ಹೆಬ್ರಿಯಲ್ಲಿ ೪ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಹೆಬ್ರಿಯಲ್ಲಿ ೪ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಸ್ನೇಹ ಸಮ್ಮಿಲನ, ಸಂತೋಷಕ್ಕಾಗಿ ಸಮ್ಮೇಳನ: ಡಾ.ಸುನಿತಾ ಶೆಟ್ಟಿ
ಗೌರೀಶ ಕಾಯ್ಕಿಣಿ ವೇದಿಕೆ
ಹೆಬ್ರಿ: ಜನಗಳ ನಡುವೆ ಬಾಂಧವ್ಯ ಬೆಸೆಯಲು ಸಮ್ಮೇಳನಗಳು ನಡೆಯುತ್ತಲೇ ಇರಬೇಕು. ಸ್ನೇಹ ಸಮ್ಮಿಲನಕ್ಕಾಗಿ, ಸಂತೋಷಕ್ಕಾಗಿ ಸಮ್ಮೇಳನಗಳು ಬೇಕು. ಬೆಳದಿಂಗಳ ನೆರಳಿನಲ್ಲಿ ನಡೆಯುವ ಈ ಆಹೋರಾತ್ರಿ ಸಾಹಿತ್ಯ ಸಮ್ಮೇಳನ ಬಲು ಅಪರೂಪದ ಪರಿಕಲ್ಪನೆ ಎಂದು ಮುಂಬಯಿಯ ಹಿರಿಯ ಸಾಹಿತಿ ಡಾ. ಸುನಿತಾ ಶೆಟ್ಟಿ ಹೇಳಿದರು.
ಅವರು ಹೆಬ್ರಿಯ ಜವಾಹರ ನವೋದಯ ವಿದ್ಯಾಲಯ ಆವರಣದ ಗೌರೀಶ ಕಾಯ್ಕಿಣಿ ವೇದಿಕೆಯಲ್ಲಿ ಮೂಡುಬಿದರೆ ಶ್ರೀವಿದ್ಯಾಲಯ ಅರ್ಪಿಸುವ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಹೆಬ್ರಿ ಚಾರದ ಜವಾಹರ್ ನವೋದಯ ವಿದ್ಯಾಲಯದ ಸಹಕಾರದಲ್ಲಿ ಶುಕ್ರವಾgದ  ಬೆಳದಿಂಗಳರಾತ್ರಿ ನಡೆದ ೪ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಬೆಳದಿಂಗಳ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷರ ಭಾವಚಿತ್ರ ಅನಾವರಣಗೊಳಿಸಿ ಉದ್ಘಾಟಿಸಿ ಮಾತನಾಡಿದರು.
ತುಳು ಸಾಹಿತ್ಯದಲ್ಲಿ ಪ್ರಸಿದ್ಧಿ ಹೊಂದಿದರೂ ಅದು ಕನ್ನಡದಲ್ಲಿ ಮೂಡುವ ಚಿಂತನೆಯ ಫಲ. ಮುಂಬಯಿಯ ಗಿಜಿಗಿಡುವ ಜೀವನ ಶೈಲಿಯ ನಡುವೆ ತುಳುನಾಡ ಹಸಿರು ಹುಲ್ಲಿನ ಮೇಲೆ ಕುಳಿತ ಇಬ್ಬನಿಯ ನೆನಪುಗಳು ಮರುಕಳಿಸಿ ಅವು ಸುಂದರ ಕಾವ್ಯಗಳಾಗುತ್ತವೆ. ಅದೇ ಕಲ್ಪನೆಯಲ್ಲಿ ಈ ಬೆಳದಿಂಗಳ ಸಾಹಿತ್ಯ ಸಮ್ಮೇಳನವೂ ಮೂಡಿಬಂದಿದೆ.
ಶಿಕ್ಷಣ, ಸಾಹಿತ್ಯಕ್ಕೆ ವಿಶೇಷ ಅನುದಾನ: ಸಚಿವ ಪೂಜಾರಿ
ಶಿಕ್ಷಣ, ಸಾಹಿತ್ಯ ಕ್ಷೇತ್ರಕ್ಕೆ ಸಮಾಜವನ್ನು ಬದಲಿಸುವ ಅದ್ಭುತ ಶಕ್ತಿಯಿದ್ದು ಸರ್ಕಾರ ೧೫,೦೭೮ ಕೋಟಿ ಅನುದಾನ ಬಜೆಟ್‌ನಲ್ಲಿ ಒದಗಿಸಿ ಅಕ್ಷರ ಕಾಳಜಿಯನ್ನು ಮೆರೆಯುತ್ತಿದೆ. ಮೇಲ್ಮನೆ ಎಂಬುದು ಸಾಹಿತಿ, ಬುದ್ದಿಜೀವಿಗಳ, ಉದ್ಯಮಿಗಳ ಸಮ್ಮಿಲನದ ಚಿಂತಕರ ಚಾವಡಿಯಾಗಿದ್ದು ಅದು ಪ್ರಜಾಪ್ರಭುತ್ವದ ಬಹು ದೊಡ್ಡ ದೇಗುಲ. ಅದೇ ನನಗೆ ಬಹುದೊಡ್ಡ ಶಕ್ತಿ ನೀಡಿದೆ ಎಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇ ಗೌಡ ಅವರು ಪ್ರಧಾನ ಆಕರ್ಷಣೆ ಆಗಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಉಡುಪಿ ಉಪ್ಪಾ ಅಧ್ಯಕ್ಷ ಆಸ್ಟ್ರೋ ಮೋಹನ್, ಹೆಬ್ರಿ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಸುಮಾ ಎನ್ ಅಡ್ಯಂತಾಯ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷರಾದ ನವೋದಯ ವಿದ್ಯಾಲಯದ ಪ್ರಾಂಶುಪಾಲ ಕೆ.ವಿ. ಸುರೇಶ್, ಡಾ. ಸಂತೋಷ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ್ ಬೋರ್ಗಲ್‌ಗುಡ್ಡೆ ನಿರೂಪಿಸಿ, ರಾಮಾಂಜಿ ವಂದಿಸಿದರು.
ಮಹಿಳೆ ಮತ್ತು ಮಹಿಳೆ ಗೋಷ್ಠಿ
ಹೆಬ್ರಿ: ೪ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆ ಮತ್ತು ಮಹಿಳೆ ಗೋಷ್ಠಿ ಕುಂದಾಪುರದ ಪಾರ್ವತಿ ಜಿ. ಐತಾಳ್ ಅಧ್ಯಕ್ಷತೆಯಲ್ಲಿ ನಡೆಯಿತು. ಗೋಷ್ಠಿಯ ಹೆಸರಿನಂತೆಯೇ ಸಮಾಜದಲ್ಲಿ ಸ್ತ್ರೀ ಯಾವತ್ತಿಗೂ ಜೊತೆಗಿರಬೇಕೇ ಹೊರತು ಪರಸ್ಪರ ದ್ವೇಶ ಕಟ್ಟಿಕೊಳ್ಳಬಾರದು ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಹೇಮಲತಾ, ಸಮಾಜಸೇವಕಿ ವರಂಗದ ಸುಜಾತಾ  ಲಕ್ಷ್ಮಣ್ ಅತಿಥಿಗಳಾಗಿದ್ದರು.. ನವೋದಯ ವಿದ್ಯಾಲಯದ ನೂರ್‌ಜಹಾನ್, ಸುನೀತ, ರಾಜೇಶ್ವರಿ  ವಿಚಾರ ಮಂಡಿಸಿದರು.

ಸಾಹಿತ್ಯ ಸಮ್ಮೇಳನದ ನವಪ್ರತಿಭೋತ್ಸವ ಮತ್ತು ಗೌರವ
ಹೆಬ್ರಿ : ಹೆಬ್ರಿಯ ಜವಾಹರ ನವೋದಯ ವಿದ್ಯಾಲಯ ಆವರಣದ ಗೌರೀಶ ಕಾಯ್ಕಿಣಿ ವೇದಿಕೆಯಲ್ಲಿ ಮೂಡುಬಿದರೆ ಶ್ರೀವಿದ್ಯಾಲಯ ಅರ್ಪಿಸುವ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಹೆಬ್ರಿ ಚಾರದ ಜವಾಹರ್ ನವೋದಯ ವಿದ್ಯಾಲಯದ ಸಹಕಾರದಲ್ಲಿ ಶುಕ್ರವಾರ ರಾತ್ರಿ ನಡೆದ ೪ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಬೆಳದಿಂಗಳ ಸಾಹಿತ್ಯ ಸಮಾರಾಧನೆ ನವಪ್ರತಿಭೋತ್ಸವ ಮತ್ತು ಗೌರವ ಕಾರ್ಯಕ್ರಮವನ್ನು ಅದ್ಭುತ ಸ್ಮರಣ ಶಕ್ತಿಯ ಬಾಲ ಪ್ರತಿಭೆ ಮೂಡುಬಿದಿರೆಯ ಅಯನಾ.ವಿ.ರಮಣ್ ೧೭೩ ಸಾಹಿತಿಗಳ ಹೆಸರನ್ನು ಉಚ್ಚರಿಸುವ ಮೂಲಕ  ಉದ್ಘಾಟಿಸಿದರು.
ಬಳಿಕ ಅವರು ತುಳುನಾಡಿನ ಭೂತಗಳ ಹೆಸರನ್ನು ಹೇಳುವ ಮೂಲಕ  ಗಮನ ಸೆಳೆದರು.
ಬೆಂಗಳೂರಿನ ಪ್ರಥ್ವಿ ಓಕುಡ (ಯಕ್ಷಗಾನ), ವೈಷ್ಣವಿ ಆರ್ ಮಣಿಪಾಲ(ಸಂಗೀತ),ಆರಾಧನಾ ಎನ್.ಕೆ,ಮಂಗಳೂರು (ಸಂಗೀತ),ಸುಮಿತ್ ಎಸ್ ಶೆಟ್ಟಿ,ಶಿವಮೊಗ್ಗ (ಯಕ್ಷಗಾನ) ಮತ್ತು ಲಾರೆನ್ಸ್ ಪಿಂಟೋ ಪಲಿಮಾರ್ (ಕಲೆ) ಭಾಗವಹಿಸುವರು. ಅಶ್ವಿನಿ ಕೊಂಡದಕುಳಿ(ಯಕ್ಷಗಾನ),ಪವನ್ ಕುಮಾರ್ ಕೆರ್ವಾಸೆ (ತೆಂಕು ತಿಟ್ಟು ಯಕ್ಷಗಾನ)ಮತ್ತು ಅದಿತಿ ಕೆ.ಟಿ ಪುತ್ತೂರು( ಶಾಸ್ತ್ರೀಯ ಸಂಗೀತ) ಪ್ರತಿಭಾ ಪ್ರದರ್ಶನ ನೀಡಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಬಾಲ-ಯುವ ಗೌರವ ಸ್ವೀಕರಿಸಿದರು.ನವೋದಯ ವಿದ್ಯಾಲಯದ ಸುಕೃತಿ ಮತ್ತು ಮಧುರ ಸ್ವಾಗತಿಸಿ, ಅಕ್ಷತಾ, ನಿಷ್ಮಾ ಕಾರ್ಯಕ್ರಮ ನಿರೂಪಿಸಿದರು.

Twitter Facebook Delicious Digg Favorites More

Twitter Facebook Delicious Digg Favorites More