ಚೆಲುವ ಮುಡುಬಿದಿರೆ ಆಳ್ವಾಸ್ ನುಡಿಸಿರಿಯಲ್ಲಿ ಬಿಡುಗಡೆ

ನುಡಿಸಿರಿಯಲ್ಲಿ 'ಚೆಲುವ ಮೂಡುಬಿದಿರೆ' ಪುಸ್ತಕ ಬಿಡುಗಡೆ ಮೂಡುಬಿದಿರೆ: ನುಡಿಸಿರಿ ಎರಡನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ಲೇಖಕ, ಪತ್ರಕರ್ತ ಶೇಖರ್ ಅಜೆಕಾರು ಅವರ "ಚಲುವ ಮೂಡುಬಿದಿರೆ" ಪುಸ್ತಕದ ಮೂರನೇ ಆವೃತ್ತಿ ಬಿಡುಗಡೆಗೊಂಡಿತು. ನುಡಿಸಿರಿಯ ಸರ್ವಾಧ್ಯಕ್ಷ ನಿಸಾರ್ ಅಹಮ್ಮದ್ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಚಿಂತಕರುಗಳಾದ ಡಾ. ಮಹಾಬಲೇಶ್ವರ್ ರಾವ್, ಅಡ್ಡೂರು ಕೃಷ್ಣರಾವ್, ಸ. ರ. ಸುದರ್ಶನ್, ನಾ. ದಾಮೋದರ್ ಶೆಟ್ಟಿ, ಲೇಖಕ ಶೇಖರ್ ಅಜೆಕಾರು ಜೊತೆಗಿದ್ದರು.
ಚೆಲುವ ಮೂಡುಬಿದಿರೆಯ ಮೊದಲ ಆವೃತ್ತಿ ಮೂಡುಬಿದಿರೆಯಲ್ಲಿ ೨೦೦೩ ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಮತ್ತು ಎರಡನೇ ಆವೃತ್ತಿ ಮೂಡುಬಿದರೆಯ ರಿಕ್ಷಾ ಪಾರ್ಕ್‌ನಲ್ಲಿ ೨೦೧೨ ರಲ್ಲಿ ವಾಹನ ಚಾಲಕ ಗುಮ್ಮಣ್ಣ ಅವರು ಬಿಡುಗಡೆ ಮಾಡಿದ್ದರು.
Twitter Facebook Delicious Digg Favorites More

 
Twitter Facebook Delicious Digg Favorites More