಷ ನೋಟ








ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಜಲಜ ಬಾಲಕೃಷ್ಣ ಮೊಮ್ಮಗನೊಂದಿಗೆ

ಜ್ಯೋತಿ ಹೈಸ್ಕೂಲಿನ ಹಿರಿಯ ಶಿಕ್ಷಕರಾದ ಮುಖ್ಯ ಪ್ರಾಣ ಮತ್ತು ಮಹಾದೇವ ಭಟ್


Welknown teachers of jyothi high school Mr.Mukhyprana(sciece and maths),Mahadeva bhat(kannada)serving here for more than three decades.

ಕಾರ್ಕಳ ತಾಲೂಕ್ ಮಾಜಿ ಅಧ್ಯಕ್ಷೆ ಯಶೋಧ ಶೆಟ್ಟಿ ಚಿತ್ರಕ್ಕೆ ಸಿಕ್ಕಿದ್ದು ಹೀಗೆ ..







photos by shekar ajekar

ಅಜೆಕಾರ್ ಶುಭವಿ ಹೋಟೆಲು



ಅಜೆಕಾರ್ ಶುಭವಿ ಹೋಟೆಲು ಈಗ ಮುಂಬಯಿ ರಿಟರ್ನ್ ಸುರೇಶ ಅವರಿಂದ ನಡೆಸಲ್ಪದುತ್ತಿದೆ.ಹೈಸ್ಕೂಲ್ ಎದುರು ಶುಭವಿ ಹೋಟೆಲ್ ಮತ್ತು ಅಂಗಡಿ ಇದೆ.ಮರದ ವ್ಯಾಪಾರಿಗಲಾಗಿದ್ದ ಕೊರಗ ಶೆಟ್ಟಿ ಅವರು ಸ್ತಾಪಿಸಿದ ಅಂಗಡಿ ಶಾಲಾ ಮಕ್ಕಳ ನೆಚ್ಚಿನ ತಾಣ .ಇಲ್ಲಿ ಲಕ್ಷ್ಮೀಶ ಶೆಟ್ರ ಕನಸಿನ ತುಳು ಚಿತ್ರ ಬರವುದ ...ಚಿತ್ರೀಕರಣ ಆಗಿದೆ.


ಚಿತ್ರ: ಶೇಖರ ಅಜೆಕಾರು

ದಯಾನಾಯಕ್ ದೋಷಮುಕ್ತಿ ಹುಟ್ಟೂರಲ್ಲಿ ಸಂಭ್ರಮ/ dayanayakencounterspecialist












ದಯಾನಾಯಕ್ ದೋಷಮುಕ್ತಿ ಹುಟ್ಟೂರಲ್ಲಿ ಸಂಭ್ರಮ
ಮೂಡುಬಿದಿರೆ:ಆರೋಪಕ್ಕೊಳಗಾಗಿ ಕೆಲಸದಿಂದ ನಿಲಂಬಿತರಾಗಿರುವ ದಯಾನಾಯಕ್ ಅವರನ್ನು ನಿರಪರಾಧಿ ಎಂದು ಬುಧವಾರ ಸುಪ್ರೀಂ ಕೋಟರ್್ ತೀಪರ್ು ನೀಡಿರುವುದರಿಂದ ಅವರ ಹುಟ್ಟೂರು ಕಾರ್ಕಳ ತಾಲಿಲೂಕಿನ ಎಣ್ಣೆಹೊಳೆಯಲ್ಲಿ ಸಂಭ್ರಮಾಚರಣೆಗಳು ನಡೆದವು.
ಇಂದು ಬೆಳಗ್ಗೆನಿಂದಲೇ ಊರ ಸುತ್ತಮುತ್ತ ಅದೇ ವಿಷಯ ಚಚರ್ಿತವಾಗುತ್ತಿದ್ದರೆ,ದಯಾ ನಾಯಕ್ ಅಭಿಮಾನಿಗಳು ಫುಲ್ ಖುಶಿ.
ತನ್ನ ತಾಯಿಯ ಹೆಸರಲ್ಲಿ ಅವರು ರಾಧಾನಾಯಕ್ ಎಜುಕೇಶನ್ ಟ್ರಸ್ಟ್ ಮೂಲಕ ಕಟ್ಟಿಸಿರುವ ರಾಧಾನಾಯಕ್ ಸಕರ್ಾರಿ ಪ್ರೌಢಶಾಲೆಯಲ್ಲಿ ಇಂದು ಸಂಭ್ರಮ ಕಳೆ ಕಟ್ಟಿತ್ತು.
ಪಟಾಕಿ ಸಿಡಿಸಿ , ಸಿಹಿ ಹಂಚಿ ಅಭಿನಂದನೆಯ ಮಾತುಗಳನ್ನು ಆಡಿ ಈ ಸಂಭ್ರಮ ಆಚರಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ದಯಾನಾಯಕ್ ಅವರು ಏಕಾಂಗಿಯಾಗಿ ಕಾನೂನು ಹೋರಾಟ ನಡೆಸಿ ಪರಿಶುದ್ಧರಾಗಿರುವುದು ಅಭಿಮಾನದ ಸಂಗತಿ ಎಂದರು.
ಎಡೋಲ್ಫಸ್ ಕ್ವಾಡ್ರಸ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ದಯಾ ಅವರು ನಡೆಸಿದ ಕಾನೂನು ಹೋರಾಟ ವಿನಾ ಕಾರಣ ಅನುಭವಿಸಿದ ನೋವಿನ ಕಥೆಯನ್ನು ಮಾಮರ್ಿಕವಾಗಿ ತೆರೆದಿಟ್ಟರು.
ರಘುರಾಮ್ ಭಟ್,ಹಸನಬ್ಬ,ಯೈ.ಪಾಂಡುರಂಗ ನಾಯಕ್, ಪ್ರಸನ್ನ ಇಂದ್ರ,ಶಿವಕುಮಾರ್,ದೇವಣ್ಣ ನಾಯಕ್,ಜಯಪಾಲ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ವರದಿ:ಶೇಖರ ಅಜೆಕಾರ

ಬೆಳದಿಂಗಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣದ ಸಾರಾಂಶ

ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಅಧ್ಯಕ್ಷರಾಗಿದ್ದ ಎಚ್.ಡುಂಡಿರಾಜ್ ಭಾಷಣದ ಸಾರಾಂಶ
ಫ಼ೆಬ್ರವರಿ ೯-೨೦೦೯ರಬೆಳದಿಂಗಿಳ ರಾತ್ರಿ ಅಜೆಕಾರಿನ ಕುರ್ಪಾಡಿಯಲ್ಲಿ ಸಾಹಿತ್ಯ ಲೋಕದ ಅದ್ಭುತವೊಂದು ನಡೆಯಿತು.ಅದುವೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ.ಈ ಬಾರಿ ನವೆಂಬರ್ ತಿಂಗಳಲ್ಲಿ ಇಂತಹದ್ದೆ ಕಾರ್ಯಕ್ರಮ ಮೂಡುಬಿದಿರೆಯಲ್ಲಿ ನಡೆಯಲಿದೆ.ಮೊದಲ ಸಮ್ಮೇಳನದ ಅಧ್ಯಕ್ಸರಾಗಿದ್ದ ಚುಟುಕು ಕವಿ, ಕುಟುಕು ಕವಿ ಡುಂಡಿರಾಜ್ ಅವರ ಭಾಷಣ ಇದು.
ಒಂಬತ್ತು ಗ್ರಾಮೋತ್ಸವಗಳನ್ನು ಯಶಸ್ವಿಯಾಗಿ ನಡೆಸಿರುವ ಕುರ್ಪಾಡಿ ಯುವ ವೃಂದ ದಶಮಾನೋತ್ಸವದ ಅಂಗವಾಗಿ ನಡೆಸುತ್ತಿರುವ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅವಕಾಶ ನನಗೆ ಸಿಕ್ಕಿರುವುದಕ್ಕೆ ತುಂಬಾ ಸಂತೋಷ ಅನ್ನಿಸುತ್ತದೆ.

ಇದು ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ. ಪ್ರಶಸ್ತಿ, ಗೌರವಗಳು ಸ್ವಪ್ರಯತ್ನ, ವಶೀಲಿ ಇಲ್ಲದೆ ಬರುವುದಿಲ್ಲ ಅನ್ನುವಂತಹ ಪರಿಸ್ಥಿತಿ ಸಾಹಿತ್ಯ ರಂಗದಲ್ಲಿದೆ. ಆದರೆ, ಈ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅವಕಾಶವನ್ನು ನನಗೆ ಸಮ್ಮೇಳನದ ಸಂಘಟಕರು ಅವರಾಗಿಯೇ ನೀಡಿದ್ದಾರೆ. ಇದು ನನ್ನ ಸಂತೋಷಕ್ಕೆ ಕಾರಣ.

ನನ್ನ ಸಂತೋಷಕ್ಕೆ ಇನ್ನೂ ಹಲವು ಕಾರಣಗಳಿವೆ. ದೊಡ್ಡ ದೊಡ್ಡ ಸಾಹಿತ್ಯ ಸಮ್ಮೇಳನಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ನಡೆಯುತ್ತವೆ. ಆದರೆ, ಕುರ್ಪಾಡಿ ಯುವ ವೃಂದದವರು ರಾಜ್ಯ ಮಟ್ಟದ ಈ ಸಮ್ಮೇಳನವನ್ನು ಅಜೆಕಾರಿನಂಥ ಹಳ್ಳಿಯಲ್ಲಿ ಏರ್ಪಡಿಸಿದ್ದಾರೆ. ಇದು ಬಹಳ ಮುಖ್ಯವಾದ ಸಂಗತಿ.

ನಗರದ ಜನರಿಗೆ ಇಂದು ಸಾಹಿತ್ಯ, ಲಲಿತ ಕಲೆಗಳು ಬೇಡವಾಗುತ್ತಿದೆ. ಅವರ ಆಸಕ್ತಿ ಕೇವಲ ಭೋಗ ಜೀವನದ ಬಗ್ಗೆ. ಅದಕ್ಕಾಗಿ ಹೆಚ್ಚು ಹೆಚ್ಚು ಹಣಗಳಿಸುವುದೊಂದೆ ಅವರ ಗುರಿ. ಹೀಗಾಗಿ ನಗರದಲ್ಲಿ ನಡೆವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಕುರ್ಚಿಗಳು ಖಾಲಿ ಇರುತ್ತವೆ.

ಎಲ್ಲಾ ವಿಚಾರಗಳಲ್ಲೂ ನಗರದವರನ್ನು ಅನುಸರಿಸುವ ಹಳ್ಳಿಯ ಜನ ಸಾಹಿತ್ಯ, ಲಲಿತ ಕಲೆಗಳ ವಿಚಾರದಲ್ಲೂ ನಗರದವರನ್ನು ಅನುಕರಿಸಲು ತೊಡಗಿರುವುದು ದುರಂತ. ಯಕ್ಷಗಾನದವರು, ನಾಟಕದವರು ಸಿನಿಮಾದವರನ್ನು ಅನುಕರಿಸಲು ಹೊರಟಿರುವುದು, ನಗರದ ವಿಕೃತಿ, ಗ್ರಾಮೀಣ ಸಂಸ್ಕೃತಿಯನ್ನು ಪ್ರಭಾವಿಸುತ್ತಿರುವುದನ್ನು ಸೂಚಿಸುತ್ತದೆ.

ಆದ್ದರಿಂದ ನಮ್ಮ ಪರಿಷತ್ತು ಅಕಾಡೆಮಿಗಳು ನಗರ ಕೇಂದ್ರಿತ ದೃಷ್ಟಿಕೋನವನ್ನು ಬಿಟ್ಟು, ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಬೇಕು. ಸಾಹಿತ್ಯಕ್ಕೆ ಪೂರಕವಾದ ವಾತಾವರಣವಿರುವುದು ಹಳ್ಳಿಗಳಲ್ಲಿ ಮಾತ್ರ.

ನನ್ನ ಬಾಲ್ಯದ ೧೬ ವರ್ಷಗಳನ್ನು ಹಟ್ಟಿಕುದ್ರು ಎಂಬ ಪುಟ್ಟ ಹಳ್ಳಿಯಲ್ಲಿ ಕಳೆದ ನಾನು, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡದ್ದು ಆ ಸಮಯದಲ್ಲಿ. ನಮ್ಮೂರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆ, ಕೃಷಿ ಕೆಲಸಗಾರರ ಹಾಡುಗಳು, ಮನೆಯಲ್ಲಿ ಕೇಳಿಬರುತ್ತಿದ್ದ ಸಂಪ್ರದಾಯದ ಹಾಡುಗಳು, ತಂದೆಯವರ ಬಾಯಿಯಿಂದ ಬರುತ್ತಿದ್ದ ಮಂತ್ರಗಳು, ಶ್ಲೋಕಗಳು, ಶಾಲೆಯಲ್ಲಿ ಗುರುಗಳು ಕಲಿಸುತ್ತಿದ್ದ ಶಿಶು ಗೀತೆಗಳು ನನ್ನನ್ನು ಆಗಲೇ ಕವಿಯನ್ನಾಗಿ ಮಾಡಿದವು. ನನ್ನ ಬಾಲ್ಯವನ್ನು ನಾನು ಮಂಗಳೂರು ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ಕಳೆದಿದ್ದರೆ ಖಂಡಿತಾ ನಾನು ಕವಿ ಆಗುತ್ತಿರಲಿಲ್ಲ ಅನ್ನಿಸುತ್ತದೆ. ನಮ್ಮ ಅನೇಕ ಒಳ್ಳೆಯ ಸಾಹಿತಿಗಳ ಬೇರುಗಳು ಇರುವುದು ಹಳ್ಳಿಯಲ್ಲಿ.

ಕವಿ ಯಾಕಾಗಬೇಕು ? ಸಾಹಿತ್ಯ ಯಾಕೆ ಬೇಕು ? ಎಂದು ಕೇಳುವವರೂ ನಮ್ಮ ನಡುವೆ ಇದ್ದಾರೆ. ಎಲ್ಲವನ್ನೂ ಆರ್ಥಿಕ ದೃಷ್ಟಿಯಿಂದ ನೋಡುವವರಿಗೆ ಸಾಹಿತ್ಯದಿಂದ ಏನೂ ಲಾಭವಿಲ್ಲ ಅನ್ನಿಸಬಹುದು.
ಬರೆದೂ ಬರೆದೂ ಕನ್ನಡ ಕವನ
ಪಡೆದೆನು ಕನ್ನಡಕವನ್ನ !
ಎಂದು ನಾನೇ ವ್ಯಂಗ್ಯವಾಡಿದ್ದುಂಟು. ಆದರೆ, ನನಗೆ ನಂತರ ಅನ್ನಿಸಿದ್ದೇ ಬೇರೆ. ಕಾವ್ಯ ಅನ್ನುವುದು, ಸಾಹಿತ್ಯ ಅನ್ನುವುದು ಕನ್ನಡಕದ ಹಾಗೆ! ಅದರ ಮೂಲಕ ನೋಡಿದರೆ ಸಮಾಜದ ಸರಿಯಾದ ಚಿತ್ರ ಕಾಣುತ್ತದೆ.

ಸಾಹಿತ್ಯ ನಮ್ಮ ಹೊಟ್ಟೆಯ ಹಸಿವನ್ನು ನೀಗಿಸುವುದಿಲ್ಲ. ಸಾಹಿತ್ಯದಿಂದ ಕ್ರಾಂತಿಯಾಗುವುದಿಲ್ಲ. ಆದರೆ, ನಮ್ಮ ಬೌದ್ಧಿಕ ಹಸಿವನ್ನು ತಣಿಸಲು ಸಾಹಿತ್ಯ ಬೇಕು. ನಮ್ಮ ಬದುಕಿಗೆ ಹೊಟ್ಟೆಯೇ ಕೇಂದ್ರವಾದರೆ ಪ್ರಾಣಿಗಳಿಗೂ ನಮಗೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಮನುಷ್ಯ ಭಾವ ಜೀವಿ ಮತ್ತು ಬುದ್ಧಿ ಜೀವಿ ಆಗಿರುವುದರಿಂದ ಆತ ಸಾಹಿತ್ಯ ಹಾಗೂ ಲಲಿತ ಕಲೆಗಳನ್ನು ಪೋಷಿಸಿಕೊಂಡು ಬಂದಿದ್ದಾನೆ.

ಸಾಹಿತ್ಯ ಹಾಗೂ ಲಲಿತ ಕಲೆಗಳು ಹುಟ್ಟಿದ್ದೇ ಹಳ್ಳಿಯಲ್ಲಿ. ಜಾನಪದ ಸಾಹಿತ್ಯವೇ ಶಿಷ್ಟ ಸಾಹಿತ್ಯದ ಮೂಲ. ಯಕ್ಷಗಾನ, ಭರತನಾಟ್ಯ, ಶಾಸ್ತ್ರೀಯ ಸಂಗೀತಗಳಿಗೂ ಜನಪದ ನೃತ್ಯ ಹಾಗೂ ಸಂಗೀತಗಳೇ ಮೂಲ ಎಂಬ ವಾದವಿದೆ. ಹೀಗಾಗಿ, ಸಾಹಿತ್ಯ ಲಲಿತಕಲೆಗಳು ಉಳಿಯಬೇಕಾದರೆ, ನಗರದವರಂತೆ ಗ್ರಾಮೀಣ ಪ್ರದೇಶದ ಜನರು ಅವುಗಳಲ್ಲಿ ಆಸಕ್ತಿ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಶ್ರೀ ಶೇಖರ ಅಜೆಕಾರು ಹಾಗೂ ಅವರ ಮಿತ್ರರು ಕಳೆದ ಹತ್ತು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ.

ಕೇವಲ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದರೆ ಸಾಲದು. ಇವುಗಳ ಜತೆಗೆ ನಾವು ನೆಮ್ಮದಿಯಿಂದ ಬದುಕಲು ಅಗತ್ಯವಾದ ಕುಡಿಯುವ ನೀರು, ಸಂಚಾರ ಸಾಧನ, ಸಂಪರ್ಕ ಸಾಧನಗಳು ಹಳ್ಳಿಗಳಲ್ಲಿ ಸಿಗುವಂತಾಗಬೇಕು. ಹಳ್ಳಿಗಳಲ್ಲಿ ದುಡಿಯುವವರಿಗೆ ಕೈತುಂಬಾ ಹಣ ಗಳಿಸುವ ಅವಕಾಶ ಸೃಷ್ಟಿಯಾಗಬೇಕು. ಆಗ ಮಾತ್ರ ಹಳ್ಳಿಯ ಜನ ನಗರಕ್ಕೆ ವಲಸೆ ಹೋಗುವುದನ್ನು ಕಡಿಮೆ ಮಾಡಬಹುದು. ನಗರಕ್ಕೆ ಹಳ್ಳಿಗಳಿಂದ ವಲಸೆ ಹೋಗುವುದು ಹೀಗೆಯೇ ಮುಂದುವರಿದರೆ ಅದರಿಂದ ನಮ್ಮ ಹಳ್ಳಿಗಳು ಮಾತ್ರವಲ್ಲ ನಗರಗಳೂ ಸರ್ವನಾಶ ಆಗುವುದು ಖಂಡಿತ.

ಕನ್ನಡ ಭಾಷೆಯ ಸ್ಥಿತಿಗತಿಯ ಬಗ್ಗೆ ಯೋಚಿಸಿದಾಗ ಇಂದು ಸಂತೋಷಕ್ಕಿಂತ ಆತಂಕವೇ ಹೆಚ್ಚಾಗುತ್ತದೆ. ಆಂಗ್ಲ ಮಾಧ್ಯಮ ಎಂಬ 'ಯಮರಾಯ' ಕನ್ನಡದ ಕಂದಮ್ಮರ ಕತ್ತು ಹಿಚುಕುತ್ತಿದ್ದಾನೆ. ಆಂಗ್ಲ ಮಾಧ್ಯಮದ ಹಾವಳಿ ನಗರಗಳಲ್ಲಿ ಮಾತ್ರವಲ್ಲ ಹಳ್ಳಿಗಳಿಗೂ ವ್ಯಾಪಿಸಿದೆ. ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಕಳಿಸಬೇಡಿ ಎಂದು ನಾನು ಹೇಳುತ್ತಿಲ್ಲ. ಹಾಗೆ ಹೇಳುವ ನೈತಿಕ ಹಕ್ಕು ನಾನೂ ಸೇರಿದಂತೆ ನಮ್ಮ ಅನೇಕ ಸಾಹಿತಿಗಳಿಗೆ ಇಲ್ಲ.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಒಳ್ಳೆಯ ಕೆಲಸ ಸಿಗುವುದಿಲ್ಲ ಎಂಬ ಕಾರಣಕ್ಕೆ ನಾವೆಲ್ಲರೂ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸುತ್ತೇವೆ. ಇದು ವಾಸ್ತವವೂ ಹೌದು. ಎಲ್ಲಿಯವರೆಗೆ ಸರಕಾರ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದ ಭರವಸೆ ನೀಡುವುದಿಲ್ಲವೊ ಅಲ್ಲಿಯವರೆಗೆ ಇಂಗ್ಲೀಷ್ ಮಾಧ್ಯಮದ ಯಮರಾಯನನ್ನು ತಡೆಯುವುದು ಸಾಧ್ಯವಿಲ್ಲ.

ಇಂದು ಯಾವುದೇ ಸಾಹಿತ್ಯಿಕ ಸಮಾರಂಭಗಳಿಗೆ ಹೋದರೂ ಅಲ್ಲಿ ಮಧ್ಯ ವಯಸ್ಕರು ಮತ್ತು ನಿವೃತ್ತರೆ ಹೆಚ್ಚಾಗಿ ಕಾಣ ಸಿಗುತ್ತಾರೆ. ಯುವಕ, ಯುವತಿಯರು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ ಪರಿಣಾಮವಾಗಿ ಕನ್ನಡದ ಕಾರ್ಯಕ್ರಮಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಇದಕ್ಕೆ ಪಾಲಕರೂ ಕಾರಣ. ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನು ನಾವು, ಪಾಲಕರು ಮಾಡಬೇಕಾಗಿದೆ. ಶಾಲೆಯಲ್ಲಿ ಮಕ್ಕಳು ಆಂಗ್ಲಮಾಧ್ಯಮದಲ್ಲಿ ಓದುವುದು ಅನಿವಾರ್ಯವಾಗಿರಬಹುದು. ಆದರೆ ಮನೆಯಲ್ಲಿ ಮಕ್ಕಳಿಗೆ ಕನ್ನಡ ಪತ್ರಿಕೆಗಳನ್ನು, ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿ ಬೆಳೆಸಬೇಕು. ಕನ್ನಡದ ಬಗ್ಗೆ ಹೆತ್ತವರಲ್ಲೆ ಕೀಳರಿಮೆ ಇದ್ದರೆ ಮಕ್ಕಳು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಹೇಗೆ ?

ಕನ್ನಡ ಹೋರಾಟಗಾರರಿಂದ ಕನ್ನಡದ ಉದ್ಧಾರ ಸಾಧ್ಯವಿಲ್ಲ. ಕನ್ನಡದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಗೊಳ್ಳುವುದು ತಪ್ಪು.
ಕನ್ನಡನಾಡು ಚಂದ
ಕನ್ನಡನುಡಿ ಚಂದ, ಕನ್ನಡದ ನೆಲ ಚಂದ
ಕನ್ನಡದ ಆಕಾಶ ಚಂದ
ಕನ್ನಡಕ್ಕೆ ಹೋರಾಡುವುದಕ್ಕೆ ಕೊಡ್ರೀ ನೂರು ರೂಪಾಯಿ ಚಂದಾ !
ಎಂದು ಭಯೋತ್ಪಾದನೆಗೆ ಇಳಿದರೆ ಅದರಿಂದ ಕನ್ನಡದ ಉದ್ಧಾರ ಆಗುವುದಿಲ್ಲ. ಭಾರತದಂಥ ಬಹು ಭಾಷೆಯ, ಬಹು ಸಂಸ್ಕೃತಿಯ ದೇಶದಲ್ಲಿ ಭಾಷೆ ಹಾಗೂ ಧರ್ಮದ ವಿಷಯದಲ್ಲಿ ದುರಭಿಮಾನ, ಅಂಧಾಭಿಮಾನ ಸೂಕ್ತವಲ್ಲ. ಮಾತೃಭಾಷೆ ಬೇರೆಯಾಗಿದ್ದರೂ ಕನ್ನಡವನ್ನು ಬೆಳೆಸಿದ ಸಾಹಿತಿಗಳು ಬೇಕಾದಷ್ಟು ಜನರಿದ್ದಾರೆ.
ಕನ್ನಡಕ್ಕೆ ನಾವು ನೀವು
ಅಂಥದ್ದೇನೂ ಕೊಟ್ಟಿಲ್ಲ
ನಿಜವಾಗಿ ಕೊಟ್ಟದ್ದು
ಜರ್ಮನಿಯ ಕಿಟ್ಟಲ್ಲ!

ತಾಯಿನುಡಿ ಬೇರೆಯಾಗಿದ್ದರೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಳ್ಳುವುದು ಸಾಧ್ಯ ಎಂಬುದಕ್ಕೆ ನಮ್ಮ ಕರಾವಳಿ ಜಿಲ್ಲೆಗಳು ಅತ್ಯುತ್ತಮ ಉದಾಹರಣೆ. ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳನ್ನು ಮನೆಯಲ್ಲಿ ಆಡುವವರು ಕನ್ನಡದ ಕೆಲಸವನ್ನು ಅದ್ಭುತವಾಗಿ ಮಾಡುತ್ತಿದ್ದಾರೆ. ಇತರರಿಗೆ ಆದರ್ಶವಾಗುವಂತೆ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನಗಳನ್ನು ಈ ಜಿಲ್ಲೆಯಲ್ಲಿ ಮಾಡಿದ ರೀತಿ ಇನ್ನಾರಿಗೂ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಾವು ಹೆಮ್ಮೆಪಟ್ಟುಕೊಳ್ಳಬೇಕು. ಇಂದಿಲ್ಲಿ ನಡೆಯುತ್ತಿರುವ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಕಿರೀಟಕ್ಕೆ ಇನ್ನೊಂದು ರತ್ನ.

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಎಂಬ ಬಗ್ಗೆ ಎರಡು ಮಾತಿಲ್ಲ. ಆದರೆ, ನೆರೆ ರಾಜ್ಯದ ಕೆಲವು ಅಂಧಾಭಿಮಾನಿಗಳನ್ನು ನಾವು ಅನುಸರಿಸಬಾರದು. ಅವರ ಮೂರ್ಖತನದ ಹಿಂಸಾಚಾರಗಳನ್ನು ನೋಡಿ ನಾವೂ ಮೂರ್ಖರಂತೆ ವರ್ತಿಸಬಾರದು. ಅದೇ ಸಮಯಕ್ಕೆ ನಮ್ಮ ರಾಜ್ಯದಲ್ಲಿರುವ ಇತರ ಭಾಷೆಯ ಜನರು ಕನ್ನಡದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ನನ್ನ ಈ ಆಶಯವನ್ನು ಚುಟುಕಾಗಿ ಹೀಗೆ ವ್ಯಕ್ತಪಡಿಸುತ್ತೇನೆ.
ಇತರ ಭಾಷೆಗಳೂ ಇರಲಿ
ಕನ್ನಡದೊಂದಿಗೆ
ಬಗೆಯಾಡಲಿ ಅವು
ಕನ್ನಡದೊಂದಿಗೆ
ಎಣ್ಣೆಯಾಗಲಿ
ಕನ್ನಡ-ದೊಂದಿಗೆ!
(ಫೆ- ೯- ಫೆ ೧೦ ರಂದು ಅಜೆಕಾರು ಕುರ್ಪಾಡಿಯಲ್ಲಿ ನಡೆದ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಎಚ್. ಡುಂಡಿರಾಜ್ ಅವರ ಅಧ್ಯಕ್ಷ ಭಾಷಣ)

ಬೆಳದಿಂಗಳ ಸಾಹಿತ್ಯ ಸಮ್ಮೇಳನ ಯಶಸ್ವಿ ಪ್ರಯೋಗ

ಕಾರ್ಕಳ ಅಜೆಕಾರು ಕುರ್ಪಾಡಿಯಲ್ಲಿ ಹೊಸ ಯೋಜನೆಯ ಸಾಕಾರ
ಬೆಳದಿಂಗಳ ಸಾಹಿತ್ಯ ಸಮ್ಮೇಳನ ಯಶಸ್ವಿ ಪ್ರಯೋಗ
ಕೆ. ಪದ್ಮಾಕರ ಭಟ್
ಹುಣ್ಣಿಮೆ ಚಂದಿರನ ತಂಪಾದ ಹಾಲು ಬೆಳದಿಂಗಳ ರಾತ್ರಿ ಹಳ್ಳಿಯ ಮೂಲೆಯೊಂದರಲ್ಲಿ ಕನ್ನಡ ಸಾಹಿತ್ಯ ಲೋಕ ತೆರೆದ ನೂತನ ಪ್ರಯೋಗವೊಂದು ಕಾರ್ಕಳ ಅಜೆಕಾರಿನ ಕುರ್ಪಾಡಿಯಲ್ಲಿ ಯಶ ಕಂಡಿದೆ. ಡುಂಡಿರಾಜ್ ಅಧ್ಯಕ್ಷತೆ ಅದಕ್ಕೆ ಸೊಗ ನೀಡಿದೆ.
ಫೆ. ೯ ರ ಸೂರ್ಯಾಸ್ತದಿಂದ ಫೆ. ೧೦ ರ ಸೂರ್ಯೋದಯದ ವರೆಗೆ ನಡೆದ ಈ ಅಪೂರ್ವ ಸಾಹಿತ್ಯ ಸಮ್ಮೇಳನದಲ್ಲಿ ಸಾವಿರ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಸಾಹಿತ್ಯ ಪ್ರಮುಖರು, ನಾಡಿನ ಗಣ್ಯರು, ಜನಪ್ರತಿನಿಧಿಗಳು ಕಲೆತು ಈ ಸಾಹಿತ್ಯ ಸಮ್ಮೇಳನದ ಸಿಹಿ ಸವಿದು ಸಮ್ಮೇಳನದ ಕಂಪನ್ನು ಆಸ್ವಾದಿಸಿದರು. ಪತ್ರಕರ್ತ ಶೇಖರ ಅಜೆಕಾರು ಅವರ ಈ ಕಲ್ಪನೆಯ ಕೂಸಿಗೆ ಕುಲಾವಿ ತೊಡಿಸಿದವರು ಸಾಮಾಜಿಕ ಕಾರ್ಯಕರ್ತ ಡಾ| ಸಂತೋಷ ಕುಮಾರ್ ಶೆಟ್ಟಿ, ಪ್ರಕೃತ ಜಿಲ್ಲಾ ಪಂಚಾಯತ್ ಸದಸ್ಯರು. ಈ ಇಬ್ಬರು ಅನೇಕ ಹಿತೈಷಿ , ಸಾಹಿತಿ ಮಿತ್ರರನ್ನು ಸಂಘಟಿಸಿ ನಗರಪ್ರದೇಶಗಳಲ್ಲಿ ಈ ವರೆಗೆ ನಡೆದ ಸಾಹಿತ್ಯ ಸಮ್ಮೇಳನಗಳಿಗೆ ಬಿಟ್ಟಿಲ್ಲದ ಅದಕ್ಕಿಂತಲೂ ಹೆಚ್ಚು ಅರ್ಥಪೂರ್ಣವೆನಿಸಿದ ರೀತಿಯಲ್ಲಿ ಈ ಹೊಸ ಪ್ರಯೋಗವನ್ನು ಸಾಕಾರಗೊಳಿಸಿದ್ದಾರೆ.
ಸಮ್ಮೇಳನ ಉದ್ಘಾಟನೆ, ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನಗಳೊಂದಿಗೆ ಸಮೃದ್ಧವಾಗಿ ಶೋಭಿಸಿತು. ರಾತ್ರಿಯಿಡಿ ನಡೆದ ಈ ಕಾರ್ಯಕ್ರಮ ಸೊರಗುತ್ತಿರುವ ಸಾಹಿತ್ಯ ಲೋಕಕ್ಕೊಂದು ಚಿಕಿತ್ಸೆಯಾಗಿ ಹೊಸ ಆಶಾಕಿರಣವಾಗಿ ಕಂಡರೆ ಅಚ್ಚರಿಯಲ್ಲ. ಯಾವುದೇ ವಿಶೇಷ ಸೌಕರ್ಯಗಳಿಲ್ಲದ ಹಳ್ಳಿಗಾಡಿನ ಪ್ರದೇಶದಲ್ಲಿ ಇಂತಹ ಸಾಧ್ಯತೆ ತೆರೆದುಕೊಂಡ ಹಿಂದೆ ಇದ್ದ ಅನೇಕ ದಿನಗಳ ಚಿಂತನೆ ಪ್ರಯತ್ನ, ಕೆಲಸ, ಶ್ರಮ, ಹಾಗೂ ಪ್ರೀತಿ ಈ ಸಮ್ಮೇಳನ ಅಂಗಳದಲ್ಲಿ ಹರಡಿದ ಬೆಳದಿಂಗಳಲ್ಲಿ ಎದ್ದು ಕಾಣುತ್ತಿತ್ತು. ಮುಖ್ಯ ರಸ್ತೆಯಿಂದ ಸಮ್ಮೇಳನ ಅಂಗಣಕ್ಕೆ ಪಥದರ್ಶನದಿಂದ ಆರಂಭಿಸಿ ವೇದಿಕೆ ಸಮ್ಮೇಳನ ಅಂಗಣಕ್ಕೆ ಗ್ರಾಮೀಣ ಸೊಗಡಿನ ಶೃಂಗಾರ, ಅಲಂಕಾರ, ಆಸನ ವ್ಯವಸ್ಥೆ, ಆರೋಗಣೆ ಸಹಿತ ಪ್ರತಿಯೊಂದು ಅಚ್ಚುಕಟ್ಟಾಗಿದ್ದರೆ ಕಾರ್ಯಕ್ರಮ ಸಂಯೋಜನೆ, ಸಮಯದ ನಿರ್ದಿಷ್ಟತೆ, ಸಮಯ ಪಾಲನೆ, ನಿಬಿಡ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ಅದೇ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು.
ನಗರ ಪ್ರದೇಶದ ಗೊಂದಲಗಳಿಂದ ದೂರವಾದ ಗಿಡಮರಗಳ ವನಸಿರಿಯ ಅಚ್ಚಾದನೆಯ ಬದಲು ಇದಕ್ಕೆ ಪೂರಕವೆನಿಸಿದ ಗ್ರಾಮೀಣ ಸೊಗಡಿನ ಅಲಂಕಾರ, ಶಾಂತ ಪ್ರಕಾಶದ ಬೆಳದಿಂಗಳು ಚೆಲ್ಲಿದ ಬಟ್ಟ ಬಯಲು ಸಮ್ಮೇಳನಕ್ಕೆ ಹೇಳಿ ಮಾಡಿಸಿದ ಜಾಗದಂತಿತ್ತು. ಭಾವೈಕ್ಯದ ಸಂಕೇತದ ಗ್ರಾಮೀಣ ಭಾಗದ ಜನರ ಶ್ರದ್ಧಾ ಕೇಂದ್ರವೆನಿಸಿದ ಬೊಬ್ಬರ್ಯ ಸ್ಥಾನದ ಹಿನ್ನಲೆಯಲ್ಲಿ ಆಯ್ದುಕೊಂಡ ಸ್ಥಳದಲ್ಲಿ ಬಯಲು ಸಭಾಂಗಣಕ್ಕೆ ಸಾಮಾಜಿಕ ಕಾರ್ಯಕರ್ತರಾಗಿದ್ದು ಕೀರ್ತಿ ಶೇಷರಾದ ಸ್ಥಳೀಯ ಮಹಿಳೆಯರಾದ ಜಾನಮ್ಮ-ಮುತ್ತಮ್ಮ ಹಾಗೂ ಸೋಮಯ್ಯ ಜೊತೆಗೆ ಕೀರ್ತಿಶೇಷರಾದ ಎಸ್. ಲೋಕು ಶೆಟ್ಟಿಯವರ ಹೆಸರು ವೇದಿಕೆಗೆ ಇಟ್ಟಿರುವುದು (ನಾಡಿಗಾಗಿ ಕೆಲಸ ಮಾಡಿದವರನ್ನು ಸ್ಮರಿಸುವ ರೂಪದಲ್ಲಿ) ಮುಂತಾದ ವೈಶಿಷ್ಟ್ಯಗಳೊಂದಿಗೆ ಆದರ್ಶವಾಗಿತ್ತು.
ಕುರ್ಪಾಡಿ ಯುವ ವೃಂದ ಲಾಂಛನದಡಿ ೯ ವರ್ಷಗಳ ಹಿಂದೆ ಆರಂಭಿಸಲಾದ 'ಗ್ರಾಮೋತ್ಸವ' ಚಿಂತನೆಯ ವೃಕ್ಷ ಇದೀಗ ೧೦ನೇ ವರ್ಷಕ್ಕೆ ಸಾಹಿತ್ಯ ಸಮ್ಮೇಳನದ ರೂಪದಲ್ಲಿ ಹೂಬಿಟ್ಟಿದ್ದು ಸಂಘಟಕರ ಮುಖದಲ್ಲಿ ಸಂತೃಪ್ತಿಯ ಲಾಸ್ಯ ಹರಡಿದೆ. ಕೃತಾರ್ಥತೆಯ ಖುಷಿ ನೀಡಿದೆ. ತಮ್ಮ ಈ ಕೆಲಸಕ್ಕೆ, ಪ್ರಯತ್ನಕ್ಕೆ ಹತ್ತು ವಷಗಳಿಂದ ನಿರಂತರವಾಗಿ ಕೈ ಜೋಡಿಸಿದವರನ್ನು ಸ್ಮರಿಸುವ ಸಂಘಟಕ ಶೇಖರ ಅಜೆಕಾರು ಮತ್ತು ಡಾ| ಸಂತೋಷ ಕುಮಾರ್ ಶೆಟ್ಟಿ ಈ ಬಾರಿಯ ಬೆಳದಿಂಗಳ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿದ ಸಾಹಿತ್ಯಾಸಕ್ತರನ್ನು ಹಾಗೂ ತಮ್ಮ ಜೊತೆ ವಿಶೇಷವಾಗಿ ಬೆಂಬಲಕ್ಕೆ ನಿಂತ ಲಕ್ಷ್ಮೀಶ ಶೆಟ್ಟಿ ಅಜೆಕಾರು, ದಿನೇಶ ದೇವಾಡಿಗ ಮೂಡುಬಿದ್ರೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಕುರ್ಪಾಡಿಯ ಸಾಹಿತ್ಯಾಸಕ್ತ ಕೂಟ ಕಳೆದ ೧೦ ವರ್ಷಗಳಲ್ಲಿ ೧೫ ಸಂಘ ಸಂಸ್ಥೆಗಳನ್ನು ೩೫ ಮಂದಿ ಸಾಧಕರನ್ನು, ಪ್ರತಿಭಾವಂತರನ್ನು ಗುರುತಿಸಿ 'ಗೌರವ' ನೀಡಿ ಸನ್ಮಾನಿಸಿದೆ.
ಕಾರ್ಕಳದಲ್ಲಿ ನಿರಂತರವಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಕಾರ್ಕಳ ಸಾಹಿತ್ಯ ಸಂಘ ಹಾಗೂ ಮಿತ್ರ ಮಂಡಲಿ ಕೋಟ ಎಂಬೆರಡು ಸಂಸ್ಥೆಗಳನ್ನು ಪ್ರಥಮ ಬೆಳದಿಂಗಳ ಸಮ್ಮೇಳನದಲ್ಲಿ ಗುರುತಿಸಿ ಗೌರವಿಸಲಾಗಿದೆ.
ಉದ್ಘಾಟನೆ ನೆರವೇರಿಸಿದ್ದು ಹರಿಕೃಷ್ಣ ಪುನರೂರು, ಅಧಕ್ಶತೆ ಶಾಸಕ ಎಚ್. ಗೋಪಾಲ ಭಂಡಾರಿ, ಕ.ರಾ.ವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಪ್ರೊ| ಪದ್ಮನಾಭ ಗೌಡ, ಕೋ. ರಮಾನಂದ ಕಾಮತ್, ಫಾ| ವಲೇರಿಯನ್ ಫೆರ್ನಾಂಡಿಸ್, ಡಾ| ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದವರು ತುಳು ಲೇಖಕಿ ಜಯಂತಿ ಎಸ್. ಬಂಗೇರ. ಉಪನ್ಯಾಸಕಿಯರಾದ ಶ್ರೀ ಮುದ್ರಾಡಿ-'ಮಹಿಳೆಯರ ಸವಾಲುಗಳು' ಮತ್ತು ಸುಲತಾ ವಿದ್ಯಾಧರ್ ಮಹಿಳೆ ಮತ್ತು ಜಾನಪದ ಕುರಿತು ಪ್ರಬಂಧ ಮಂಡಿಸಿದರು. ಪ್ರೊ| ಮಿತ್ರ ಪ್ರಭಾ ಹೆಗ್ಡೆ, ಮಾಲತಿ ಪೈ ಅತಿಥಿಗಳು.
ಸಂಶೋಧಕ ಡಾ| ವಾಮನ ನಂದಾವರ ಅಧ್ಯಕ್ಷತೆ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಗೋಕುಲದಾಸ್ ಪೈ, ಹೇಮನಾಥ ಪಡುಬಿದ್ರಿ ಉಪಸ್ಥಿತಿಯಲ್ಲಿ ಸಾಧಕರಿಗೆ 'ರತ್ನ' ಗೌರವವನ್ನು ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ವಿತರಿಸಿದರು. ಡಾ| ಎಚ್. ಶಾಂತಾರಾಮ್ -ಶಿಕ್ಷಣ ರತ್ನ, ಅಂಬಾತನಯ ಮುದ್ರಾಡಿ- 'ಸಾಹಿತ್ಯ ರತ್ನ', ಕೋಚ ಪಾಣಾರ-'ಜಾನಪದ ಕಲಾ ರತ್ನ', ಡಾ| ವಸಂತ ಕುಮಾರ್ ಪೆರ್ಲ-'ಮಾಧ್ಯಮ ರತ್ನ', ಶಿವರಾಮ ಕಾಸರಗೋಡು 'ಹೊರನಾಡ ಕನ್ನಡ ರತ್ನ', ಕೆ.ಜೆ. ಗಣೇಶ್ 'ಯಕ್ಷ ಸಂಗೀತ ರತ್ನ', ಜ್ಯೋತಿ ಗುರುಪ್ರಸಾದ್ 'ಕಾವ್ಯರತ್ನ' ಗೌರವ ಪ್ರದಾನಿಸಲಾಯಿತು. 'ಮಾಧ್ಯಮರತ್ನ' - ಚಿದಂಬರ ಬೈಕಂಪಾಡಿ, 'ಉದ್ಯಮ ರತ್ನ' - ಪ್ರಮೋದ್ ಮಧ್ವರಾಜ್, ಉಪ್ಪುಂದ ಚಂದ್ರಶೇಖರ ಹೊಳ್ಳ - 'ಸಂಘಟನಾ ರತ್ನ' ಗೌರವ ಸ್ವೀಕರಿಸಲು ಉಪಸ್ಥಿತರಿರಲಿಲ್ಲ.
ಉಡುಪಿ ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘದ 'ಸುದ್ದಿ ಛಾಯಾಚಿತ್ರ ಪ್ರದರ್ಶನ' ಸಮ್ಮೇಳನದ ಪ್ರಧಾನ ಆಕರ್ಷಣೆಯಾಗಿತ್ತು.ಡಾ| ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆಯಲ್ಲಿ ಧನಂಜಯ ಮೂಡುಬಿದಿರೆ, ಸದಾನಂದ ನಾರಾವಿ, ರಮಾನಂದ ಅಜೆಕಾರು, ಅರುಣ ಹೆಬ್ರಿ, ರತ್ನಾಕರ ಪ್ರಭು ರೆಂಜಾಳ ಕವಿಗೋಷ್ಠಿ ನಡೆಸಿಕೊಟ್ಟರು.
ಕೋ.ರಮಾನಂದ ಕಾಮತ್, ಅರುಣ್ ಕುಮಾರ್ ಶಿರೂರು ನಡುರಾತ್ರಿಯಲ್ಲೂ ಹಾಸ್ಯಗೋಷ್ಠಿಯಲ್ಲಿ ಮಿಂಚಿದರು. ಶೇಖರ ಅಜೆಕಾರು ನಿರ್ದೇಶನದಲ್ಲಿ ಯಕ್ಷ ಸಂಗೀತ-ಕೆ.ಜೆ. ಗಣೇಶ್ - ಎ.ಪಿ. ಪಾಠಕ್ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು.
ಪ್ರಕಾಶ್ ಕಾಬೆಟ್ಟು ನಿರ್ದೇಶನದ ಕನ್ನಡ ಸಿನಿಮಾ 'ಗಾಜಿನ ಗೋಪುರ' ಬಿಡುಗಡೆಯಾಯಿತು.'ಗ್ರಾಮ ಗೌರವ' ಸ್ಮರಣ ಸಂಚಿಕೆ, ಮತ್ತು ಪುಸ್ತಕಗಳ ಬಿಡುಗಡೆಯಾಯಿತು. ಹವ್ಯಾಸಿ ಕಲಾ ತಂಡ 'ಯಕ್ಷಜ್ಯೋತಿ ಕಲಾಮಂಡಳಿ' ಪರ್ಕಳ ಇವರು ಮೌನೇಶ್ ಕಮ್ಮಾರರ ನೇತೃತ್ವದಲ್ಲಿ ನಡೆಸಿದ "ವಾಮನ ಚರಿತ್ರೆ" ಮುಂಜಾವಿಗೆ ಹೊಸ ಸಾಹಿತ್ಯಕ್ಕೆ ಕಳೆ ನೀಡಿತು.

ಜ್ಯೋತಿ ಪಿ.ಯು.ಕಾಲೇಜ್ ವಿಧ್ಯಾರ್ಥಿ ಸಂಘ ಉದ್ಘಾಟನೆ :daijiworldnews

ಜ್ಯೋತಿ ಪಿ.ಯು.ಕಾಲೇಜ್ ವಿಧ್ಯಾರ್ಥಿ ಸಂಘ ಉದ್ಘಾಟನೆ :daijiworldnews
http://www.daijiworld.com/news/news_disp.asp?n_id=80273&n_tit=Ajekar%3A+Students%92+Literary+Union+of+Jyothi+PU+College+Inaugurated

¦ಜ್ಯೋತಿ ಪಿ. ಯು.ಕಾಲೇಜಿನ ವಿದ್ಯಾರ್ಥಿ ನಾಯಕನಾಗಿ ರಮೇಶ ಕುರ್ಪಾಡಿ ಆಯ್ಕೆಯಾಗಿದ್ದಾರ


ಜ್ಯೋತಿ ಪಿ.ಯು.ಕಾಲೇಜಿನ ವಿದ್ಯಾರ್ಥಿ ನಾಯಕನಾಗಿ ಕುರ್ಪಾದಿ ಯುವ ವ್ರಂದದ ಸಕ್ರಿಯ ಕಾರ್ಯಕರ್ತರೂ ಆದ,ಪ್ರಥಮ ಫಿಯುಸಿ ವಿದ್ಯಾರ್ಥಿ ರಮೇಶ ಕುರ್ಪಾಡಿ ಆಯ್ಕೆಯಾಗಿದ್ದಾರೆ. ಉಪನಾಯಕನಾಗಿ ಕಾರ್ತಿಕ್,ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಕುರ್ಪಾಡಿ, ಉಪಕಾರ್ಯದರ್ಶಿಯಾಗಿ ರಾಯಲ್ ಅರುಣ್ ಪಿರೇರ , ಕ್ರೀಡಾನಾಯಕನಾಗಿ ವಿವಿನ್ ಮನೋಹರ್ ಸೋನ್ಸ್ ,ಕ್ರೀಡಾ ಉಪನಾಯಕಿಯಾಗಿ ಡೈನಾ ಮಿನೆಜಸ್ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಸಿಸ್ಟರ್ ಸಾಧನ ತಿಳಿಸಿದ್ದಾರೆ.

Twitter Facebook Delicious Digg Favorites More

 
Twitter Facebook Delicious Digg Favorites More