ಆಳ್ವಾಸ್ ನುಡಿಸಿರಿಯ ಅಧ್ಯಕ್ಷ ನಿಸಾರ್‍ ಅಹಮ್ಮದ್ ಅವರ ಭಾಷಣ

 ಈ ವರ್ಷದ ವಿವೇಚನೆಯ `ಕನ್ನಡ ಮನಸ್ಸು: ಜನಪರ ಚಳವಳಿಗಳು' ಎನ್ನುವ ಮುಖ್ಯ ವಿಷಯದ ಅರ್ಥೈಕೆಯಲ್ಲಿ ಪ್ರಯತ್ನ ಗಂಭೀರ ಆಲೋಚನೆಗೆ ಪ್ರೇರಿಸುವಂಥದ್ದು. ಈ ತಲೆಬರಹದ ಮೊದಲಿನ ಅರ್ಧದ ಪರಿಕಲ್ಪನೆಯಾಗಿರುವ `ಮನಸ್ಸು', ವೈಜ್ಞಾನಿಕ ನೆಲೆಯ ವಿಶ್ಲೇಷಣೆಗೆ ಪ್ರಚೋದಿಸುವಂಥದ್ದು. ಅದಕ್ಕೆ ಸೂತ್ರಪ್ರಾಯವಾದ ಸಮಂಜಸ ಲಕ್ಷಣ ವಿವರಣೆಯಾಗಲಿ, ಇತರ ಭೌತಿಕ ವಸ್ತುಗಳ ಹಾಗೆ ಕರಾರುವಾಕ್ಕಾದ ತಿಳಿವಳಿಕೆಯಾಗಲಿ ಸಾಧ್ಯವಾಗದು. ಏಕೆಂದರೆ ಅದು ಅಮೂರ್ತ ಮತ್ತು ಅನವಗಾಹ ಸ್ವರೂಪದ್ದು. ವಿಜ್ಞಾನ ಇಷ್ಟೊಂದು ಮುಂದುವರಿದಿದ್ದರೂ ಅದರ ಸ್ವರೂಪ ಅಥವಾ ಕ್ರಿಯಾವಿಧಾನದ ತಪಶೀಲುಗಳು ಮನುಷ್ಯನ ಪಾಲಿಗೆ ಕಗ್ಗಂಟಾಗಿಯೇ ಉಳಿದಿವೆ. ವಿಷಯದ ಸಮಾಲೋಚನೆಯ ಸೌಲಭ್ಯದ ಸಲುವಾಗಿ `ಮನಸ್ಸು' ಎಂಬುದರ ಲೋಕ ರೂಢಿಯ ಸ್ಥೂಲಾರ್ಥದ ಚೌಕಟ್ಟಿಗೆ ಬದ್ಧರಾಗಬೇಕಾಗಿರುವುದು ಸೂಕ್ತವೆನ್ನಿಸುತ್ತದೆ. ಅಂದರೆ ಸಂಕಲ್ಪ, ಇಚ್ಛಾಶಕ್ತಿ, ಸ್ವಭಾವ, ಗುಣ ತದಿತರ ನೆಲೆಗಟ್ಟಿನಲ್ಲಿ ಚಿಂತಿಸಬೇಕಾಗುತ್ತದೆ. ಕನ್ನಡಿಗರಿಗೆ ಪ್ರತ್ಯೇಕವೆನ್ನಬಹುದಾದ ಮನಸ್ಸಿದೆಯೆ? ಇದೆ ಎಂದು ಒಪ್ಪಿಕೊಳ್ಳುವ ಪಕ್ಷದಲ್ಲಿ ಅದು ಹೇಗೆ ಕನ್ನಡೇತರ ಮನಸ್ಸಿಗಿಂಥ ಭಿನ್ನ? ಎಂಬ ಪ್ರಶ್ನೆ ಬಾಧಿಸುವುದು ಸಹಜ.

ಇದಕ್ಕೆ ಸರಳ, ಸೂಕ್ತ ಉತ್ತರ ಅಸಾಧ್ಯ. ಆದರೂ ಕೆಲವೊಂದು ವಿಚಾರಗಳನ್ನು ಪರಿಶೀಲಿಸುವುದು ಲಾಭಕರವೆನ್ನಿಸುತ್ತದೆ. ಕನ್ನಡ ಮನಸ್ಸಿನ ಸಂಪೂರ್ಣ ಸ್ವಂತಿಕೆಯ ಪ್ರಶ್ನೆಗಿಂತ, ಅದರ ಕೆಲವೊಂದು ವೈಶಿಷ್ಟ್ಯಗಳ ಗುರುತಿಸುವಿಕೆ ಸಮಂಜಸವೆನ್ನಿಸುತ್ತದೆ. `ಭಾರತ ಜನನಿಯ ತನುಜಾತೆ'ಯಾದ ಕನ್ನಡಿಗರ ಮಾತೆಗೆ ತನ್ನ ಇತರ ಸಹಜಾತರಿಗಿರುವ ಹಲವು ಸದೃಶಪ್ರಾಯ ಗುಣಗಳಿರುವುದು ಸ್ವಾಭಾವಿಕವೆ. ಹೀಗೆ, ಆನುವಂಶೀಯವಾಗಿರುವುದರ ಜೊತೆಗೆ ನಿಡಿದಾದ ಕಾಲದ ಅನುಭವದಿಂದ ಆಜರ್ಿತವಾದವೂ ಇವೆ ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ. ಆದಿ ಕವಿ ಪಂಪ ಚಿತ್ರಿಸಿರುವ ಭೀಮಾಜರ್ುನರ ಕ್ಷಾತ್ರ, ಕರ್ಣನ ತ್ಯಾಗಶೀಲತೆಗಳು ಅನ್ಯ ದುರ್ಲಭ ಮತ್ತು ಭವ್ಯೋದಾತ್ತ ಅನ್ನಿಸುವಂತಹವು. ಅಷ್ಟೇ ಅಲ್ಲ, ಅವು ಪುರಾಣ ಗ್ರಹಿಕೆಯ ಪರಿಭಾವನೆಯ ಫಲಮಾತ್ರವಾಗಿರದೆ, ಸುತ್ತಮುತ್ತಲಿನ ಕನ್ನಡ ಜನ ಜೀವನದಲ್ಲಿ ಸ್ವತಃ ಕಂಡುಂಡ ಸನ್ನಿವೇಶ ಮತ್ತು ಸಮಾಜ ಜೀವನದ ಸ್ವಾನುಭವ ಪ್ರಭಾವದ ಪರಿಣಾಮವೂ ಇರಬೇಕು. ಇದರೊಂದಿಗೆ ಪಂಪನ ಕಾಲದ ಹಲವು ಬಗೆಯ ಕಾಲಧರ್ಮದ ಸೀಮಿತ ನಂಬಿಕೆಗಳು, ಸಂಕುಚಿತತೆಗಳು ಅವನ ಮುಕ್ತ ಸೃಜನಶೀಲ ಮನಸ್ಸನ್ನು ಕಟ್ಟುಪಾಡುಗಳಿಂದ ನಿರ್ಬಂಧಿಸಲು ಸಾಧ್ಯವಾಗದಿರುವುದು ಸೋಜಿಗವಾಗಿ ತೋರುತ್ತದೆ. ಇಲ್ಲದಿದ್ದರೆ 'ಮನುಷ್ಯ ಜಾತಿ ತಾನೊಂದೆ ವಲಂ' ಎನ್ನುವಂತಹ ವಿಶ್ವೋದಾರವಾದ ಹೃದಯೋದ್ಗಾರ ಹೊಮ್ಮುತ್ತಿರಲಿಲ್ಲ ಎನ್ನುವುದು ಕೂಡ ಚಿಂತನೀಯವೆನ್ನಿಸುತ್ತದೆ. ಶ್ರೀ ವಿಜಯ ವಿರಚಿತ `ಕವಿರಾಜಮಾರ್ಗ'ದಲ್ಲಿ ಪಂಡಿತ-ಪಾಮರ ಉಲ್ಲೇಖಿತ ವಾಕ್ಯದ ಕೊನೆಯ ಸಾಲುಗಳಲ್ಲೂ ಕನ್ನಡ ಮನಸ್ಸಿನ ಮತ್ತು ಕನ್ನಡ ನಾಡಿನ ವಿಶೇಷತೆಯ ಸೂಚನೆಯಿರುವುದು ಗಮನಾರ್ಹ. ವಸುಧೆಯ ಅಥರ್ಾತ್ ಧರಣಿ ಮಂಡಲದ ವಿಸ್ತೃತ ವ್ಯಾಪ್ತಿಯಲ್ಲಿ ಕನ್ನಡ ನಾಡು ಮತ್ತು ಜನತೆ ಬೆಸೆದುಹೋಗಿದ್ದರೂ ಕನ್ನಡತನವನ್ನು ನೀಗಿಕೊಳ್ಳದೆ, ಕೆಲವು ಹೆಚ್ಚುಗಾರಿಕೆಗಳಿಂದ ಪ್ರಸ್ಫುಟವಾಗಿ ಪ್ರಕಾಶಿಸುವ ಅಗ್ಗಳಿಕೆಯನ್ನು ಗಳಿಸಿಕೊಂಡಿರುವುದು ಸುವೇದ್ಯ. ಈ ಕಾರಣಕ್ಕಾಗಿಯೇ ಇದನ್ನು ಜಿ.ಪಿ. ರಾಜರತ್ನಂ ಅವರು `ವಸುಧಾ ವಲಯ ವೀಲಿನ ವಿಶದ ವಿಷಯ ವಿಶೇಷಂ' ಎನ್ನುವುದು ಕನ್ನಡಿಗರ ಪಾಲಿನ ಅಷ್ಟದಶಾಕ್ಷರೀ ಮಂತ್ರ ಎಂದಿದ್ದಾರೆ. ಕಪ್ಪೆ ಅರಭಟ್ಟನ ಶಾಸನೋಕ್ತ ಸುಂದರ ಲಿಪಿಯ ಲಿಖಿತ ಕೂಡ ಕನ್ನಡ ಮನಸ್ಸಿನ ಲಾಗಾಯ್ತಿನ ಹಿರಿಮೆಯನ್ನು ಸ್ಮರಣಾರ್ಹವಾಗಿ ಬಿಂಬಿಸುತ್ತದೆ. ಮನ ಮಿಡಿಯುವ `ಗೋವಿನ ಹಾಡು'ವಿನ ಸಂದೇಶದ ಮುಖ್ಯಾಶಯ ಕನ್ನಡ ಜನತೆಯ ಸತ್ಯಸಂಧತೆಯ ಗ್ರಹಿಕೆಗೆ ತೋರುಗಂಬವಾಗುತ್ತದೆ. ಇಂತಹ ಕೆಲವೊಂದು ಚಿತ್ರಣಗಳೂ ಸಾಹಿತ್ಯಕ, ಸಾಮಾಜಿಕ ಸ್ಥಿತ್ಯಂತರಕ್ಕೆ ಮತ್ತು ಆಗಾಗಿನ ಅನ್ಯಾಕ್ರಮಣದ ವಿರುದ್ಧದ ಸೆಣಸಾಟಗಳ ಸನ್ನದ್ಧತೆಗೆ ಪ್ರೇರಕವಾದ ಆಂದೋಲನಗಳೂ ಕನ್ನಡ ಮನಸ್ಸಿನ ಚಲನವಲನಗಳ ಅರಿಯುವಿಕೆಯಲ್ಲಿ ಮಾನಸ್ತಂಭಗಳಂತೆ ದಾಖಲಾಗಿವೆ. ಮೂಲತಃ ಕನ್ನಡಿಗರದು ಸಮನ್ವಯ, ಸವರ್ಾನುನಯ ಮತ್ತು ಸಹ ಜೀವಿಗಳೊಂದಿಗೆ ಸಹನೆಯಿಂದ ಸಹಕರಿಸಿಕೊಂಡು ಹೋಗುವ ಹುಟ್ಟು ಸ್ವಭಾವ. ಇದರಿಂದ ಒಂದು ಸೌಹಾರ್ದದ ಹದ ಮತ್ತು ಮಾಗು ಮೈಗೂಡಿಕೊಂಡಿದೆ. ಜೋಗದ ದೀಪ್ತಿಮಂತ ಸಿರಿಯಂತಹ, ತುಂಗೆಯ ಸುಸಮೃದ್ಧ ತುಂಬು ತೆನೆಯಂತಹ, ಸಹ್ಯಾದ್ರಿಯ ರಾಮಣೀಯಕ ಎತ್ತರದ ಲೋಹದ ಹಾಗೂ ಹೊನ್ನು ಮತ್ತಿತರ ಖನಿಜಗಳ ಹೊಳಪಿನಂತಹ, ಶ್ರೀಗಂಧ ಹೆತ್ತೇಗಗಳ ನಿತ್ಯಹರಿದ್ವರ್ಣದಂತಹ ಸವರ್ೋಪಕಾರಿ ಮತ್ತು ಸುಸಂಪನ್ನ ಅಂತರಂಗ ಮತ್ತು ಜೀವನಾದರ್ಶದ ವಿಶಿಷ್ಟತೆ ಕನ್ನಡ ಜನಪದದ್ದು. ಹಾಗೆಯೇ ಹಲವುಗಳಲ್ಲಿ ಕವಲಾಗದ, ಕುಲವೆನ್ನುವುದರಲ್ಲಿ ಸೇದಿಹೋಗದ ಮತ್ತು ಭೇದದೆಣಿಕೆಯ ಇಲ್ಲವೇ ಕುತ್ಸಿತ ಕರುಬುಗಳ ಜೀವಿತ ರೀತಿಯಲ್ಲ. ಈ ಮಾತು ಭಾವಾತಿರೇಕದ ಅಭಿಮಾನೋದ್ಗಾರವಲ್ಲ; ಸಮಷ್ಟಿ ಸಲ್ಲಕ್ಷಣದ ಸತ್ಯಸ್ಥಿತಿಯ ಉವಾಚ. ಕನ್ನಡಿಗರ ಈ ಗುಣಾತಿಶಯವೇ ಅವರಿಗೆ ಮುಳುವಾಗಿದ್ದರೂ ಇಂತಹ ಸದ್ಗುಣಗಳ ದಟ್ಟೈಕೆ ಮತ್ತೆ ಯಾರಲ್ಲೂ ಅನುಭವವೇದ್ಯವಾಗದೆಂಬುದು ಸತಸ್ಯಸತ್ಯ ಸಂಗತಿ. ಇನ್ನು ಈ ಚಚರ್ೆಯ ಉತ್ತರಾರ್ಧದ ಬಹಿರಂಗ ಸ್ವರೂಪದ ಜನಪರ ಚಳವಳಿಗಳ ಪರಿಶೀಲನೆಗೆ ಬರೋಣ. ಚಳವಳಿ ಎನ್ನುವುದು ಜನತೆಯ ಸಾಮೂಹಿಕ ಸಂಕಲ್ಪದ ತೀವ್ರಾಭಿವ್ಯಕ್ತಿ. ಈಡೇರಿಕೆಗಳ ಪ್ರಯತ್ನಶೀಲ ಪ್ರವೃತ್ತಿಯ ಪ್ರತೀಕ. ಅದು ಮಾನವ ಸಮಾಜದ ಜೀವಂತವಾದ ಕ್ರಿಯಾತ್ಮಕ ಎಚ್ಚರದ ಮತ್ತು ನ್ಯಾಯ ಪ್ರಾಪ್ತಿಯ ಚಿರಂತನ ಚಲನವಲನ ಪ್ರಕ್ರಿಯೆ. ಮನುಷ್ಯರ ಅಪರಾಧೀನ ಜೀವನದ ಸೌಖ್ಯ ಸಮಾಧಾನಗಳ, ಸ್ವಾಸ್ಥ್ಯ ಸ್ವಾಭಿಮಾನಗಳ ಸ್ಥಾಪನೆಗಾಗಿ, ಅಕ್ರಮ ಹಾಗೂ ಬಲೋದ್ಬಂದಿಯ ದೆಸೆಯಿಂದ ವಂಚಿತವಾದ ಸೌಕರ್ಯ, ಅವಕಾಶಗಳ ಮರು ಪಡೆಯುವಿಕೆಗಾಗಿ ಸಮುದಾಯವೊಂದು ಸಂಘಟಿತವಾಗಿ ಪ್ರತಿಭಟಿಸುವ ಅನನ್ಯ ವಿಧಾನ. ಅದು ಹೆಚ್ಚು ವ್ಯಾಪಕವೂ ರಾಷ್ಟ್ರವೊಂದರ ಜನಾಂಗದ ಆದ್ಯಂತ ಪ್ರತಿಕ್ರಿಯಾ ರೂಪಿಯೂ ಆದಾಗ ಆಂದೋಲನವೆನ್ನಿಸುತ್ತದೆ. ಆಜನ್ಮ ಹಕ್ಕೆನ್ನುವ ಭೂಪ್ರದೇಶ, ಸಂಪನ್ಮೂಲ, ಭಾಷೆ ಸಂಸ್ಕೃತಿ ಇತ್ಯಾದಿಗಳ ಭದ್ರತೆ ಮತ್ತು ಸಂಪನ್ನತೆಗಳಿಗಾಗಿ ಕೆಲವು ಪ್ರಜ್ಞಾಶೀಲರ ಮಾರ್ಗದರ್ಶನದಲ್ಲಿ ಜನ ಸಮೂಹ ಒಂದುಗೂಡಿ ನಡೆಸುವ ಸಂಘಟಿತ ಹೋರಾಟವೇ ಚಳವಳಿ ಎನ್ನಿಸುತ್ತದೆ. ಇದರ ಯಶಸ್ಸಿನಿಂದ ಮೇಲರಿಮೆ, ಹೆಮ್ಮೆಯ ಹೆಚ್ಚಳ, ಸಾಫಲ್ಯ ಸಾರ್ಥಕ್ಯದ ಧನ್ಯ ಭಾವ ಉತ್ಕಷರ್ಿಸುವುದಲ್ಲದೆ, ಇದು ಭವಿಷ್ಯದ ಆಶೋತ್ತರಗಳಿಗೆ, ಪುರೋಭಿವೃದ್ಧಿಗೆ ತಳಹದಿಯಾಗುತ್ತದೆ. ಒಂದಲ್ಲ ಒಂದು ಬಗೆಯಲ್ಲಿ, ಒಂದಲ್ಲ ಒಂದು ಸಂದರ್ಭದಲ್ಲಿ, ಪ್ರಪಂಚದ ಒಂದಲ್ಲ ಒಂದು ಭಾಗದಲ್ಲಿ, ಒಂದಲ್ಲ ಒಂದು ಕಾರಣಕ್ಕೆ ಸಣ್ಣ ಪ್ರಮಾಣದಲ್ಲೋ ವಿಸ್ತೃತವಾಗಿಯೋ ನೆಮ್ಮದಿಯುತ ಬದುಕಿನ ಅನಿವಾರ್ಯವೆಂಬಂತೆ ಚಳುವಳಿಗಳು ಘಟಿಸುತ್ತಲೇ ಇರುತ್ತವೆ. ಹೀಗೆ, ಪ್ರಾಚೀನ ಕಾಲದಿಂದ ವಿವಿಧ ಕಾರಣಗಳಿಗೆ ಅವ್ಯಾಹತವಾಗಿ ನಡೆದಿರುವ ಈ ಪ್ರತಿಭಟನಾ ಪರಂಪರೆಯಿಂದ ಮಾನವನ ಧೈರ್ಯ ಸಾಹಸ ಪ್ರವೃತ್ತಿಗೆ, ನಾಗರಿಕತೆ ಸಭ್ಯತೆಗಳ ಬಲವರ್ಧನೆಗೆ ಇನ್ನಿಲ್ಲದ ಇಂಬು ದೊರೆತಿದೆ. ಯಾವುದೇ ಜನಪರ ಹಿತೋದ್ದೇಶದ ಹೋರಾಟ ಸಾಮಾಜಿಕರ ವಾಸ್ತವ ನೆಲೆಯ ಐಹಿಕ ಏಳಿಗೆಗಷ್ಟೇ ಸೀಮಿತವಾಗದೆ, ಭಾವಾತ್ಮಕ ಭೂಮಿಕೆಯಲ್ಲೂ ಗಮನಾರ್ಹವಾಗಿ ಕಾರ್ಯಶೀಲವಾಗಿರುವುದನ್ನು ಮನುಷ್ಯೇತಿಹಾಸ, ಅದರಲ್ಲೂ ನಮ್ಮ ಸಾಹಿತ್ಯ ಮನದಟ್ಟು ಮಾಡಿಸುತ್ತದೆ. ಕನ್ನಡದ ಪ್ರಾಚೀನ ಕವಿಗಳ ಭಾಷೆ, ಛಂದಸ್ಸು, ವಸ್ತು ಹಾಗೂ ಅಭಿವ್ಯಂಜನೆಗಳ ಬಗೆಗಿನ ವಿದ್ವತ್ ಸೀಮಿತ ಚವರ್ಿತಚರ್ವಣತೆಯನ್ನು, ಅಳ್ಳಕವಾದ ಧಮರ್ೀಯ ಹಾಗೂ ಆಸ್ಥಾನ ಸಂಪ್ರೀತ್ಯರ್ಥದ ಸಂಪ್ರದಾಯವನ್ನು ಪ್ರಶ್ನಿಸಿ, ನವ ಮನ್ವಂತರಕ್ಕೆ ಹಾತೊರೆದ ಸೃಜನಶೀಲ ಕನ್ನಡ ಮನಸ್ಸಿನ ತುಡಿತ ಪಂಪನಿಂದ ನವೋದಯರವರೆಗೆ ಸಾಗಿ ಬಂದಿರುವ ಪರಿಯನ್ನು ಚಳವಳಿಯ ಮೂಲಕ ಗುರುತಿಸಬಹುದು. ಕಂದ ವೃತ್ತ ಷಟ್ಪದಿಗಳನ್ನು ಮತ್ತು ಅವುಗಳ ಮುಖೇನ ವಾಸ್ತವಾತೀತ ಪೌರಾಣಿಕ ಕಥನಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಜನ ಜೀವನಕ್ಕೆ ನಿಕಟವಾದ ವಿಷಯ ಮತ್ತು ಶತಕ, ರಗಳೆ, ತ್ರಿಪದಿಗಳಂತಹ ಹೊಸ ಭಾಷಾಭಿವ್ಯಕ್ತಿಯ ಮಾರ್ಗವನ್ನು ಅನ್ವೇಷಿಸಿಕೊಂಡಿದ್ದು, ಅದರಲ್ಲೂ, ಸಾರ್ವತ್ರಿಕವೂ ಸಾಮುದಾಯಿಕವೂ ಆದ ನ್ಯಾಯಪರ ಚಳವಳಿಗಾಗಿ ವಚನ ರೀತಿಯನ್ನು ಬಳಕೆಗೆ ತಂದದ್ದು ಅಭೂತಪೂರ್ವ ಬೆಲೆಯುಳ್ಳ ಬೆಳವಣಿಗೆ. ಇದರೊಡನೆ ಭಕ್ತ ಜನರೊಂದಿಗೆ ಹೃದಯಾಪ್ತ ಸಂವಾದಕ್ಕೆ ಅನುವಾಗಬಹುದಾದ ನಮ್ಮ ಅಪೂರ್ವ ದಾಸ ಸಾಹಿತ್ಯ ಪರಂಪರೆ ದೇಣಿಗೆಯೂ ಪ್ರಶಂಸನೀಯವಾದದ್ದು. ಚಳವಳಿ ಯಾವಾಗಲೂ ಸೌಮ್ಯ ರೂಪದ್ದೋ, ಸಾತ್ವಿಕಾಂಶ ಸಂಪನ್ನವೋ ಆಗಿರಬೇಕೆಂಬ ನಿಯಮವಿಲ್ಲ. ಅದರಲ್ಲಿ ಕೆಲವೊಮ್ಮೆ ಅಹಿತಾಂಶಗಳೂ ವಿವೇಕರಹಿತ ವರ್ತನೆಗಳೂ ಕಿಡಿಗೇಡಿ ಘಟನೆಗಳೂ ನುಸುಳಿಕೊಂಡು ಕೀತರ್ಿಗೆ ಕೆಸರನ್ನು ಎರಚಿರುವುದು ಸುಳ್ಳಲ್ಲ. ಬೇರೆ ಬೇರೆ ಸ್ವಭಾವ, ಮನೋಭಾವಗಳ ಒಕ್ಕೂಟದ ಪರಿಣಾಮವಾಗಿ, ವ್ಯಕ್ತಿಗತವಾದ ಆಮಿಷವಶ ದೌರ್ಬಲ್ಯದ ಫಲವಾಗಿ ಚಳವಳಿಯೊಂದು ಧಾತು ವಿಕಲಗೊಂಡು ದಿಕ್ಕೆಟ್ಟು ಕರ್ತವ್ಯವಿಮುಖಿಯಾಗುವ ನಿದರ್ಶನಗಳು ನಮ್ಮ ಮುಂದಿವೆ. ಜಾತಿ, ಧರ್ಮ, ರಾಜಕೀಯ, ಪ್ರಾದೇಶಿಕ ಭೇದಭಾವ, ಗುಂಪುಗುಳಿತನ ಮತ್ತು ಸ್ವಪ್ರತಿಷ್ಠೆಯ ನಿಮಿತ್ತ ಸದುದ್ದೇಶ ಹಾಗೂ ನ್ಯಾಯಯುತವಾದ ಸಂಘಟನೆ ಶಿಥಿಲವಾಗಿ, ಅಚಲ ಭರವಸೆ ತಳೆದ ಅಸಂಖ್ಯ ಜನ ಸಾಮಾನ್ಯರಿಗೆ ಎರಡು ಬಗೆದಿರುವ ನಿದರ್ಶನಗಳು ವಿರಳವಲ್ಲ. ಹಿಂದೆ ಆಗಿರುವ ವೈಫಲ್ಯ ಮತ್ತು ಪ್ರಮಾದಗಳು ಪುನರಾವತರ್ಿಸದಂತೆ, ಮುಂದಿನ ಗುರಿಯ ಸರಿಯಾದ ತಿಳಿವಳಿಕೆಯಿಂದ ಋಜು ಪಥದಲ್ಲಿ ಮುನ್ನಡೆಯುವ ವ್ರತವನ್ನು ತೊಟ್ಟ ಕಾರ್ಯಸಾಧಕ ವಿವೇಕವಂತ ಮುಂಚೂಣಿಗಾರರು ಮತ್ತವರ ಅಸಂಖ್ಯ ಬೆಂಬಲಿಗರು ತಯಾರಾಗಬೇಕಾದ ತುತರ್ು ಇವೊತ್ತಿನದು ಎಂಬುದು ನಿವರ್ಿವಾದ. ಯಾವುದೇ ಚಳವಳಿ ಕಾಲ ಕಳೆದಂತೆ ಮುಂಚಿನ ನಿಷ್ಠೆ, ಮೊನಚು, ನೇರತೆ, ಶಿಸ್ತುಗಳನ್ನು ಕ್ಷೀಣಿಸಿಕೊಳ್ಳುವುದು ನೋವಿನ ಸಂಗತಿ. ಕನ್ನಡ ಪರ ಚಳವಳಿ ಸಾವಯವತೆಯ, ಸಕಲ ಸಮಸ್ಯೆಗಳ ಸಮಗ್ರ ಸಂಕೇತವಾಗಿದೆ. ಭಾಷಿಕ, ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳ ಹಕ್ಕೊತ್ತಾಯದ ತೀವ್ರತೆಯ ಮತ್ತು ತಡೆಯಿರದ ಮುನ್ನಡೆಯ ಚೈತನ್ಯಶೀಲ ಸಂಘಟನೆಯಾಗಿದೆ. ಈ ಸಮಸ್ಯೆಗಳ ಪರಿಹಾರದಲ್ಲಿ ಯಾವೊಂದು ಅಸಫಲವಾದರೂ ಇತರ ಎಲ್ಲವಕ್ಕೂ ಊನ ತಟ್ಟಿದಂತೆಯೇ. ಇದರ ಜಾಣ ಮರೆವು ಇಲ್ಲವೇ ಸಹಜವಾದ ಕೊರತೆ, ಏಕೀಕರಣ ಆಗಿ ಅರ್ಧ ಶತಮಾನ ಕಳೆದಿದ್ದರೂ ನಮ್ಮ ನಾಡವರ ಸಂಕಷ್ಟ ಪರಂಪರೆಯ ತಲಕಾವೇರಿಯಂತಿದೆ. ನಾಡು ನುಡಿ ಮತ್ತು ನಾಡಿನವರ ಹಿತ ರಕ್ಷಣೆಯನ್ನು ಕೆಲವೇ ವ್ಯಕ್ತಿಗಳ, ಸಂಘ ಸಂಸ್ಥೆಗಳ ಹೆಗಲಿಗೆ ವಗರ್ಾಯಿಸಿ ತಾವು ತಟಸ್ಥರಾಗಿ, ಯಥಾಸ್ಥಿತಿ ಬದ್ಧರಾಗಿ ನಿರುಮ್ಮಳವಾಗಿ ಬದುಕನ್ನು ಸಾಗಿಸುವುದು ಯಾವುದೇ ಪ್ರದೇಶದ ವಾರಸುದಾರರೆನ್ನಿಸಿಕೊಂಡಿರುವ ವ್ಯಕ್ತಿಗಳಿಗೆ ಹಾಗೂ ಸಮಾಜಕ್ಕೆ ಆರೋಗ್ಯದ ಲಕ್ಷಣವೆನ್ನಿಸುವುದಿಲ್ಲ. ಇಂತಹ ಧೋರಣೆ ಸರ್ವಗ್ರಾಹಿ ಕನ್ನಡ ಮನಸ್ಸಿನ ಸಡಿಲಿಕೆ ಮತ್ತು ವಿಘಟನೆಗಳಿಗೆ ಕಾರಣವಾಗುತ್ತದೆ. ಈ ವಿಷಯದಲ್ಲಿ ತನ್ನ ತನ್ನ ಪರಿಮಿತಿಯಲ್ಲೇ ಸಾಧ್ಯವಾದದ್ದನ್ನು ಮಾಡುವುದು, ತನ್ಮೂಲಕ ನೇರವಾಗಿಯೋ, ಪರೋಕ್ಷವಾಗಿಯೋ ಪಾಲ್ಗೊಳ್ಳುವುದು ಪ್ರತಿ ಸಾಮಾಜಿಕನ ಹೊಣೆಯಾಗಿದೆ. ಕನ್ನಡದಲ್ಲಿ ಜನಪರ ಚಳವಳಿಯ ಒಂದು ನಿಡಿದಾದ ಪರಂಪರೆಯೇ ಇದೆ. ಸ್ವಾತಂತ್ರ್ಯ ಸಂಗ್ರಾಮದ ನೆರಳಿನಲ್ಲೇ ಹೆಜ್ಜೆಯಿಟ್ಟು ಹಲವಾರು ವರ್ಷಗಳ ಹೋರಾಟದ ಅನಂತರ 1956ರ ನವೆಂಬರ್ ಒಂದರಂದು ಕನ್ನಡ ನೆಲ ಮತ್ತು ಜನತೆ ಭೌಗೋಳಿಕವಾಗಿ ಹಲವು ಶತಮಾನಗಳ ಬಳಿಕ ಏಕೀಕೃತಗೊಂಡವು. ಈ ಒಗ್ಗೂಡಿಕೆಯ ಫಲಶ್ರುತಿಯಾಗಿ ನಮಗೆ ಮತ್ತು ನಮ್ಮ ಅಭಿಮಾನಕ್ಕೆ ಲಾಭದಾಯಕ ಹೆಚ್ಚಳ ದೊರಕಿದರೂ ಕೆಲವೊಂದು ಭೂಭಾಗಗಳನ್ನು ಕಳೆದುಕೊಂಡದ್ದಲ್ಲದೇ ಪರಭಾಷಿಕರ ಅದಮನೀಯ ವಲಸೆಯನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಮತ್ತದರ ದೆಸೆಯಿಂದ ಅನೇಕ ಸೌಲಭ್ಯ ಹಾಗೂ ಅವಕಾಶಗಳಿಗೆ ಎರವಾಗಿರುವುದೂ ವಾಸ್ತವ ಸಂಗತಿ. ಇದರಿಂದ ಐಹಿಕವಾದ ಕಷ್ಟನಷ್ಟಗಳಲ್ಲದೆ, ಭಾವಾತ್ಮಕ ಸ್ವರೂಪದ ಮಾನಾಭಿಮಾನ, ಆತ್ಮಗೌರವ ಮತ್ತು ಹೆಮ್ಮೆ ಪ್ರತಿಷ್ಠೆಗಳನ್ನು ನೀಗಿಕೊಂಡು ಅನಾಥ ಭಾವವನ್ನು ಅನುಭವಿಸುತ್ತಿರುವುದೂ ಸಟೆಯಲ್ಲ. ಈ ಪರಿಸ್ಥಿತಿಯನ್ನು ಅರವತ್ತರ ದಶಕದಲ್ಲಿ ಹೋಗಲಾಡಿಸಲು ಅನೇಕಾನೇಕ ಧೀಮಂತ ಸ್ತುತ್ಯ ಚೇತನರೂ ಅವರ ಸಹವತರ್ಿಗಳೂ ಮತ್ತು ಜನ ಸಾಮಾನ್ಯ ಹೋರಾಟಗಾರರೂ ಪ್ರಯತ್ನಶೀಲರಾದದ್ದು ನಾಡಿನ ಆಗುಹೋಗುಗಳ ಇತಿಹಾಸದಲ್ಲಿ ಜ್ವಲಂತ ಅಧ್ಯಾಯವೆನ್ನಿಸಿದೆ. ಮೊದಮೊದಲು ಅಷ್ಟೇನೂ ಅನುಕೂಲ, ನೆರವು, ಹೆಸರು, ಸಂಖ್ಯೆ, ಉತ್ತೇಜನಗಳಿರದ ಸಂಘಟನೆಯೊಂದು ಸಾರ್ವಜನಿಕವಾಗಿ ಮುಂದಡಿಯಿಟ್ಟು ಸಾಗಿದಂತೆಲ್ಲ, ಮೇಲ್ಕಾಣಿಸಿದ ಪುಷ್ಟಿಯ ಅಂಶಗಳನ್ನು ಮೈಗೂಡಿಸಿಕೊಂಡಾಗ ಒಳ ತಿಕ್ಕಾಟ, ಹುರುಡು ತಲೆಎತ್ತುತ್ತವೆ. ಮುಖಂಡರಿಗೆಂತೋ ಅಂತೆಯೇ ಇದು ಸಹ ಸಂಘರ್ಷಕರ ಪಾಲಿಗೆ ಅಗ್ನಿದಿವ್ಯದ ಸತ್ವಪರೀಕ್ಷೆಯ, ಮನಸ್ಸಾಕ್ಷಿಗೆ ಸವಾಲೆಸೆಯುವ ಸಮಯಾವಧಿ. ಕಟ್ಟೆಚ್ಚರ ಆತ್ಮಾವಲೋಕನಗಳಿಂದ, ಸಂಯಮ ಸದ್ವಿವೇಚನೆಗಳಿಂದ ಜಯಶೀಲರಾಗಿ ಕೃತಾರ್ಥರಾಗುವ ಪ್ರಯತ್ನದಲ್ಲಿ ಪರೀಕ್ಷಾರೂಪದ ಘಟ್ಟ. ನಮ್ಮ ನಾಡಿನ ಕೆಲವು ಉನ್ನತ ಧ್ಯೇಯಾದರ್ಶದ ಸಮಷ್ಟಿ ಕಲ್ಯಾಣಕಾರಿ ಚಳವಳಿಗಳು ಎಡವಿರುವುದು, ಜನತೆಯ ವಿಶ್ವಾಸವನ್ನು ಕಳೆದುಕೊಂಡು ನೆಲ ಕಚ್ಚಿರುವುದು ಇಂತಹ ಸಂದಿಗ್ಧಾವಸ್ಥೆಯಲ್ಲಿ. ಚಳವಳಿಗಳ ಬಗೆಗಿನ ಇನ್ನೊಂದು ನಿಟ್ಟಿನ ನೋಟವೂ ಆಲೋಚನಾರ್ಹ. ಯಾವುದೇ ಚಳವಳಿ ತನ್ನ ತಾರುಣ್ಯಾವಸ್ಥೆಯಲ್ಲಿ ಹುಮ್ಮಸ್ಸಿನ ಉತ್ಸಾಹದ ಹುಚ್ಚು ನೆರೆಯಾಗಿ, ಅಪೇಕ್ಷಿತ ಆಶಯ ನನಸಾದದ್ದರ ಮೈಮರೆತದಲ್ಲಿ ಮುಂದಿನ ಜವಾಬ್ದಾರಿಗಳನ್ನು ಮರೆಯುವುದೋ ಅವಗಣಿಸುವುದೋ ಮಾಮೂಲು ವಿಚಾರ. ಹೀಗೆ ನೆರವೇರಿಕೆಯ ತಣಿವಿನಲ್ಲಿ ಮುಗಿವು ಕಂಡರೆ, ಭವಿಷತ್ಕಾಲದಲ್ಲಿ ಕಾಯರ್ೋನ್ಮುಖರಾಗಲು ಸಮುದಾಯವನ್ನು ಪ್ರಚೋದಿಸದಿದ್ದರೆ ಅದು ಅರೆ ಯಶಸ್ವಿಯೆಂದೇ ಎಣಿಸಬೇಕು. ಚಳವಳಿಯೇನಿದ್ದರೂ ಜನಪದದ ಮನಸ್ಸಿಗೆ ಕವಿದಿರುವ ವಿಸ್ಮೃತಿ ಅಲಕ್ಷ್ಯಗಳ ಬೂದಿಯನ್ನು ಕೊಡವಿ, ಸುಪ್ತ ಜಾಗೃತಿಯ ಕೆಂಡವನ್ನು ನಿಗಿನಿಗಿಸುವಂತೆ ಹೊರ ಮೆರೆಸುವ ಅನಾವರಣ ಪ್ರಕ್ರಿಯೆ. ಆ ಕೆಂಡ ಕಾವಾರದೆ ಸಾರ್ವಜನಿಕ ಹಿತಕ್ಕೆ ಬಳಕೆಯಾಗಬೇಕಾದರೆ, ಆಗಾಗ್ಗೆ ಅದಕ್ಕೆ ಜನ ಸಮೂಹದ ಆಸಕ್ತಿ ತುಡಿತಗಳ ಉರುವಲು ಪೂರೈಕೆಯಾಗುತ್ತಿರಬೇಕು. ಆನುಕೂಲ್ಯದ ಒತ್ತಾಸೆಯೂ ಒದಗಬೇಕು. ಚಳವಳಿ ಸದ್ಯದ ಆಶಾಪೂತರ್ಿಯ ಸ್ಥಾವರ ನಿಲ್ದಾಣವಾಗದೆ, ಸತತ ಎಚ್ಚರದ ಚೈತನ್ಯಶೀಲ ವಾಹನವಾಗಬೇಕು. ಸಾಂದಭರ್ಿಕವನ್ನು ಸಾರ್ವತ್ರಿಕವಾಗಿಸುವ ಸೀಮಾತೀತ ಸಾಮಥ್ರ್ಯ ನಿಜವಾದ ಜನಪರ ಚಳವಳಿಗಿದೆ. ದೊಡ್ಡ ಮಟ್ಟದ ಸಾಮೂಹಿಕ ಜನಾಗ್ರಹಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಅದು ತಂತಾನೇ ಅಪೇಕ್ಷಿತ ಫಲವನ್ನು, ಯಶಸ್ಸಿನ ಗಳಿಕೆಯನ್ನು ಜನಗಳ ಬದುಕಿನ ಹೊಸ್ತಿಲಿಗೆ ತಂದೊದಗಿಸುವುದಿಲ್ಲ. ಹೀಗಾಗಿ ಚಳವಳಿ ಒಂದು ರಹದಾರಿ, ಒಂದು ಪ್ರಣಾಳಿಕಾ ಸ್ವರೂಪದ ವಾಹಕವಷ್ಟೆ. ವ್ಯವಹಾರದ ಮಾತಿನಲ್ಲಿ ಹೇಳುವುದಾದರೆ ಅದೊಂದು ಶಿಫಾರಸ್ಸು ಪತ್ರ, ಹುಕುಂನಾಮೆ. ಅದು ಸುಖಾಸನ ಶಯ್ಯೆಯಲ್ಲ, ಮುಂದುವರಿಕೆಯ ಮೆಟ್ಟಿಲೇರುವೆ. ಅದರ ಬಲದಿಂದ, ವರ್ಚಸ್ವೀ ಕಾರ್ಯಕಾರಿತೆಯ ಮಾರ್ಗದಿಂದಲೋ; ರಾಜಕಾರಣ, ಆಡಳಿತ ವ್ಯವಸ್ಥೆ, ಇಲಾಖೆ, ಸಂಸ್ಥೆ, ಅಧಿಕಾರಶಾಹಿ, ಮಾಲೀಕ ಮತ್ತಿತರ ಬಧಿರ ಶಕ್ತಿಗಳ ನಿರಾಸಕ್ತಿ, ನಿರ್ಲಕ್ಷ್ಯ, ನಿಷ್ಕ್ರಿಯತೆಗಳನ್ನು ಪದೇ ಪದೇ ತಿವಿದೋ ಕಾರ್ಯವನ್ನು ಕೈಗೂಡಿಸಿಕೊಳ್ಳುವ ಹವಣು, ಜಾಣ್ಮೆ, ವ್ಯಕ್ತಿ ನೆಲೆಯ ಪರಿಶ್ರಮದಿಂದ ಮಾತ್ರ ಸಾಧ್ಯ. ನಮ್ಮ ನೆರೆ ರಾಜ್ಯದವರಿಗೆ ಈ ವಿದ್ಯೆ ಅಂಗೈ ನೆಲ್ಲಿ. ತಮ್ಮ ಒಳಿತನ್ನು ಸಾಧಿಸಿಕೊಳ್ಳುವ ಹಲವೆಂಟು ಹುನ್ನಾರುಗಳ ದೃಷ್ಟಾಂತಗಳು ನಮ್ಮ ಕಣ್ಣೆದುರಿಗೆ ಇವೆ. ಅದರಲ್ಲೂ, ಎಡೆಬಿಡದ ಹೋರಾಟಗಳ ದ್ವಾರಾ ನಾವು ನಡೆಸುವ ನ್ಯಾಯಯುತ ಚಳವಳಿಗಳ ಫಲಿತಗಳಿಗೆ ಒಳಗೊಳಗೇ ವಶೀಲಿಯ ಕರಾಮತ್ತು ನಡೆಸಿ ಗುಪ್ತ ಮಾರ್ಗದಿಂದ ಕಡಾಣಿ ಹಾಕುವುದು ಅವರಿಗೆ ಜಾಯಮಾನ. ಅದಕ್ಕೆ ಹಲವು ಉದಾಹರಣೆಗಳಿದ್ದರೂ ನದಿ ಮತ್ತು ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದವು ಕನ್ನಡಿಗರ ಮನಸ್ಸಿನಿಂದ ಅಳಿಸಲಾರದಂಥವು. ನಿಂದಾಪಮಾನಗಳಿಗೆ ಗುರಿಯಾಗಿರುವ ನಮ್ಮನ್ನೂ ನಮ್ಮ ನಾಡನ್ನೂ ಅಷ್ಟಪದಿ ಹಿಡಿತದಿಂದ ಒಳ ಸಂಚಿಗರು ಘೇರಾಯಿಸಿರುವಾಗ, ಮುಂದೆಯಾದರೂ ಹೆಚ್ಚು ಜಾಗರೂಕರಾಗಿ ಹೋರಾಡುವುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯವೆನ್ನಿಸಬೇಕು. ಕನ್ನಡಪರ ಸಂಘಟನೆಗಳಿಗೆ ಬೆನ್ನೆಲುಬಾಗುವುದು, ಹುರಿದುಂಬಿಕೆ ಹಾಗೂ ಬೆನ್ನು ಚಪ್ಪರಿಕೆಯೊಂದಿಗೆ ಸ್ಫೂತರ್ಿ ನೀಡುವುದು ಮತ್ತು ಮುಖ್ಯವಾಗಿ, ಸಾಚಾ ಅಭಿಮಾನವನ್ನು ತಳೆಯುವುದು ಎಷ್ಟು ನಿಧರ್ಾರಕವಾಗುತ್ತವೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಅಗ್ರೇಸರ ಹಾಗೂ ಪ್ರಸಿದ್ಧ ಕನ್ನಡ ಪರ ಚಳವಳಿಗಳು ಮೊದಲಿಗೆ ರಾಜಧಾನಿಯಾದ ಬೆಂಗಳೂರಿನಲ್ಲಿ, ಅನಂತರ ನಾಡಿನ ವಿವಿಧ ಕಡೆಗಳಲ್ಲಿ ಯಾವುದೇ ಸಮಸ್ಯೆಯ ಕಾರಣಕ್ಕೆ ನಡೆದಿರಲಿ ಅವುಗಳೊಂದಿಗೆ ಅಸಂಖ್ಯಾತ, ಸ್ವಲ್ಪ ಸಂಖ್ಯಾತ, ಅಖ್ಯಾತ ಸಂಘಟನೆಗಳೂ ಇತರ ಕನ್ನಡ ಒಕ್ಕೂಟಗಳೂ ಪ್ರಬುದ್ಧ ಹಾಗೂ ಪಾಮರ ಪೌರರೂ ಹಲವು ವರ್ಷಗಳಿಂದ ನಡೆಸಿರುವ ನಾಡು ನುಡಿಗಳ ಅನ್ಯಾಯದ ಎದುರಿನ ತಡೆಯೊಡ್ಡುವಿಕೆ ಸಾಮಾನ್ಯ ಸ್ವರೂಪದ್ದಲ್ಲ, ಚರಿತ್ರಾರ್ಹ ಘಟನೆ ಎನ್ನಿಸುವಂತಹದ್ದು. ಹಾಗೆಯೇ, ಕನರ್ಾಟಕದ ಇತರ ಪಟ್ಟಣಗಳ ಲೆಕ್ಕವಿಲ್ಲದ ಕನ್ನಡ ಕೂಟಗಳ ಕಾಲೋಚಿತ ಪ್ರತಿಭಟನೆಯ ಪಾಲೂ ನಗಣ್ಯವೇನಲ್ಲ. ಇದರೊಂದಿಗೆ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಹಲವು ಸಂಘ ಸಂಸ್ಥೆಗಳ ಪ್ರಾಮಾಣಿಕ ಭಾಗವಹಿಸುವಿಕೆಯೂ ಹೊಗಳಿಕೆಗೆ ತಕ್ಕದ್ದು. ಕನ್ನಡ-ಕನ್ನಡಿಗ-ಕನರ್ಾಟಕದ ಒಳಿತಿನ ಗಳಿಕೆಯ ಪ್ರಯತ್ನಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ ಸಮಪರ್ಿಸಿಕೊಂಡ ತ್ಯಾಗಮಯ ಚೇತನಗಳನ್ನೂ ಈ ವೇಳೆ ನೆನೆಯಬೇಕಾಗಿದೆ. ಸಾರ್ವಜನಿಕ ಹೋರಾಟದಲ್ಲಿ ಸಕ್ರಿಯ ಸಹಯೋಗಿಸಿಕೊಂಡು ತಮ್ಮ ಕರ್ತವ್ಯವನ್ನು ಒಪ್ಪವಾಗಿ ಮುಗಿಸಿ ಕೆಲವು ಸಂಸ್ಥೆಗಳು ಈಗ ವಿರಮಿಸಿವೆ. ಮತ್ತೆ ಕೆಲವಕ್ಕೆ ಜಡತ್ವದ ಮಂಪರು ಆವರಿಸಿ ತೂಕಡಿಸಿವೆ. ಬೆರಳೆಣಿಕೆಯ ಸಂಘಟನೆಗಳು ರಾಜಧಾನಿಯಲ್ಲಿ ಈಗಲೂ ಪ್ರಸಂಗಾವಧಾನ ಪ್ರಜ್ಞೆಯಿಂದ, ಕುಂದದ ಕಟ್ಟೆಚ್ಚರದಿಂದ ನಾಡು ನುಡಿ ಬದುಕುಗಳನ್ನು ಕಾವಲು ಪಡೆಯಂತೆ, ಸೇನಾನಿಷ್ಠೆಯಿಂದ ರಕ್ಷಿಸುವ ಹೊಣೆಹೊತ್ತಿವೆ. ಜನ ಸಾಧಾರಣರಿಗೆ ದೇಶ, ಭಾಷೆ, ಸಂಸ್ಕೃತಿಗಳ ಅಕ್ಕರೆ ಹೆಮ್ಮೆ ತಿಳಿವಳಿಕೆಗಳನ್ನು ಊಡುತ್ತಾ, ಸ್ವಕ್ಷೇಮದ ಜೊತೆಗೆ, ಸ್ವಭಾಷಿಕರ ಹಿತವನ್ನೂ ಹೆಚ್ಚಿಸುವ ಕಾಯಕದಲ್ಲಿ ಧನ್ಯವಾಗುತ್ತಿವೆ. ಅದರಲ್ಲೂ ಜಾಗತೀಕರಣ, ಉದಾರೀಕರಣಗಳ ಅಪರಿಹಾರ್ಯವೆನ್ನಿಸುವ ಹೊಸ ಆಪತ್ತುಗಳಿಂದ ನಮ್ಮ ನುಡಿ, ಸಂಸ್ಕೃತಿ, ಬಾಳಿನ ರೀತಿಗಳು ಪ್ರಭಾವಿತವಾಗುತ್ತಿರುವ ಇಂದಿನ ತೊಡಕಿನ ಸಂದರ್ಭದಲ್ಲಿ, ಬೆಂಗಳೂರಿನ ಈ ಸಂಘ ಸಂಸ್ಥೆಗಳ ಒಕ್ಕೂಟ ಎಸಗುತ್ತಿರುವ ಸಮಾಜೋಪಕಾರ ಎಣೆಯಿಲ್ಲದ್ದು. ಚಳವಳಿ, ಸ್ವಭಾಷಾ ಸಮುದಾಯ ಮತ್ತು ಪ್ರಾದೇಶಿಕರ ಕ್ಷೇಮ ಪಾಲನೆಗೆಂದೇ ರೂಪಿತಗೊಂಡ ಬೆಲೆಯುಳ್ಳ ಬಳುವಳಿ. ಕಾಲ ಮಿತಿಯ ಕಾರಣದಿಂದ ಅಂತಹ ಹಲವಾರು ಕೃತಕೃತ್ಯ ಜನಪರ ಹೋರಾಟದ ಸಂಘಟನೆಗಳ ಹೆಸರನ್ನೂ ಸೂಚಿಸಲು ಅವಕಾಶವಿಲ್ಲದ್ದಕ್ಕೆ ವಿಷಾದವಾಗುತ್ತಿದೆ. ಕಳೆದ ಶತಕದ ಅರವತ್ತರ ದಶಕದಿಂದ ಹಿಡಿದು ಈಗಲೂ ಸಚೇತನವಾಗಿರುವ ಕೆಲವನ್ನು ಮಾತ್ರ ಕೇವಲ ನಿದರ್ಶನಪ್ರಾಯವಾಗಿ ಉಲ್ಲೇಖಿಸುತ್ತೇನೆ. ಅವುಗಳೆಂದರೆ `ಕ.ಸಾ.ಪ.', `ಸಾಹಿತಿಗಳ, ಕಲಾವಿದರ ಬಳಗ', `ಕನ್ನಡ ಶಕ್ತಿ ಕೇಂದ್ರ', `ಕನ್ನಡ ಗೆಳೆಯರ ಬಳಗ', `ಕನ್ನಡ ಚಳವಳಿ ಕೇಂದ್ರ', `ಕನ್ನಡ ಚಳವಳಿ ವಾಟಾಳ್ ಪಕ್ಷ', `ಕನರ್ಾಟಕ ರಕ್ಷಣಾ ವೇದಿಕೆ' ಮುಂತಾದವು. ಹಾಗೆ ನೋಡಿದರೆ ಬೆಂಗಳೂರಿನಲ್ಲಿ, ತಾತ್ಕಾಲಿಕವಾದ ಅಗತ್ಯಗಳ ಪೂರೈಕೆಗೆ ಸಜ್ಜಾಗಿದ್ದ, ಈಗಲೂ ಕ್ರಿಯಾತ್ಮಕವಾಗಬಲ್ಲ ಸಾಮಥ್ರ್ಯದ ಐನ್ನೂರಾದರೂ ಸಣ್ಣಪುಟ್ಟ ಸಂಘಟನೆಗಳಿವೆ. ಅವುಗಳಲ್ಲಿ ಕೆಲವು ಘೋಷಣೆ ಮತ್ತು ಗತ ವೈಭವದ ಮೈಮರೆವಿನಲ್ಲಿ ಕರ್ತವ್ಯದ ಹೊಣೆಯನ್ನು ಮರೆತಿವೆ. ರಾಜ್ಯೋತ್ಸವ, ಗಣೇಶೋತ್ಸವದಂತಹ ಆಡಂಬರದ ಆಚರಣೆಗಳಲ್ಲಿ ಕಾಸು ಕಮಾಯಿಸುವ ದಂಧೆಯಲ್ಲಿ ತೊಡಗಿ, ಪ್ರಾಮಾಣಿಕ ಹೋರಾಟಗಾರರ ಹೆಸರಿಗೆ ಮಸಿಯನ್ನು ಬಳಿದಿವೆ. ಅಂತಹವುಗಳ ಬಗ್ಗೆ ಎಚ್ಚರವನ್ನು ವಹಿಸಿ ಇತರ ಕೈಂಕರ್ಯಬದ್ಧ ಸಂಸ್ಥೆಗಳಿಗೆ ದಿಕ್ಕುದೆಸೆ ಗೊತ್ತುಗುರಿಗಳನ್ನು ಕಾಣಿಸುವ, ಅವುಗಳನ್ನೆಲ್ಲಾ ಹುರಿಗೊಳಿಸಿ, ಶಕ್ತಿಯುತ ಸ್ವರಮೇಳವಾಗಿಸುವ ಅನುಭವಶಾಲಿ ಮಾಂತ್ರಿಕ ಮುಂದಾಳುತನದ ಅಗತ್ಯ ನಮಗೆ ಎದುರಾಗಿದೆ. ಶಕ್ತಿಯುತ ಹೋರಾಟದ ಮುಖೇನ ಎಂತಹ ಅದ್ಭುತಗಳನ್ನು ಸಾಧಿಸಬಹುದೆಂಬ ತಥ್ಯ ನಮ್ಮ ಚಿಂತನಶೀಲರಿಗೆ ಮನವರಿಕೆಯಾಗಬೇಕು. ಒಂದು ಮಾತಂತೂ ದಿಟ. ನಮ್ಮ ಚಳವಳಿಗಳ ಫಲಪ್ರದತೆ, ಉಪಯುಕ್ತತೆ, ಸ್ವಂತ ನೆಲದಲ್ಲೇ ಸ್ಥಳೀಯ ನಿರಾಶ್ರಿತರಾಗಿರುವ ಕನ್ನಡಿಗರ ಬದುಕಿಗೆ ಗಣನೀಯ ಅಂಶದ ಕಸುವು, ಖುವ್ವತ್ತು, ಆಶಾವಾದಿತ್ವವನ್ನು ಕುದುರಿಸಿವೆ, ನಮ್ಮ ಹಣೆಬರಹವನ್ನು ನಿರ್ಣಯಿಸಬಲ್ಲ, ತಿದ್ದಬಲ್ಲ ಮಹತ್ವವನ್ನು ಪಡೆದಿವೆ. ಇಂದು ಕನ್ನಡಪರ ಚಳವಳಿಗಳು ಯಾಚನೆ ಕೋರಿಕೆಗಳ ತಪ್ಪಲಿನ ತಗ್ಗಿನಿಂದ, ಛಲವಂತಿಕೆಯ ಹಾಗೂ ಹಕ್ಕೊತ್ತಾಯದ ಬೆಟ್ಟದೆತ್ತರದ ನೆಲೆಯನ್ನು ಮುಟ್ಟಿ, ಕನ್ನಡಿಗರಲ್ಲಿ ಹಮ್ಮು ಹೆಮ್ಮೆಗಳನ್ನು ಮೂಡಿಸಿವೆ. ಇದು ಕನ್ನಡ ಮನಸ್ಸಿನ ಸುಪ್ತ ಕ್ರತುಶಕ್ತಿ ಜಾಗೃತವಾಗಿರುವ ಶುಭ ಸೂಚನೆ. ಭಾಷೆಯ ಹಾಗೆ ನಾಡಿನ ಜನತೆ ಮತ್ತು ಜೀವನವನ್ನು ಅವಿಭಾಜ್ಯವಾಗಿ ಬೆಸೆಯುವ, ಭಾವಾತ್ಮಕ ಭೂಮಿಕೆಯಲ್ಲಿ ಒಂದುಗೂಡಿಸುವ ಮಾಗರ್ೋಪಾಯ ಮತ್ತೊಂದಿರದು. ಅದರ ಜೀವಂತಿಕೆ ಉಳಿವು ಮತ್ತು ಮುನ್ನಡೆಗಳು ಅಭಿವ್ಯಕ್ತಿಯ ವಿವಿಧ ವಿಧಾನಗಳನ್ನು ಮೇಳವಿಸಿಕೊಳ್ಳುವುದರಲ್ಲಿ ಇರುವುದಲ್ಲದೇ, ಎಲ್ಲ ಸ್ತರದ ಜನಪದದ ನಿರಂತರವೂ ನಿತ್ಯವೂ ಆದ ಬಳಕೆಯನ್ನು ಅವಲಂಬಿಸಿದೆ ಎನ್ನುವುದು ಸವರ್ೇಸಾಧಾರಣ ಸಂಗತಿ. ಇದರ ಅರಿವಿದ್ದೋ, ಇಲ್ಲದೆಯೋ ನಾವು ಸ್ವಭಾಷೆಯನ್ನು ಕಡೆಗಣಿಸಿ, ಹುದ್ದೆ ಮುದ್ದೆಗಳ ತುತರ್ಿಗಾಗಿ ಪರಭಾಷೆಯೊಂದನ್ನು ತಲೆಯ ಮೇಲೆ ಕೂರಿಸಿಕೊಂಡು ವಿಪರೀತವಾಗಿ ಮಯರ್ಾದಿಸುತ್ತಿದ್ದೇವೆ. ಸಾಕಷ್ಟು ಸಮಯದಿಂದ ನಮ್ಮ ಇಹಪರ ಪುರುಷಾರ್ಥವೆಲ್ಲ ಇಂಗ್ಲೀಷ್ನಲ್ಲೇ ಇದೆ ಎಂಬಂತೆ ಭ್ರಮಾಶೀಲರಾಗಿ, ಸ್ವಂತತೆಗೆ ಎರವಾಗಿ, ಮಂದೆತನವನ್ನು ಮೆರೆಸಿದ್ದೇವೆ. ಪ್ರಾಪಂಚಿಕ ವಿದ್ಯಮಾನಗಳ ಕಿಂಚಿತ್ ಅರಿವು ಇರುವ ಯಾರಾದರೂ ಇಂಗ್ಲೀಷ್ ಅನಿವಾರ್ಯ ಎಂದು ನಂಬಬೇಕಾದದ್ದರಲ್ಲಿ ಎರಡು ಮಾತಿಲ್ಲ. ಆದರೆ, ಅದನ್ನು ಬಿಟ್ಟರೆ ನಮ್ಮ ಸಾರ್ವಜನಿಕ ಸಂವಹನ ಕ್ರಿಯೆಗಳೂ ಎಲ್ಲ ಬಗೆಯ ದೈನಿಕ ವಹಿವಾಟುಗಳೂ ವ್ಯಾವಹಾರಿಕ ಲೇನೆ-ದೇನೆಗಳೂ ಅಪೂರ್ಣವಷ್ಟೇ ಅಲ್ಲ, ಸಾಧ್ಯವಾಗದೆಂಬ ಅವಾಸ್ತವ ಸ್ಥಿತಿ ನಮ್ಮ ಕೀಳರಿಮೆ ಮತ್ತು ಪಾರತಂತ್ರ್ಯ ಪ್ರವೃತ್ತಿಯ ಪ್ರತಿಮೆ ಎನ್ನಿಸುತ್ತದೆ. ಕನ್ನಡಕ್ಕೆ ಕೆಲವು ದಶಕಗಳ ಹಿಂದೆ ಇತ್ತೆಂದು ಭಾವಿಸುವ ದಾರಿದ್ರ್ಯ, ಅಸಾಮಥ್ರ್ಯಗಳು ಈಗಿಲ್ಲ ಎಂಬುದಕ್ಕೆ, ಅದು ವಿದ್ಯುನ್ಮಾನ ಹಾಗೂ ಗಣಕ ಸಾಮ್ರಾಜ್ಯದ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನೂ ತೊಡಕಿಲ್ಲದೆ ನಿವೇದಿಸಬಹುದು ಎಂಬುದೇ ಪ್ರಮಾಣ. ಪತ್ರಿಕೆಗಳಲ್ಲಿ ಅಚ್ಚಾಗುತ್ತಿರುವ ಆಧುನಿಕ ವಿಜ್ಞಾನ-ತಂತ್ರಜ್ಞಾನಗಳ ಬರಹಗಳು, ಗ್ರಂಥ ರೂಪದಲ್ಲಿ ಹೊರಬರುತ್ತಿರುವ ಹಲವಾರು ವಿನೂತನ ಆವಿಷ್ಕಾರಗಳ ಜಟಿಲ ವಿಷಯಗಳು ಕನ್ನಡ ಪಡೆಯುತ್ತಿರುವ ಆಯಾಮಗಳನ್ನು ಸಂದೇಹಕ್ಕೆ ಎಡೆಯಿಲ್ಲದಂತೆ ಅರಿವಾಗಿಸುತ್ತಿವೆ. ಕಾಖರ್ಾನೆಗಳ ಪ್ರಗತಿಪರತೆಗೆ ತಾಂತ್ರಿಕ ತಜ್ಞತೆ ಅತಿ ನೆಚ್ಚಿನ ವಿಷಯವಾಗಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕನ್ನಡ ನುಡಿಗೆ ಈ ಜ್ಞಾನ ಶಾಖೆಯ ಕೊರತೆ ಇರುವುದರಿಂದ ಅದನ್ನು ಕಾಖರ್ಾನೆಗಳಲ್ಲಿ ಸಮರ್ಪಕವಾಗಿ ಉಪಯೋಗಿಸುವ ಸಾಧ್ಯತೆಗಳು ಕನಿಷ್ಠ ಎನ್ನುವ ಸಂದೇಹವಾದಿಗಳ ಅಭಿಪ್ರಾಯವನ್ನು ಸಟೆಗೊಳಿಸುವಂತೆ, ಹಲವು ದಶಕಗಳ ಹಿಂದೆಯೇ ಎನ್.ಜಿ.ಇ.ಎಫ್. ಕಾಖರ್ಾನೆಯ ಉನ್ನತಾಧಿಕಾರಿಗಳಾಗಿದ್ದ ದಿ| ತ.ರಂ.ಕೃಷ್ಣೇಗೌಡ ಅವರು ಇಂಗ್ಲೀಷ್-ಕನ್ನಡ ಔದ್ಯಮಿಕ ಪದಕೋಶವನ್ನು ಹೊರತಂದಿದ್ದರು. ಮತ್ತು ಅದರಲ್ಲಿ ಆರು ಸಾವಿರ ಪದಗಳಿಗೆ ಅರ್ಥವಿವರಣೆಯನ್ನು ನೀಡಲಾಗಿದೆ. ನಮ್ಮ ರಾಷ್ಟ್ರದ ಯಾವುದೇ ಪ್ರಾದೇಶಿಕ ನುಡಿಯಲ್ಲೂ ಇಂತಹ ಶ್ಲಾಘ್ಯಾರ್ಹ ಕಾರ್ಯ ನಡೆದಿಲ್ಲ ಎನ್ನುವುದು ನಮ್ಮ ಭಾಷೆಯ ಹೆಗ್ಗಳಿಕೆಯನ್ನು ಸಾರುತ್ತದೆ. ಇದರ ಹಾಗೆಯೇ, ಬ್ಯಾಂಕಿಂಗ್ ಕ್ಷೇತ್ರದಲ್ಲೂ ಉಪಯುಕ್ತ ಕೆಲಸವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಮಾಡಿದೆ ಮತ್ತು ಮೈಸೂರು ಮತ್ತಿತರ ಬ್ಯಾಂಕ್ಗಳು ಕನ್ನಡಪರ ಕೆಲಸದಲ್ಲಿ ತೊಡಗಿಸಿಕೊಂಡು ಅಷ್ಟಿಷ್ಟು ಸೇವೆಯನ್ನು ಎಸಗುತ್ತಿವೆ. ಇಷ್ಟಾಗಿಯೂ ವಿಜ್ಞಾನ-ತಾಂತ್ರಿಕ ವಲಯಗಳಲ್ಲಿ, ಅದರಲ್ಲೂ ಗಣಕಯಂತ್ರಕ್ಕೆ ಸಂಬಂಧಿಸಿದಂತೆ ನಮ್ಮ ಭಾಷೆಯನ್ನು ಸಂಪುಷ್ಟಗೊಳಿಸಲು ಇನ್ನೂ ಸಮಯ ಬೇಕಿದೆ. ಸಮರ್ಥವಾದ ನುಡಿಗಾರಿಕೆಯನ್ನು ರೂಪಿಸುವ, ಪದಗಳನ್ನು ಹಾಗೆ ಹಾಗೆ ಬಳಸಿಕೊಳ್ಳುವುದೋ ಟಂಕಿಸುವುದೋ ಎಂಬುದನ್ನು ವಿವೇಕ ವಿವೇಚನೆಗಳಿಂದ ನಿರ್ಣಯಿಸಿ ವ್ಯವಹಾರಮಾನ್ಯವಾಗಿಸುವ ನಿಷ್ಣಾತ ಸೊಲ್ಲರಿಮೆಯುಳ್ಳವರ ತಂಡ ಸಿದ್ಧವಾಗಬೇಕಿದೆ. `ಕವಿರಾಜಮಾರ್ಗ' ನಮ್ಮ ನಾಡು ನುಡಿಗಳ ವಿಸ್ತಾರವಾದ ಸರಹದ್ದನ್ನು ನಮಗೆ ಜ್ಞಾಪಿಸುವ ಹಾಗೆಯೇ ಅವುಗಳ ನಿಸ್ಸೀಮ ಭಾವಾತ್ಮಕ ವ್ಯಾಪ್ತಿಯನ್ನೂ ಅಪಾರ ಚೈತನ್ಯಶೀಲತೆಯನ್ನೂ ಮನಗಾಣಿಸಿರುವುದು ಪರೋಕ್ಷವಾಗಿ ನಮ್ಮ ಪ್ರತಿಷ್ಠೆಗೆ ನಿಮಿತ್ತವಾಗಬೇಕಾಗಿದೆ. ಇದರಿಂದ ಒಂದು ಸಾರೂಪ್ಯ, ಸಾಕಲ್ಯದ ಕಲ್ಪನೆ ನಮಗಾಗುತ್ತದೆ. ಜೊತೆಗೇ ಇಂದಿನ ನಮ್ಮ ಪರಿಸ್ಥಿತಿಯಲ್ಲಿ ತಳೆಯಬೇಕಾದ ಎಚ್ಚರಿಕೆಯ ಒಂದು ಮುಖ್ಯಾಂಶವನ್ನೂ ಸೂಚಿಸುತ್ತದೆ. ಕನ್ನಡಿಗರ ಬಾಳಿನ ಉತ್ತಮಿಕೆ, ಉತ್ಕರ್ಷಗಳು ಕೆಲವು ವಲಯಗಳಲ್ಲಿ ನೆರವೇರುತ್ತಿರುವಂತೆಯೇ ದುಸ್ಸಹನೀಯ ದಾರುಣತೆಯೂ ಹಾಸುಹೊಕ್ಕಾಗಿರುವುದನ್ನು ಸಂವೇದನಶಾಲಿಗಳಾದ ಕನ್ನಡದ ಪ್ರಾಜ್ಞರ ಸಮಾಧಾನ, ಚಿತ್ತಸ್ವಾಸ್ಥ್ಯಗಳ ಏರುಪೇರಿಗೆ ಕಾರಣವಾಗಿದೆ. ನಾಡು-ನುಡಿ-ಜನಪದದ ತ್ರಿಮೂತರ್ಿ ಸ್ವರೂಪದ ಬಿಡಿ ಸಮಸ್ಯೆಗಳೆಂದು ಭಾವಿತವಾಗಿರುವಂಥವು ದಿಟದಲ್ಲಿ ಅಂತರೈಕ್ಯವನ್ನು ಹೊಂದಿರುವುದರಿಂದ ಅವುಗಳ ಬಗೆಹರಿಸುವಿಕೆ ಗುರುತರವಾದ ಹೊಣೆಗಾರಿಕೆಯನ್ನು ನಮ್ಮ ಮೇಲೆ ಹೇರುತ್ತದೆ. ಕೆಲವು ಮಂದಿಯ ಬೀದಿ ಬೊಬ್ಬೆಯಿಂದ, ಆವೇಶದ ಅರಚಾಟದಿಂದ ಕೈಗೂಡುವ ಕಾರ್ಯ ಇದಲ್ಲ. ಸಾಮೂಹಿಕ ಪ್ರಜ್ಞೆಯ ದೊಡ್ಡ ಮಟ್ಟದ ಸಂಘಟನೆಯ ವಿವೇಚನಾಯುತ ಕಾರ್ಯಪ್ರವೃತ್ತತೆಗೆ, ನಿಖರವಾದ ವಿಚಾರಶೀಲತೆಯ ಗುರಿಯೇಟಿಗೆ ಎಟುಕಬಲ್ಲ ಫಲವಿದು. ನಮ್ಮ ಬದುಕುಗಳಿಗೆ ಚಿಟುಕುಮುಳ್ಳಾಗಿರುವ ವಲಸಿಗರ, ಗಡಿ ಗಂಡಾಂತರಿಗರ, ನೆಲ-ಗಣಿ-ಅಡವಿ-ನೀರು-ಕಸುಬುಗಳ ಕ್ರಮಬಾಹಿರ ಕಬಳಿಗರ ಎಷ್ಟೊಂದು ಕಂಟಕಗಳಿಂದ ನಾವು ಪಾರಾಗಬೇಕಾಗಿದೆ! ಕನ್ನಡಿಗರ ಒಟ್ಟಂದದ ತುಷ್ಟಿಪುಷ್ಟಿ ನಿರಾಳಗಳ ಪಡೆಯುವಿಕೆಗೆ, ದುರ್ದಮ್ಯ ದಮನಿತರ ಹತ್ತಿಕ್ಕುವಿಕೆಗೆ ಸಮಾಜದ ಎಲ್ಲ ಪ್ರಕಾರದ ವರ್ಗಗಳ ಏಕೀಕೃತ ಚಳವಳಿಗಿಂತ ಸಿದ್ಧೌಷಧಿ ಮತ್ತೊಂದಿರದು. ನೊಂದು ಹಿಂಜಿ ಹೋಗಿರುವ ನಾಡವರ ಸಮಷ್ಟಿ ಮನಸ್ಸು ವಾಸ್ತವತೆಯ ಕಾವಿನ ಚಳವಳಿಯ ಅಗ್ಗಿಷ್ಟಿಕೆಯಲ್ಲಿ ಕೆನೆಗಟ್ಟಿ ಘನಗೊಳ್ಳಲು ಕಾಯರ್ಾಚರಿಸುವ ಸತತ ಜಾಗೃತಿಯಿಂದಷ್ಟೇ ಸರ್ವರ ಸುರಕ್ಷಿತತೆ, ಸುಕ್ಷೇಮ ಕೈಗೂಡುವುದು ಸಾಧ್ಯ. ನಾಡು-ನುಡಿ-ನಾಡವರ ನಡುವಣ ವಿಶೇಷತೆಯೊಂದನ್ನು `ಕವಿರಾಜಮಾರ್ಗ'ಕರ್ತ ನಮಗೆ ಮನಗಾಣಿಸಿದ್ದಾನೆ. ಅವನ `ವ'ಕಾರೋಕ್ತಿಯ ವಾಕ್ಯ ಸಂದೋಹ-ವಸುಧಾವಲಯ ಅಥವಾ ಧರಣಿ ಮಂಡಲದಲ್ಲಿ (ಅದರ ಭೂಭಾಗವಾದ ಭಾರತದಲ್ಲಿ) ನಾಡು-ನುಡಿಗಳು ಹಾಸುಹೊಕ್ಕಾಗಿ ಹೋಗಿದ್ದರೂ ನಿಚ್ಚಳವಾದ ಸ್ವಂತತೆಯನ್ನು ಅಕ್ಷಯವಾಗಿ ಉಳಿಸಿಕೊಂಡಿರುವುದು ಕನರ್ಾಟಕದ ಅನ್ಯಸಾಧ್ಯವಲ್ಲದ ಅಗ್ಗಳಿಕೆಯೆಂದು ಮನವರಿಕೆ ಮಾಡಿಸುತ್ತದೆ. ಇದು ಬಹುಸಂಖ್ಯೆಯ ಕನ್ನಡ ಭಾಷಾಭಿಮಾನಿಗಳಿಗೆ ಸುವಿದಿತವಾಗಿರುವ ವಾಕ್ಯ; ಹಾಗೆಯೇ, ಅದರ ಬಾಹ್ಯಾರ್ಥ ಕೂಡ. ಇದರೊಂದಿಗೆ ಮತ್ತೊಂದು ಮನನಾರ್ಹ ಸಂಗತಿಯೂ ಇದೆ ಎನ್ನುವುದು ನಮ್ಮ ಹೆಮ್ಮೆಯ ಹೆಚ್ಚಳಕ್ಕೆ ಇಂಧನಪ್ರಾಯವಾಗಿದೆ. ನಾಡು ಮತ್ತದರ ಭೌತಿಕ ಸ್ವರೂಪದ ಸರಹದ್ದು ಸ್ಥಿರ, ಸ್ಥಾವರ; ಅದರ ಗಿರಿ ವನ ಭೂ ವಿಶೇಷಗಳೂ ಕೂಡ; ಅವು ಇರುವ ಎಡೆಯಿಂದ ಕದಲದಂಥವು. ಆದರೆ ಅದರ ಜನ ಮತ್ತು ಭಾಷೆ, ತನ್ಮೂಲಕ ಕನ್ನಡಿಗರ ಸಂಸ್ಕೃತಿ, ಆಚಾರ ವಿಚಾರಗಳು, ಉತ್ಪತ್ತಿಗಳು ಚಲನಾತ್ಮಕವಾದವು, ಜಂಗಮ ಸ್ವರೂಪದವು. ಇವು ಹುಟ್ಟು ನೆಲದ ಎಲ್ಲೆಯ ಇಕ್ಕಟ್ಟಿಗೇ ಅಂಟಿಕೊಂಡಿರದೆ ಜಗತ್ಸಂಚಾರಿಯಾಗಿವೆ. ಹೋಗಿ ನೆಲಸಿರುವ ದೇಶದ ಭಾಷೆ, ಜೀವನ ಶೈಲಿ, ರೀತಿ ರಿವಾಜುಗಳು ಅಮಿತ ಪ್ರಭಾವ ಬೀರಿದ್ದರೂ ಸ್ವದೇಶದವರೊಂದಿಗೆ ವ್ಯವಹರಿಸುವಾಗ ತಮ್ಮ ತಾಯ್ನುಡಿಯಲ್ಲೇ ಸಂವಹನಿಸುವುದು ಸ್ವಾಭಾವಿಕವಾಗಿರುತ್ತದೆ. ಕನ್ನಡ, ಕನ್ನಡಿಗರು ದೂರದಲ್ಲಿದ್ದರೂ ತಾಯ್ನಾಡಿನ ಕರುಳಿನ ನಂಟನ್ನು ಪೂತರ್ಿ ತೊಡೆದುಕೊಳ್ಳಲಾಗದು. ಗಾತ್ರದ ದೃಷ್ಟಿಯಿಂದ ಪರಿಮಿತವೆನ್ನಿಸುವ ಕನರ್ಾಟಕ ಭೂಪ್ರದೇಶ ತನ್ನ ಸಂತತಿಯ ಮತ್ತು ನುಡಿಯ ಮೂಲಕ ವಿಶ್ವಾದ್ಯಂತತೆಯನ್ನು, ಹಿರಿಮೆ ಗರಿಮೆಗಳನ್ನು ಪ್ರಾಪ್ತಿಸಿಕೊಳ್ಳುತ್ತದೆ. ಈ ಭಾವರೂಪಿ ವೈಶಾಲ್ಯ, ನಿದರ್ಿಗಂತತೆಗಳನ್ನು ರಾಷ್ಟ್ರಕವಿ ಕುವೆಂಪು ಅವರ ಭಾವೋತ್ಕಟ ಹಾಗೂ ಬಹುಜನ ಉಲ್ಲೇಖಿತ ಜನಾದರಣೀಯ ಕವನ ಪಂಕ್ತಿಗಳು ಮನದಟ್ಟು ಮಾಡಿಸುತ್ತವೆ: `ನೀ ಮೆಟ್ಟುವ ನೆಲ ಅದೆ ಕನರ್ಾಟಕ / ನೀನೇರುವ ಮಲೆ ಸಹ್ಯಾದ್ರಿ / ನೀ ಮುಟ್ಟುವ ಮರ ಶ್ರೀಗಂಧದ ಮರ / ನೀ ಕುಡಿಯುವ ನೀರ್ ಕಾವೇರಿ.' ಪ್ರಪಂಚದ ನಾಲ್ದೆಸೆಯಲ್ಲೂ ನೆಲೆಗೊಂಡಿರುವ ಹೊರನಾಡಿನ ಕನ್ನಡಿಗರಿಗಂತೂ ಈ ಸಾಲುಗಳಲ್ಲಿ ಅಡಕಗೊಂಡಿರುವ ಮಾಮರ್ಿಕ ಸಂದೇಶದ ಸದಾಶಯ ಕನರ್ಾಟಕದ ಅಜೇಯವಾದ ದೊಡ್ಡಸ್ತಿಕೆಯನ್ನಲ್ಲದೆ, ದಣಿವರಿಯದ ಎಚ್ಚರ, ಕರ್ತವ್ಯಗಳನ್ನು ನೆನಪಿಸುತ್ತದೆ. ಇದರೊಂದಿಗೆ ಕನ್ನಡ ನಾಡಿನ ಪ್ರಗತಿಪರ ಪುರುಷಾರ್ಥವನ್ನು, ಅಚ್ಚಳಿಯದ ಹೆಗ್ಗಳಿಕೆಯನ್ನು ಭವಿಷ್ಯದ್ವಾಣಿಯ ಮೂಲಕ ಹೊರಹೊಮ್ಮಿಸಿರುವ ವರ ಕವಿ ದ.ರಾ.ಬೇಂದ್ರೆಯವರ `ಜಗದೇಳಿಗೆಯಾಗುವುದಿದೆ ಕನರ್ಾಟಕದಿಂದೆ' ಎಂಬ ಭಾವಪೂರಿತ ಹೇಳಿಕೆ ಇಂದು ನಿಜವಾಗಿರುವುದಕ್ಕೆ ನಮ್ಮ ರಾಜ್ಯದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ತದಿತರ ಕ್ಷೇತ್ರಗಳ ಜಾಗತಿಕ ಮೇಲೇರುತ್ತಿರುವಿಕೆಯೇ ರುಜುವಾತುಪಡಿಸುತ್ತದೆ. -ಹೀಗೆಯೇ, ನಮ್ಮ ನಾಡು-ನುಡಿ-ಜನ ಜೀವನವನ್ನು ನಿರೂಪಿಸುವುದಕ್ಕೆ ಪ್ರಸ್ತುತವೆನ್ನುವ ಅನೇಕ ಸಂಗತಿಗಳಿವೆ. ಸದ್ಯಕ್ಕೆ ಅವುಗಳಿಗೆ ವಿರಾಮ ನೀಡಿ ಕನ್ನಡ ಜನಪರ ಚಳವಳಿಗಳ ಪಾತ್ರ, ಅವು ನೆರವೇರಿಸಿರುವ ಕೆಲವು ಮುಖ್ಯ ಕಲಾಪಗಳನ್ನು ಅಡಕವಾಗಿ ರೇಖಿಸಲು ಪ್ರಯತ್ನಿಸುತ್ತೇನೆ. ಇಲ್ಲಿ ನಡೆಯುವ ಮೂರೂ ದಿನಗಳ ಕಾರ್ಯಕ್ರಮಗಳಲ್ಲಿ ಇವುಗಳ ಸ್ವರೂಪ, ವಸ್ತುಸ್ಥಿತಿ, ಕಾರ್ಯಕಾರಿತ್ವ, ಜವಾಬ್ದಾರಿ ಮತ್ತಿತರ ಆದ್ಯ ವಿಷಯಗಳನ್ನು ಕುರಿತು ವಿಚಾರಪರ ನಿಪುಣರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ನಿಮ್ಮ ಹಾಗೆ ನನಗೂ ಆಲಿಸುವ ಕುತೂಹಲವಿದೆ. ಕನ್ನಡ ನಾಡಿಗಲ್ಲದೆ ರಾಷ್ಟ್ರದ ಬೇರೆ ಯಾವ ಪ್ರಾಂತ್ಯಗಳಿಗೂ ಇಷ್ಟೆಲ್ಲ ಸರ್ವತೋಮುಖವಾದ, ವಿಷಮವಾದ, ಸುಖ ನೆಮ್ಮದಿಗಳಿಗೆ ಕುಠಾರಪ್ರಾಯವಾದ ಸಮಸ್ಯೆಗಳು, ಪಡಿಪಾಟಲುಗಳು ಇವೆಯೋ ಇಲ್ಲವೋ! ಇಷ್ಟೊಂದು ಸಂಖ್ಯೆಯ ದೇಶ ಭಾಷಾ ಹಿತೈಷಿ ಪರವಾದ ಸಂಘಟನೆಗಳು ಇನ್ನೆಲ್ಲೂ ಇರಲಾರವು. ಅಸ್ತಿತ್ವವನ್ನೇ ಬುಡಮಟ್ಟ ಅಲುಗಾಡಿಸುವ ಶಕ್ತಿಯುಳ್ಳ, ದುವರ್ಿದ್ಯಮಾನಗಳನ್ನು ತಡೆಯುವ ಪ್ರಖರ ಕಾವಿನ ಚಳವಳಿಗಳು ಇತರ ರಾಜ್ಯಗಳಲ್ಲಿ ನಡೆದಿಲ್ಲವೆಂದೇ ಹೇಳಬೇಕು. ಕನ್ನಡದ ಮಹಾ ಜನತೆಯ ಹಕ್ಕುಬಾಧ್ಯತೆಗಳ, ನ್ಯಾಯಯುತ ಒತ್ತಾಯಗಳ, ಸ್ವಾಭಿಮಾನ ಆತ್ಮಗೌರವಗಳ ರಕ್ಷಣೆಯ ಸಲುವಾಗಿ ಅವುಗಳಲ್ಲಿ ಪಾಲ್ಗೊಂಡಿರುವ ಹೋರಾಟಗಾರರು ಮತ್ತು ಬೆಂಬಲಿಗ ನೆರವುಗಾರರ ಸಂಖ್ಯೆ ಎಣಿಕೆ ಬಸವಳಿಯುವಷ್ಟು ದೊಡ್ಡ ಪ್ರಮಾಣದ್ದು. ಮಹತ್ವದ ದೃಷ್ಟಿಯಿಂದ ಈವರೆಗೂ ನಡೆದಿರುವ ಜನಪರ ಚಳವಳಿಗಳೆಲ್ಲ ಸಮನಾದವು ಎಂಬುದರಲ್ಲಿ ಚೂರೂ ಸಂದೇಹವಿಲ್ಲ. ಆದರೆ ಅಗ್ರ ಪ್ರಾಶಸ್ತ್ಯ, ಕಾಲದ ದೀರ್ಘತೆ ಮತ್ತು ಭಾವಾತ್ಮೈಕ್ಯ ಧೋರಣೆಯಲ್ಲಿ ಸ್ವಾತಂತ್ರ್ಯ ಆಂದೋಳನದ ಜೊತೆ ಜೊತೆಗೆ ಕೈ ಮಿಲಾಯಿಸಿ ನಡೆದ ಕನರ್ಾಟಕ ಏಕೀಕರಣ ಚಳವಳಿ ಸ್ಮರಣಾರ್ಹವಾದದ್ದು. ಇನ್ನೊಂದು ರೀತಿಯಲ್ಲೂ ಇದು ಕನ್ನಡಿಗರ ಅಸ್ಮಿತೆ, ಮಾನಾಭಿಮಾನ ಸ್ಥಾಪಕವೆನ್ನಿಸುವಂಥದ್ದು. ಬಹುತರ ಸಮಾಜದ ಹಲವು ಶಾಖೆಗಳ ವಿದ್ಯಾವಂತ ಪ್ರಾಜ್ಞರಿಂದ, ಬುದ್ಧಿಜೀವಿ ಸೃಜನಶಾಲಿ ವರ್ಗದಿಂದ ಶಿಷ್ಟ ಮಾಗರ್ಾವಲಂಬಿಯಾಗಿ ಹಲವಾರು ದಶಕಗಳ ತನಕ ಸಾಗಿ ಬಂದದ್ದು. ಈ ಚಳವಳಿಯ ಪರಮಾದ್ಯ ಉದ್ದೇಶವಿದ್ದದ್ದು ಶತಮಾನಗಳಿಂದ ಕನ್ನಡಿಗರ, ಕನರ್ಾಟಕದ ದೌಭರ್ಾಗ್ಯವೆನ್ನಿಸಿದ್ದ ಭೌಗೋಳಿಕ ಸಮಸ್ಯೆ. ಹಲವು ಪ್ರಾಂತ್ಯಗಳಲ್ಲಿ ತುಣುಕುಗಳಾಗಿ ಹಂಚಿಹೋಗಿದ್ದ ಪ್ರಾಚೀನ ವಿಶಾಲ ಕನ್ನಡ ನಾಡು ಭಾಷಾನ್ವಯ ಪ್ರಾಂತ್ಯ ವಿಂಗಡಣೆಯ ಕಾರಣದಿಂದ ಮತ್ತೆ ಒಗ್ಗೂಡಿದ್ದು ಈ ಅದ್ವಿತೀಯ ಹೋರಾಟದ ಮುಖೇನ. ಈ ಚಳವಳಿಯ ಪ್ರಾರಂಭದಿಂದ ಅಂತ್ಯದವರೆಗೂ ಅದೆಷ್ಟು ಜನ ಸುಸಂಸ್ಕೃತರು ಹಾಗೂ ಶ್ರೀಸಾಮಾನ್ಯರು ಹಳ್ಳಿ-ಪಟ್ಟಣಗಳೆನ್ನದೆ ಅದರಲ್ಲಿ ತೊಡಗಿಸಿಕೊಂಡಿದ್ದರೆನ್ನುವುದು ಲೆಕ್ಕಕ್ಕೆ ಸಿಕ್ಕುವುದಿಲ್ಲ. ನಮ್ಮ ಮುಂದಿನ ಅನೇಕಾನೇಕ ಸಮಸ್ಯೆಗಳ ಇತ್ಯರ್ಥಕ್ಕಾಗಿ ನಡೆದ, ನಡೆಯಬೇಕಾದ ಹೋರಾಟಗಳಿಗೆ ಏಕೀಕರಣ ಚಳವಳಿ ಅದಟು, ಅರಿವು ಹಾಗೂ ಆತ್ಮಾಭಿಮಾನವನ್ನು ರೂಢಿಸಿದ ಮೊದಲ ವೇದಿಕೆಯಾದದ್ದು ಇಂದು ಕನ್ನಡಪರ ಸಂಘರ್ಷಕರೆಲ್ಲರೂ ನೆನಪಿನಲ್ಲಿಡಬೇಕಾದ ಮುಖ್ಯ ಸಂಗತಿ. ಕನ್ನಡ ಜನತೆಯ ಭಾವನಾತ್ಮಕವಾದ ಹೊಂದುವಳಿಕೆ ಇನ್ನೂ ಪೂತರ್ಿ ಸಾಧಿತವಾಗದಿದ್ದರೂ ಕೆಲವು ಪ್ರದೇಶಗಳು ಕೈ ಜಾರಿಹೋದರೂ ಪಡೆದಿರುವುದೇನೂ ನಗಣ್ಯವಲ್ಲ. 1956ರ ನವೆಂಬರ್ 1ರಂದು ನಾವೆಲ್ಲ ಏಕೀಕೃತರಾದೆವು. ಇದರಿಂದ ನಮ್ಮ ಸಂಘಟಿತ ಶಕ್ತಿಯೇನೋ ವಧರ್ಿಸಿತು, ನಿಜ. ಆದರೆ ಅನಂತರ ಉದ್ಭವವಾದ ಸಮಸ್ಯೆಗಳ ಮಹಾಪೂರ ಕನ್ನಡ ನಾಡು-ನುಡಿ-ನಾಡವರ ಬದುಕಿನ ಅಸ್ತವ್ಯಸ್ತತೆಗೆ ಕಾರಣವಾಗಿದೆ. ನಿಷ್ಠಾವಂತ ಹುರಿಯಾಳುಗಳು ಜೊತೆಗೂಡಿ ಪ್ರಾರಂಭಿಸಿದ ``ಕನರ್ಾಟಕ ವಿದ್ಯಾವರ್ಧಕ ಸಂಘ'' (ಸ್ಥಾಪನೆ 1890), ಅನಂತರ ``ಕನ್ನಡ ಸಾಹಿತ್ಯ ಪರಿಷತ್ತು'' ಮೊದಲಾದ ಸಂಸ್ಥೆಗಳು ಏಕೀಕರಣದ ಸಾಫಲ್ಯಕ್ಕೆ ದುಡಿದದ್ದು ಅತ್ಯಂತ ಕೃತಾರ್ಥವೆನ್ನಿಸುತ್ತದೆ. ಆಗ ಒಗ್ಗೂಡಿದ ಪ್ರದೇಶದ `ವಿಶಾಲ ಮೈಸೂರು' ಎಂಬ ಹೆಸರನ್ನು `ಕನರ್ಾಟಕ'ವೆಂದು ಬದಲಾಯಿಸಿ ಹೆಮ್ಮೆಪಡಲು, ಸಕರ್ಾರದ ಅಧಿಕೃತ ಮುದ್ರೆಯನ್ನು ಒತ್ತಿಸಲು ತದನಂತರ ಒಂದೂವರೆ ದಶಕಗಳಿಗಿಂತ ಹೆಚ್ಚಿನ ಸಮಯಾವಧಿ ಬೇಕಾಯಿತು (1-11-1973). ಇದೀಗ ನಾವು 56ರ ರಾಜ್ಯೋದಯದ ಹಬ್ಬದ ಸಂಭ್ರಮದಲ್ಲಿದ್ದೇವಷ್ಟೆ? ಈ ಹಷರ್ಾಚರಣೆಯ ಸಂದರ್ಭದಲ್ಲಿ ವಿಷಾದದ ಎಳೆಯೂ ಸೇರಿರುವುದನ್ನು ಮರೆಯುವಂತಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ಆತ್ಮಶೋಧವನ್ನು, ದಿನೇ ದಿನೇ ನಮಗೆ ಎದುರಾಗುತ್ತಿರುವ, ಆಗಲಿರುವ ದುಃಸ್ಥಿತಿಯನ್ನು ಕುರಿತು ಉತ್ಕಟವಾಗಿ ಚಿಂತಿಸುವುದನ್ನು ಪ್ರಾರಂಭಿಸಬೇಕಿದೆ ಎಂಬ ವಿಚಾರವನ್ನು ಪದೇ ಪದೇ ಜ್ಞಾಪಿಸಬೇಕಾಗಿದೆ. ನಮ್ಮ ಎದೆಯುಬ್ಬಿಸುವಂತೆಯೇ ಮನ ನೋಯಿಸುವ ಮುಖ್ಯವಾದ ಜನ ಹಿತಪರ ಹೋರಾಟಗಳ ಯಾದಿ ಹೀಗಿದೆ; ಇದೂ ಕೂಡ ಪೂರ್ಣ ಮಾಹಿತಿಗಳನ್ನು ನೀಡದು: ಕನರ್ಾಟಕ ನಾಮಕರಣಕ್ಕೆ; ಪರಭಾಷಿಕ ವಲಸೆಗಾರರ ಹಾವಳಿಯನ್ನು ತಡೆಗಟ್ಟುವುದಕ್ಕೆ; ಅವರಿಂದ ನಮ್ಮ ನಾಡು ನುಡಿಗಳಿಗೆ ಆಗುತ್ತಿರುವ ಪರಮ ಅನ್ಯಾಯವನ್ನು ಖಂಡಿಸುವುದಕ್ಕೆ; ಸಾರ್ವಜನಿಕ ಹಾಗೂ ಆಡಳಿತಾತ್ಮಕ ಮಟ್ಟದಲ್ಲಿ ರಾಜ್ಯೋತ್ಸವಾಚರಣೆಯ ಬಗೆಗೆ, ಮತ್ತು ರಜೆ ಮಂಜೂರಾತಿಗೆ; ರಾಜ್ಯ ಸಕರ್ಾರದ, ಕೇಂದ್ರದ, ಖಾಸಗಿ ಮಾಲೀಕತ್ವದ ಕಛೇರಿ, ಕಾಖರ್ಾನೆ, ಕೈಗಾರಿಕೋದ್ಯಮ, ವ್ಯಾಪಾರೀ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಆಗಿರುವ ಅವಕಾಶರಾಹಿತ್ಯಕ್ಕೆ ಕಾರಣರಾದ ಪಟ್ಟಭದ್ರರ ವಿರುದ್ಧ; ಉದ್ಯೋಗಗಳ ಆಯ್ಕೆಯಲ್ಲಿ ಕನ್ನಡ ಜನರನ್ನು ಬಹು ಕಾಲದಿಂದ ಮೋಸ ಮಾಡುತ್ತಿರುವ ನಯವಂಚಕ ಕಪಟಿಗಳ ಹುನ್ನಾರುಗಳನ್ನು ಬಯಲಿಗೆಳೆಯುವುದಕ್ಕೆ; ಸಂಗೀತ, ಚಿತ್ರಕಲೆ, ನೃತ್ಯ, ಸಿನಿಮಾ ಮೊದಲಾದ ಸದೊಂಬತ್ತು ರೀತಿಯ ಸಂಘ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಪ್ರಾಮುಖ್ಯ ಕೊಡಿಸುವುದನ್ನು ಒತ್ತಾಯಿಸುವುದಕ್ಕೆ; ಹಾಗೆಯೇ ನೆರೆನಾಡಿನ ಚಲಚ್ಚಿತ್ರವೊಂದರಲ್ಲಿ ಕನರ್ಾಟಕದ ಭವ್ಯ ಪರಂಪರೆಯನ್ನು ಅಪಮಾನಕ್ಕೆ ಗುರಿಪಡಿಸಿದ್ದಕ್ಕೆ; ಕನ್ನಡ ಭಾಷೆಯ ಪಳಮೆ ಹಾಗೂ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಮಿಥ್ಯಾರೋಪ ಮಾಡಿದ ಚಾಣಾಕ್ಷ ರಾಜಕಾರಣಿಯ ಉದ್ಧಟತನವನ್ನು ಪ್ರತಿಭಟಿಸುವುದಕ್ಕೆ; ಅಡ್ಡ ದಾರಿಗಳಿಂದ ಹಿಂದಿಯನ್ನು ಪ್ರಚುರಗೊಳಿಸಿ ತೂರಿಸಲು ಪ್ರಯತ್ನಿಸುತ್ತಿರುವ ದುಮರ್ಾಗರ್ಿಗಳ ಹತ್ತಿಕ್ಕುವಿಕೆಗೆ; ಕನ್ನಡವನ್ನು ಶಿಕ್ಷಣ, ಆಡಳಿತ, ನ್ಯಾಯಾಲಯಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಮಾಡಲು ರಾಜ್ಯ ಸಕರ್ಾರವನ್ನು ಒತ್ತಾಯಿಸುವುದಕ್ಕೆ; ಕನ್ನಡ ದೂರದರ್ಶನಕ್ಕಾಗಿ; ಅನಿರೀಕ್ಷಿತ ಹಾಗೂ ಅವಿವೇಚಕ ಧೋರಣೆಯಿಂದ ಉದರ್ುವನ್ನು ಪ್ರಸಾರ ಮಾಡುವುದನ್ನು ತಡೆಯುವುದಕ್ಕೆ; ಶಿವಾಜಿ, ತಿರುವಳ್ಳವರ್ ಪ್ರತಿಮೆ ಸ್ಥಾಪನೆಗಳ ಔಚಿತ್ಯವನ್ನು ಪ್ರಶ್ನಿಸುವುದಕ್ಕೆ; ಗಡಿ ನಾಡಿನ, ಅದರಲ್ಲೂ ಬೆಳಗಾವಿ ಮತ್ತು ಗಡಿ ಭಾಗಗಳ ಸಮಸ್ಯೆಯನ್ನು ಸೃಷ್ಟಿಸಿ ಹಿಂಸೆ ದೌರ್ಜನ್ಯಗಳನ್ನು ಎಸಗಿ, ಕನ್ನಡಿಗರನ್ನು ಅಪಮಾನಗೊಳಿಸುವ ಕೃತ್ಯಗಳಲ್ಲಿ ತೊಡಗಿದ ಮರಾಠಿಗರ ಸೊಕ್ಕನ್ನು ಬಗ್ಗುಬಡಿಯುವುದಕ್ಕೆ; ಮತ್ತು ಅಕ್ರಮವಾಗಿ ಖನಿಜ ಹಾಗೂ ನೈಸಗರ್ಿಕ ಸಂಪನ್ಮೂಲಗಳನ್ನು ಹಾಡುಹಗಲೇ ಲಪಟಾಯಿಸುತ್ತಿರುವ ಅನ್ಯ ಭಾಷೀಯ ಲೂಟಿಕಾರರಿಗೆ ಪಾಠ ಕಲಿಸುವುದಕ್ಕೆ; ಕನರ್ಾಟಕವನ್ನು, ರೈಲು ಮಾರ್ಗವೂ ಸೇರಿದಂತೆ ಹಲವಾರು ಸೌಲತ್ತುಗಳಿಂದ ವಂಚಿಸುತ್ತಿರುವ ಕೇಂದ್ರ ಸಕರ್ಾರದ ಪಕ್ಷಪಾತೀಯ ನಿಲವನ್ನು ಖಂಡಿಸುವುದಕ್ಕೆ; ಕನ್ನಡ ನಾಮಫಲಕಗಳ ಬಗೆಗೆ ಆದೇಶ ನೀಡುವಂತೆ ಹಾಗೂ ಅನುಷ್ಠಾನಕ್ಕೆ ತರುವಂತೆ ರಾಜ್ಯ ಸಕರ್ಾರವನ್ನು ಒತ್ತಾಯಿಸುವುದಕ್ಕೆ; ಕಾವೇರಿ, ಕೃಷ್ಣೆ, ಭೀಮಾ, ಮಹಾದಾಯಿ ಮೊದಲಾದ ನದಿಗಳ ನೀರಿನ ಹಂಚಿಕೆಯಲ್ಲಿ ಮತ್ತು ಆಲಮಟ್ಟಿ ಮೊದಲಾದ ಅಣೆಕಟ್ಟುಗಳ ನಿಮರ್ಾಣದಲ್ಲಿ, ಹೊಗೇನಕಲ್ಲು ಜಲಪಾತದ ಅಕ್ರಮ ಬಳಕೆಯನ್ನು ತಡೆಯುವುದಕ್ಕೆ; ಮಹಿಷಿ ವರದಿಯ ಜಾರಿಗೆ ಒತ್ತಡ ತರುವುದಕ್ಕೆ;-ಹೀಗೆ, ನಾನಾ ಸಣ್ಣ, ದೊಡ್ಡ ವಿವಾದಗಳ ವಿರುದ್ಧ ಜರುಗಿರುವ ಹೋರಾಟಗಳು ಅಪರಿಮಿತ, ಮನೋವೇಧಕ. ಪರಿಸ್ಥಿತಿ ಹೀಗಿರುವಾಗ `ಸೊಕ್ಕಿನಲಿ ತಲೆಯೆತ್ತಿ ನಾವು ಸಮ ನಿಮಗೆಂದು' ಗವರ್ಾಭಿಮಾನದಿಂದ ಅನ್ಯ ಪ್ರಾಂತೀಯರೊಂದಿಗೆ ಬಾಳಿನ ಎಲ್ಲ ಬಾಬತ್ತುಗಳಲ್ಲಿ ಹುರುಡು ಹೂಡಲು ಕನ್ನಡಿಗರಿಗೆ ಸಾಧ್ಯವೆ? ಈ ಜನಪರ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಕನರ್ಾಟಕ ರಾಜ್ಯಾಡಳಿತದ ರಾಜಧಾನಿಯಿಂದ ಹಿಡಿದು ಕುಗ್ರಾಮದವರೆಗೂ ನಡೆದ, ಅತ್ಯಂತ ಜನಾಕರ್ಷಣೆಗೆ ಕಾರಣವಾದ ಶಿಕ್ಷಣ ಮಾಧ್ಯಮ ಕುರಿತ `ಗೋಕಾಕ್ ಚಳವಳಿ' ನಾಲ್ಕು ತಿಂಗಳಷ್ಟು ದೀಘರ್ಾವಧಿಯದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಷ್ಟೇ ಅಮಿತೋತ್ಸಾಹ ಮತ್ತು ಪ್ರಜಾಸಂಖ್ಯೆ ಗೋಕಾಕ್ ಚಳವಳಿಯಲ್ಲಿ ಕಂಡು ಬಂದದ್ದು ಗಣನೀಯ ವಿಚಾರ. ಒಂದು ಕಾಲಕ್ಕೆ ಮುಖ್ಯವಾಗಿ ನೆರೆ ರಾಜ್ಯಗಳ ಶೋಷಣೆ ವಲಸಿಗರಿಂದ ನಡೆದು ಧೈರ್ಯಗುಂದಿ ಕಂಗಾಲಾಗಿ ಹೋಗಿದ್ದ ಕನ್ನಡ ಜನ, ಕಾಲ ಮಹಿಮೆಯಿಂದ ಈಗ ಔತ್ತರೇಯರಿಂದ, ಅಷ್ಟೇಕೆ, ಅಂತರ್ರಾಷ್ಟ್ರೀಯರ ಅನಿಬರ್ಂಧಿತ ಹಾವಳಿಯಿಂದ ತತ್ತರಿಸಿಹೋಗಿದ್ದಾರೆ. ಇಂತಹ ಸ್ಥೂಲ ಮತ್ತು ಸೂಕ್ಷ್ಮತರವಾದ ನಿರ್ಲಜ್ಜ ದಬ್ಬಾಳಿಕೆ, ಅನ್ಯಾಯ ಅಕ್ರಮಗಳ ಪ್ರವೃತ್ತಿ ಕನ್ನಡ-ಕನರ್ಾಟಕ-ಕನ್ನಡಿಗರ ಅಸ್ತಿತ್ವವನ್ನೇ ಹೊಸಕಿ ಹಾಕಲು ಹೊಂಚಿರುವಾಗ, ಇವುಗಳನ್ನು ತಾಳಿಕೊಳ್ಳುವ ಸಹನೆ ಮೀರಿರುವಾಗ ಕೆಚ್ಚೆದೆಯ ಕನ್ನಡ ಸಂಘರ್ಷಕರು ಹಲವು ಸಂಘ ಸಂಸ್ಥೆಗಳ ದ್ವಾರಾ ಸಂಘಟಿತರಾಗಿ ಪ್ರತಿಭಟನಾಪೂರ್ವಕ ಮೆರವಣಿಗೆ, ಮುಷ್ಕರ, ಉಪವಾಸಗಳಿಂದ ಕಾನೂನು ಪಾಲಕರ ಲಾಠಿ ಗುಂಡು ದಂಡ ಜೈಲು ವಾಸ ಅಪಮಾನ, ಹಿಂಸೆ, ಸಾವು ನೋವುಗಳನ್ನು ಅನುಭವಿಸಿದ್ದು, ನಿಸ್ಪೃಹ ಧ್ಯೇಯೋನ್ನತರಾಗಿ ತಮ್ಮನ್ನು ಸಮಪರ್ಿಸಿಕೊಂಡದ್ದು ಅಭಿನಂದನೀಯವಾಗಿರುವುದಲ್ಲದೆ, ಭವಿಷ್ಯದ ಪೀಳಿಗೆಗೆ ಇವೆಲ್ಲವುಗಳ ಸವಿವರ ಚಿತ್ರಣವನ್ನು ದಾಖಲಿಸುವ ಕೆಲಸವೂ ಕೂಡ ಸ್ತುತ್ಯವೆನ್ನಿಸುತ್ತದೆ. ಕನ್ನಡಪರ ಜನಪದದ ಚಳವಳಿಯ ಒಂದು ಸ್ಮರಣೀಯ ಕಾಯರ್ಾಚರಣೆ ನಾಡು ನುಡಿಯ ಹಿತ ಸಾಧನೆಯಲ್ಲಿ ಮುನ್ನಿಲ್ಲದ ಯಶಸ್ಸನ್ನು ಪಡೆಯಿತು ಎಂಬುದಕ್ಕೆ ಒಂದು ನಿದರ್ಶನ ಹಳಬರ ನೆನಪಿನಲ್ಲಿದೆ. ಜನಪರ ಚಳವಳಿಗಳ ಜವಾಬ್ದಾರಿಯುತ ಪಾತ್ರವನ್ನು ಮನ್ನಿಸಿ, ವಿವಿಧ ಕ್ಷೇತ್ರಗಳ ಭಾರಿ ಜನಸ್ತೋಮ ಉತ್ತೇಜನ ನೀಡಿದ್ದು, ರಾಜಧಾನಿಯ ಸುಮಾರು ನೂರಾ ಮೂವತ್ತು ಸಂಘಗಳು ಒಟ್ಟಾಗಿ ``ಕನರ್ಾಟಕ ಸಂಯುಕ್ತರಂಗ''ದ ಪ್ರಾಯೋಜಕತ್ವದಲ್ಲಿ ಮೊದಲನೆಯ ಬಾರಿಗೆ ಬೆಂಗಳೂರಿನಲ್ಲಿ 1963ನೆಯ ಇಸವಿಯಲ್ಲಿ ವೈಭವಪೂರಿತ ಮತ್ತು ಅಭಿಮಾನಪೂರ್ವಕ ರಾಜ್ಯೋತ್ಸವವನ್ನು ನವೆಂಬರ್ ಒಂದರಿಂದ ಮೂರು ದಿನಗಳ ಕಾಲ ಮೊಟ್ಟಮೊದಲು ಯಶಸ್ವಿಯಾಗಿ ಆಚರಿಸಿದ್ದು ಚಳವಳಿಗಳ ಇತಿಹಾಸದಲ್ಲಿ ಕೇಳರಿಯದ ಘಟನೆ. ಈ ಬೃಹತ್ ಸಮಾವೇಶ ಅನ್ಯಭಾಷಿಕ ವಲಸೆಗಾರರ ಎದುರು ಕುಗ್ಗಿ ಕುಸಿದಿದ್ದ ಸ್ವಾಭಿಮಾನ ಮರಳಿ ಗರಿಗೆದರಿ ಮೆರೆಯಿತು. ಛಲ, ಒಮ್ಮತ, ಆತ್ಮವಿಶ್ವಾಸ ವಧರ್ಿಸಲು ಶ್ರೀಕಾರ ಬರೆಯಿತು. ಇದರ ದೆಸೆಯಿಂದ ಸಕರ್ಾರದ ಕಣ್ಣು ತೆರೆದದ್ದು ಒಂದು ವಿಶೇಷ. ಇದಕ್ಕೂ ಮೊದಲು ಅಧಿಕೃತವಾಗಿ ಸಾರ್ವಜನಿಕ ವ್ಯಾಪ್ತಿಯಲ್ಲಿ ರಾಜ್ಯೋತ್ಸವದ ಆಚರಣೆಯಾಗಲಿ, 1956ರ ನವೆಂಬರ್ ಒಂದರಂದು ಕನರ್ಾಟಕ ಏಕೀಕೃತವಾದದ್ದರ ನೆನಪಿಗೆ, ಆ ದಿವಸ ರಜೆಯನ್ನಾಗಲಿ ಸಕರ್ಾರ ಘೋಷಣೆ ಮಾಡಿರಲಿಲ್ಲ. ಇವೆರಡೂ ನೆರವೇರಿದ್ದು, ``ಕನರ್ಾಟಕ ಸಂಯುಕ್ತರಂಗ''ದ ಆಶ್ರಯದ ಈ ಬೃಹತ್ ಸಮಾವೇಶದ ಪ್ರೇರಣೆ ಮತ್ತು ಒತ್ತಡದಿಂದ, 1965ರಲ್ಲಿ. ಅಂದಿನ ಕಾಯರ್ಾವಳಿಯ ಅಂಗವಾಗಿ ಏರ್ಪಡಿಸಿದ್ದ ಮಹಾ ಮೆರವಣಿಗೆಯ ತಲೆಯ ಭಾಗ ಬೆಂಗಳೂರಿನ ಮಾರುಕಟ್ಟೆಯ ಬಳಿಯ ಟಿಪ್ಪು ಸುಲ್ತಾನನ ಕೋಟೆಯ ಬಳಿಯಿದ್ದರೆ, ಅದರ ಕೊನೆ ರೈಲ್ವೆ ನಿಲ್ದಾಣದ ಸಮೀಪವಿತ್ತು. ಅಂದರೆ, ಸುಮಾರು ಮೂರು ಮೈಲಿಯುದ್ದ, ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರ ಜಮಾವಣೆ ಇದರ ವೈಶಿಷ್ಟ್ಯವಾಗಿತ್ತು, ಇದರ ಮತ್ತೊಂದು ಫಲಶ್ರುತಿಯೆಂದರೆ, ನೆರೆ ಭಾಷಿಕರ ವಸಾಹತು ಎನಿಸಿದ್ದ, ಬೆಂಗಳೂರಿನ ದುಂಡು ಪ್ರದೇಶದಲ್ಲಿ ಅವರ ಭಾಷೆಯ ನಾಮಫಲಕಗಳು ಕೆಳೆಗಿಳಿದು ಕನ್ನಡದವು ಶೋಭಿಸಿದ್ದು, ಜೊತೆಗೆ ಅಲ್ಲಿ ಮತ್ತು ಆಸುಪಾಸಿನಲ್ಲಿ ಆತಂಕದ ಬದುಕು ನಡೆಸಿದ್ದ ಕನ್ನಡಿಗರಲ್ಲಿ ವೀರಾವೇಶದ ನವಚೈತನ್ಯವೊಂದು ದಾಂಗುಡಿಯಿಟ್ಟಿದ್ದು. ಕೆಲವು ಬಿಳಿ `ಕಾಲರ್'ನ ಆರಾಮ ಕುಚರ್ಿಯ ಸಂದೇಹವಾದಿಗಳಿಗೆ ಈ ತೆರನಾದ ಬೀದಿ ಚಳವಳಿಗಳಲ್ಲಿ ವಿಶ್ವಾಸವಿಲ್ಲ. ಅವರಿಗೆ ಕನ್ನಡಪರ ಹೋರಾಟಗಾರರೆಂದರೆ ತಾತ್ಸಾರದಿಂದ ಲಘುವಾಗಿ ಕಾಣುವ, ತಮಾಷೆಗಳಿಗೆ ಈಡಾಗುವ ಅಶಿಕ್ಷಿತ ಮಂದಿ. ಇದೆಲ್ಲ ಕೆಲಸವಿಲ್ಲದವರ ಸಂಕುಚಿತವಾದ ಪ್ರಾಂತೀಯ ಮನಸ್ಸಿನ ವ್ಯಾಮೋಹದ ಸಾಮುದಾಯಿಕ ಸನ್ನಿ. ಇಂಥವರಿಂದ ನಾಡಿಗೆ, ಸಭ್ಯರಿಗೆ ಕೆಟ್ಟ ಹೆಸರೆಂಬ ಭಾವನೆ ಪ್ರಚಲಿತ. ಇಂತಹ ಮಹಾನುಭಾವರದು ಅಂತರ್ರಾಷ್ಟ್ರೀಯ ಉದಾತ್ತೋದಾರ ದೃಷ್ಟಿಯೆಂಬ ಭ್ರಮೆ ಬೇರೆ. ಕನರ್ಾಟಕ ಕೂಡ ಇತರ ರಾಜ್ಯಗಳಂತೆ ಭಾರತದ ಒಂದು ಭಾಗವಾಗಿರುವುದರಿಂದ ಎಲ್ಲರಿಗೂ ಇಲ್ಲಿ ವಾಸಿಸುವ ಸಂವಿಧಾನಬದ್ಧ ಹಕ್ಕಿದೆ, ನಿಜ. ಹಾಗೆ ಬದುಕುವವರು ಇಲ್ಲಿನವರ ಹಕ್ಕನ್ನು ಅಗೌರವಿಸುವ ರೀತಿಯಲ್ಲಿ, ಇಲ್ಲಿನವರಿಗೆ ನ್ಯಾಯವಾಗಿ ದಕ್ಕಬೇಕಾದದ್ದನ್ನು ಕಬಳಿಸುತ್ತ ಅವರ ಬಾಳನ್ನು ಮಣ್ಣುಪಾಲು ಮಾಡುವುದು ಎಷ್ಟು ಸರಿ? ಎನ್ನುವ ಸರಳ ಸಂಗತಿಯೂ ಇವರಿಗೆ ತೋಚದು. ವಲಸಿಗರು ಬೇಕಾದ ಹಾಗೆ ಬಾಳಲಿ, ಸ್ಥಳೀಯ ಜನ ನಿರ್ವಸಿತರಂತೆ, ನಿರಾಶ್ರಿತರಂತೆ ಬದುಕು ನೂಕಲಿ ಎನ್ನುವುದು ಯಾವ ನ್ಯಾಯ? ಬೇರೆ ಪ್ರಾಂತ್ಯಗಳಲ್ಲಿ ಹೀಗಿದೆ, ಹಾಗಿದೆ ಎಂದು ಉತ್ಪ್ರೇಕ್ಷಿಸಿ ಹೊಗಳಿ, ನಮ್ಮ ನಾಡಿನ ಹೆಸರನ್ನು ಹೊಲೆಗೆಡಸುತ್ತಿರುವವರಲ್ಲಿ ಅನ್ಯರ ಪಾಲು ಎಷ್ಟಿದೆಯೋ, ಹುಟ್ಟಿನಿಂದ ಕನ್ನಡಿಗರೆನ್ನಿಸಿಕೊಂಡ ನಮ್ಮ ಆಂಗ್ಲಾಭಿಮಾನಿ `ಸುಸಂಸ್ಕೃತ'ರ ಪಾಲೂ ಅಷ್ಟೇ ಇದೆ. ಈ ನಮೂನೆಯ ಜನಪದದ ಒಳಿತಿನ ಹೋರಾಟದಲ್ಲಿ ತೊಡಗಿರುವ ವ್ಯಕ್ತಿಗಳ ಸಂಘಟನೆಗಳ ಬಗೆಗೆ ಸಂದೇಹಿಸುವುದು, ಇವೆಲ್ಲ ಅಗ್ಗದ ಜನಪ್ರಿಯತೆ ಮತ್ತು ರೊಕ್ಕದ ರಹದಾರಿಯೆಂದು ಭಾವಿಸಿ ಆಡಿಕೊಳ್ಳುವುದು ಕೊಂಚ ಮಟ್ಟಿಗೆ ನಿಜ. ನಾನು ಮುಂಚೆ ತಿಳಿಸಿದಂತೆ, ಎಲ್ಲ ಕ್ಷೇತ್ರಗಳಲ್ಲಿರುವಂತೆ ಚಳವಳಿಗಾರರಲ್ಲೂ ಪ್ರತಿಭಟನೆ ಕೇವಲ ಒಂದು ಅನೀತಿಯುತ ಗಳಿಕೆಗೆ ಪರವಾನಿಗೆಯಾಗಿ, ಪತ್ರಿಕೆ ಟಿವಿಗಳ ಸುದ್ದಿಯಾಗಿ ಪ್ರಚಾರ ಗಿಟ್ಟಿಸುವ ಹೊಲಸು ಕಸುಬಾಗಿದೆ. ಇವರಿಗೆ ವಿರುದ್ಧವಾಗಿ ವೀರ ನಿಷ್ಠೆಯಿಂದ ತಮ್ಮ ತಾಯ್ನುಡಿ-ನಾಡು ಮತ್ತು ತಮ್ಮ ಒಡಹುಟ್ಟು, ಒಡನಾಡಿಗಳೆನ್ನಿಸುವ ಸಹಜ ಕಳಕಳಿಯಿಂದ ಸರ್ವಹಿತಕ್ಕಾಗಿ ಕಾದಾಡುವ ಒಂದು ಕೃತಕಾಮರ ಪಡೆಯೂ ಇದೆ. ಇಂಥವರು ದೀರ್ಘ ಕಾಲದಿಂದ, ಆಗಾಗ್ಗೆ ಮೈದೋರುವ ಅಹಿತಕರ ಅನ್ಯಾಯ ಅಕ್ರಮಗಳ ವಿರುದ್ಧ ಸೆಣೆಸುತ್ತಲೇ ಬಂದಿದ್ದಾರೆ. ಅವರನ್ನು ನಾವು ಶ್ಲಾಘಿಸಬೇಕು. ಅದೂ ಆಗದಿದ್ದರೆ ಅವರನ್ನು ಅವರ ಪಾಡಿಗೆ ಬಿಟ್ಟು ತೆಪ್ಪಗಿರಬೇಕು. ತಮ್ಮ ಪೊಳ್ಳು ಪ್ರತಿಷ್ಠೆಯ ಪ್ರಜ್ವಲತೆಗೋಸ್ಕರ ಅಂಥ ನಾಡು-ನುಡಿಗಳ ಸ್ವಯಂಸೇವೆಯ ಕಾರ್ಯಕರ್ತರನ್ನು ಉರುವಲಾಗಿ ದುರುಪಯೋಗಿಸಬಾರದು. ಈ ಸಂದರ್ಭದಲ್ಲಿ ಕನ್ನಡ ಜನತೆಗೆ ಇತಿಹಾಸದುದ್ದಕ್ಕೂ ಆಗಿರುವ ಅನ್ಯಾಯಗಳ ಹಕ್ಕಿನೋಟದಿಂದ, ಕನ್ನಡಪರ ಸಾರ್ವಜನಿಕ ಜನ ಹಿತದ ಚಳವಳಿ ಎಷ್ಟು ಸಂಗತ, ಅನಿವಾರ್ಯ ಹಾಗೂ ಕಾಲೋಚಿತವಾದದ್ದು ಎಂಬ ಅರಿವು ದಟ್ಟೈಸಬಹುದು: ಚಾಲುಕ್ಯ ಚಕ್ರವತರ್ಿಗಳ ಕಾಲದಲ್ಲಿ ಉತ್ತರ ಭಾರತದವರೆಗೂ ಹಿಗ್ಗಲಿಸಿತ್ತೆಂದು ಚರಿತ್ರೆ ತಿಳಿಸುವ ನಾಡಿನ ಸೀಮೆ, ವಿಜಯನಗರದ ಆಳ್ವಿಕೆಯ ಬಳಿಕ, ಅಂದರೆ, ಹದಿನಾರನೆಯ ಶತಮಾನದ ಅನಂತರ ಹಲವು ಪ್ರದೇಶಗಳಿಗೆ ವಿಲೀನವಾಗಿ ವಿಘಟಿತವಾಯಿತು. ಕಿತ್ತೂರು ಚೆನ್ನಮ್ಮ, ಟಿಪ್ಪೂ ಸುಲ್ತಾನರಂಥ ಸ್ವಾಭಿಮಾನಿ ಕ್ಷಾತ್ರ ತೇಜೋಜ್ವಲ ಅಪ್ರತಿಮ ಕಲಿಗಳ ದೇಹಾವಸಾನದ ತರುವಾಯ ದೀಘರ್ಾವಧಿಯವರೆಗೆ ಬ್ರಿಟಿಷರ ನಿರಂಕುಶ ದಬರ್ಾರು, ಏಕಪಕ್ಷೀಯ ನೀತಿ ನಿಲವು, ಪ್ರತೀಕಾರ ಬುದ್ಧಿ ಕನ್ನಡಿಗರ ಪಾಲಿಗಂತೂ ಮಗ್ಗುಲುಮುಳ್ಳಾಗಿ ಪರಿಣಮಿಸಿತು. ಅವರ ಪಕ್ಕ ವಾದ್ಯಗಾರರಂತಿದ್ದ ಮರಾಠಿಗರಿಗೆ, ಹೈದರಾಬಾದ್ನ ನಿಜéಾಮನಿಗೆ ಕನ್ನಡ ಪ್ರದೇಶಗಳು ಇನಾಮುಗಳಾಗಿ ಹಸ್ತಾಂತರ ಹೊಂದಿ, ಅವರಿಂದ ಜೋಹುಕುಂವಾದಿ ತುಂಡು ಪಾಳೇಗಾರರಿಗೆ ರವಾನಿಸಲ್ಪಟ್ಟು ಕನ್ನಡ ಜನತೆಯ ಬದುಕು, ಭಾಷೆ, ರೀತಿನೀತಿಗಳು ನಿಯಂತ್ರಣಕ್ಕೆ ಒಳಗಾದುವಲ್ಲದೆ, ಬಲವಂತದಿಂದ ಇತರರ ಅನಪೇಕ್ಷಿತ ಧಾತುಗಳು ಸೇರ್ಪಡೆಯಾಗಿ ಮೂರಾಬಟ್ಟೆಯ ದುರವಸ್ಥೆ ಪ್ರಾಪ್ತವಾಯಿತು. ಕನ್ನಡ-ಕನ್ನಡಿಗರ ವಿಪನ್ನಾವಸ್ಥೆಯನ್ನು ಸೂಚಿಸುವ ಒಂದು ಚಿಕ್ಕ ನಿದರ್ಶನವೆಂದರೆ ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಧಾರವಾಡದಲ್ಲಿ -ಕನ್ನಡಿಗರ ಗಂಡು ನೆಲವೆಂಬ ಖ್ಯಾತಿವಂತ ಊರಿನಲ್ಲಿ- ಇಪ್ಪತ್ತೊಂದು ಮರಾಠಿ ಶಾಲೆಗಳಿದ್ದರೆ, ಕನ್ನಡದವು ಎರಡು ಮಾತ್ರ! ಕನ್ನಡ ಜನಪರ ಚಳವಳಿಗಳಲ್ಲಿ ವಲಸಿಗರ ನಿತ್ಯ ಆತಂಕಕಾರಿ ಪ್ರಾಬಲ್ಯ ಮತ್ತು ಯಾಜಮಾನ್ಯದ ವಿರುದ್ಧ ಹೂಡಿದ್ದ ಸಂಘರ್ಷ ಬಹು ಮುಖ್ಯವಾದದ್ದು. ಕನ್ನಡಿಗರ ಭೌತಿಕ ಬದುಕನ್ನಲ್ಲದೆ, ಮಾನಸಿಕ ರೂಪದ ಅಸ್ಮಿತೆಯನ್ನು ಬಹು ಬಗೆಯಲ್ಲಿ, ಬಹಿರಂಗ ಮತ್ತು ಪ್ರಚ್ಛನ್ನ ಸಂಚಿನಿಂದ ಬಹು ಕಾಲದ ತನಕ ಬಲಹೀನಗೊಳಿಸಿ ಆತ್ಮಸ್ಥೈರ್ಯವನ್ನು ಕುಂದಿಸಿದ್ದು ಈ ಆಕ್ರಮಣಶೀಲ ವಲಸೆಗಾರರ ದುಂಡಾವತರ್ಿಯ ಪರಿಣಾಮ. ಇದರ ದೆಸೆಯಿಂದ ರಾಜಧಾನಿ ಎನ್ನಿಸಿದ ಬೆಂಗಳೂರು ನಗರದ ಕನ್ನಡಿಗರಲ್ಲಿ ತಬ್ಬಲಿ ಭಾವನೆ ಬೇರೊತ್ತಿ ಕೀಳರಿಮೆ, ಆತ್ಮಾವಹೇಳನಗಳಿಗೆ ಹಾದಿ ರಚಿಸಿತ್ತು. `ಬಹು ಭಾಷಾನಗರ'ವೆಂಬ ಶಿರೋನಾಮೆಯ ಮರೆಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಕನ್ನಡಿಗರ ಪಾಲಿಗೆ ಕೀತರ್ಿದಾಯಕವೆನ್ನಿಸದೆ, ತಮ್ಮ ಅಧಃಪತನದ ಜಾರುನೆಲಗಳಾಗಿದ್ದವು. ಕನ್ನಡ ನಾಡೆಂಬ ಶರೀರದ ಗುಂಡಿಗೆಯಂತಿದ್ದ ಬೆಂಗಳೂರಿನಲ್ಲಿ ಕಛೇರಿಗಳ ದೊಡ್ಡ ದೊಡ್ಡ ಉದ್ಯೋಗ, ವ್ಯಾಪಾರ, ವಾಣಿಜ್ಯ, ಕಟ್ಟಡ ನಿಮರ್ಾಣ, ಆಸ್ಪತ್ರೆ, ಬಹುಮಹಡಿ ಕಟ್ಟಡಗಳು, ಐಟಿ, ಬಿಟಿ ಸಂಸ್ಥೆಗಳಾದಿಯಾಗಿ ಸಕಲವೂ ಅನ್ಯಭಾಷಿಕರ ವಶವಾಗಿತ್ತು ಮತ್ತು ಎಗ್ಗಿಲ್ಲದೆ ಕನ್ನಡಿಗರನ್ನು ಪ್ರತಿ ಹಂತದಲ್ಲೂ, ಪ್ರಕಾರದಲ್ಲೂ ಕಡೆಗಣಿಸಿ ಮೂಲೆಗುಂಪಾಗಿಸುವ ಕುಟಿಲ ಷಡ್ಯಂತ್ರ ಕ್ರಿಯಾಶೀಲವಾಗಿತ್ತು. ಕನ್ನಡ ಜನಪರ ಚಳವಳಿಗಳ ಪ್ರತಿಭಟನೆಯ ಪ್ರಯತ್ನದಿಂದ ಸಂಕಷ್ಟಗಳ ಹೆಚ್ಚಳ ತಗ್ಗಿದ್ದರೂ ಕನ್ನಡಿಗರ ಪಾಲಿಗೆ ಅದು ಇನ್ನೂ ಪೂತರ್ಿ ಮಾಯದ ಹಸಿ ಗಾಯವಾಗಿಯೇ ಉಳಿದಿದೆ. ಒಂದು ಲೆಕ್ಕದ ಪ್ರಕಾರ ನಮ್ಮ ರಾಜಧಾನಿಯೆನ್ನಿಸಿರುವ ಮಹಾನಗರದಲ್ಲಿ ಮೂವತ್ತೆರಡಕ್ಕೂ ಮಿಕ್ಕು ಬೇರೆ ಭಾಷೆಗಳನ್ನು ಆಡುವ ಅನ್ಯಪ್ರದೇಶಿಗಳಿದ್ದಾರೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಉತ್ಕಷರ್ಾವಸ್ಥೆಯ, ಕೊಳ್ಳುಬಾಕ ಸಂಸ್ಕೃತಿಯ ಮಾಲ್ಗಳು ಮತ್ತಿತರ ಕೇಡುಗಳ ಪರಾಕಾಷ್ಠೆಯ ಈ ಕಾಲದಲ್ಲಿ ಇವರೊಂದಿಗೆ ಇನ್ನೂ ಏಳೆಂಟು ಭಾಷೆಗಳ ದೇಶೀ ಹಾಗೂ ವಿದೇಶೀ ವಿಲಕ್ಷಣ ಮಾದರಿಗಳು ಸೇರ್ಪಡೆಯಾಗಿವೆ. ಪರಭಾಷಿಕರು ಹೆಚ್ಚುತ್ತಿರುವುದರಿಂದ ನಮ್ಮ ಭಾಷೆಯಷ್ಟೇ ಹಿನ್ನಡೆ ಪಡೆಯುತ್ತಿಲ್ಲ ಅನ್ಯ ಪ್ರಾಂತೀಯ ಹಾಗೂ ಪಾಶ್ಚಾತ್ಯೀಯ ವಿಧಾನಗಳೂ ವೈಶಿಷ್ಟ್ಯಗಳೂ ನಮ್ಮ ಸಾಂಪ್ರದಾಯಿಕ ಸಾಮಾಜಿಕ ನೆಲೆಯಲ್ಲಿ ತಲೆ ತೂರಿಸಿ ಅವುಗಳ ಕ್ಷೀಣ ದೆಸೆಗೆ ಕಾರಣವಾಗುತ್ತಿವೆ. ಬಟ್ಟೆ ಬರೆ, ಬದುಕಿನ ಶೈಲಿ, ತಿಂಡಿ ತಿನಿಸು, ಆಚಾರ ವಿಚಾರಗಳು ಮಾತ್ರವಲ್ಲದೆ, ಅವರ ದೇವ ದೇವತೆಯರು, ಅನ್ಯ ವಾಸ್ತುಶಿಲ್ಪದ ಆರಾಧನಾಲಯಗಳು ಕೂಡ ಆಮದಾಗುತ್ತಿವೆ. ಹಾಗೆಯೇ, ಉದ್ಯಮದ ಹೆಸರಿನಲ್ಲಿ ನಾಡಿನ ಸರ್ವ ಸಮೃದ್ಧಿಯನ್ನೂ ಕೊಳ್ಳೆ ಹೊಡೆಯುವ ಬಂಡಾವಳಿಗ ಖೂಳರ ಪಡೆಯೂ ತಂಡೋಪತಂಡವಾಗಿ ಪಾದ ಬೆಳೆಸುತ್ತಿದೆ. ಇವೆಲ್ಲ ಪೀಡೆಗಳಿಂದ ಬಚಾವಾಗಿ ತನ್ನತೆಯನ್ನು, ಕನರ್ಾಟಕತ್ವವನ್ನು ಕಾಪಾಡಿಕೊಳ್ಳುವುದೇ ಹರ ಸಾಹಸವಾಗುತ್ತಿದೆ. ನಿಜವಾಗಿ ನೋಡಿದರೆ ಕನ್ನಡಪರ ಹೋರಾಟಗಾರರ ಸಂಘಟನೆಯೆಂಬ ಹೆಮ್ಮರದ ತಾಯಿ ಬೇರೀರುವುದೇ ವಲಸಿಗರ ನಿಯಂತ್ರಣರಹಿತ ಮುಸುಕಿನ ಮರೆಯ ದಬ್ಬಾಳಿಕೆ, ಧಣಿತನದ ಅನ್ಯಾಯದ ದೌಲತ್ತಿನ ವಿರುದ್ಧ, ಸ್ಥಳೀಯರ ಸಕಲ ಬಗೆಯ ಸಮಸ್ಯಾ ಪರಿಹಾರದ ಪರ. ಜಾಗತೀಕರಣವನ್ನು ಹೇಗೋ ಹಾಗೆಯೇ ವಲಸೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಹಕ್ಕೂ ಇಲ್ಲ. ವಲಸೆಗಾರರೆಲ್ಲರೂ ಶೋಷಕರು, ನಮ್ಮ ನಾಡು ನುಡಿ ನಾಡವರ ಅಭಿವೃದ್ಧಿಯ ವೈರಿಗಳು ಎನ್ನುವ ವಾದವೂ ಸಾಧುವಲ್ಲ. ನಮ್ಮ ಆಥರ್ಿಕ ವ್ಯವಸ್ಥೆಯನ್ನು ಬಲಗೊಳಿಸುವುದರಲ್ಲಿ, ವಾಣಿಜ್ಯ ಕೈಗಾರಿಕೋದ್ಯಮ ವ್ಯಾಪಾರ ಮುಂತಾದ ಹಲವಾರು ಸಾರ್ವಜನಿಕ ವಹಿವಾಟುಗಳಿಂದ ದೇಶದ ಪ್ರಗತಿಯನ್ನು ಸಾಧಿಸುವುದರಲ್ಲಿ ವಲಸಿಗರ ಪಾತ್ರ ಮಹತ್ತರವಾದದ್ದು. ಒಟ್ಟಿನಲ್ಲಿ ಅವರು ಇಲ್ಲಿನ ಸವಾರ್ಂಗೀಣ ಪುರೋಗಮನದ ಪಾಲುಗಾರರಾಗಿದ್ದಾರೆ. ಇಂಥವರಲ್ಲಿ ಹದಿನೈದು ವರ್ಷಕ್ಕೂ ಹೆಚ್ಚು ಕಾಲದಿಂದ ಇಲ್ಲಿ ವಾಸಿಸುವವರು ನಮ್ಮ ಭಾಷೆಯನ್ನು ಕಲಿಯುವುದರ ಮೂಲಕ ಅದನ್ನು ಆದರಿಸಿ, ಕನ್ನಡ ಸಂಸ್ಕೃತಿ ಇತಿಹಾಸಗಳನ್ನು ಗೌರವಿಸಿ ನಮ್ಮಲ್ಲಿ ಹೊಂದಿಕೊಂಡು ಬದುಕುವುದರ ಮೂಲಕ ಇತರರಿಗೆ ಆದರ್ಶನೀಯರಾಗಿದ್ದಾರೆ, ಕನ್ನಡಿಗರೇ ಆಗಿ ಹೋಗಿದ್ದಾರೆ; ಒಂದು ಹಿತಕರ ಸಮನ್ವಯತೆಯಲ್ಲಿ ಸಾರ್ಥಕ್ಯ ಹೊಂದಿದ್ದಾರೆ. ಅಂಥವರ ಬಗೆಗೆ ನಮ್ಮ ಹೋರಾಟಗಾರರಿಗಾಗಲಿ, ಕನ್ನಡ ಜನತೆಗಾಗಲಿ ಕರುಬು ವಿದ್ವೇಷಗಳಿಲ್ಲ; ತದ್ವಿರುದ್ಧರಾದವರ ಮೇಲಷ್ಟೇ ಮುನಿಸು, ಆಕ್ರೋಶ. ಶತಮಾನಗಳ ಹಿಂದೆ ನಮ್ಮ ಕನ್ನಡ ಪ್ರದೇಶಕ್ಕೆ ಗುಳೆಯೆತ್ತಿ ಬಂದವರಲ್ಲಿ ಅನೇಕರು ಗುರುತು ಸಿಕ್ಕದಷ್ಟು ಇಲ್ಲಿಯವರೇ ಆಗಿದ್ದಾರೆ-ತಮ್ಮ ಕೆಲವೊಂದು ವೈಶಿಷ್ಟ್ಯಗಳನ್ನು ಉಳಿಸಿಕೊಂಡು, ಬೆಳಸಿಕೊಂಡು. ಆದರೆ ಆಮೇಲಿನ ಕಥೆಯೇ ಬೇರೆಯಾಗಿದೆ. ಕನ್ನಡಿಗರ ಬಾಳಿನ ವ್ಯಥೆಯ ಗಾಥೆಯಾಗಿದೆ; ಕಳವಳಕಾರಿ ಕರ್ಮಕಾಂಡವಾಗಿದೆ. ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯ ಕಾಲದಲ್ಲಿ ತೆಲುಗು ಭಾಷಾ ಪ್ರದೇಶ ಭೀಕರ ಕ್ಷಾಮದಿಂದ ತಲ್ಲಣಿಸಿಹೋಯಿತು. ಭೀತರಾದ ರೈತಾಪಿ ಜನ, ನೆಯ್ಗೆಗಾರರು ಹಾಗೂ ಇತರ ಕಸುಬಿನವರು ಭಾರಿ ಪ್ರಮಾಣದಲ್ಲಿ ಬೆಂಗಳೂರು ಮತ್ತು ಅಕ್ಕಪಕ್ಕದ ಎಡೆಗಳಲ್ಲಿ, ಕೋಲಾರ ಜಿಲ್ಲೆಯ ಹಲವಾರು ಕಡೆಗಳಲ್ಲಿ ಮಿಡಿತೆಗಳಂತೆ ಬಂದು ನೆಲೆಯೂರಿದರು. ಬಹಮನಿ ಅರಸನಿಂದ ಮೂರನೆಯ ಕೆಂಪೇಗೌಡ ಪರಾಭವಗೊಂಡ ತರುವಾಯ ಭೋಸ್ಲೆ ಹೆಸರಿನ ಮರಾಠಿ ಸರದಾರ ಬೆಂಗಳೂರಿನ ಜಹಗೀರುದಾರನಾಗಿ ನೇಮಕಗೊಂಡ. ಅದಾದ ಮೇಲೆ ಸಾವಿರಾರು ಮರಾಠಿ ಕುಟುಂಬಗಳು ಬೆಂಗಳೂರು ಮತ್ತಿತರ ಜಾಗಗಳಲ್ಲಿ ತಳವೂರಿದವು. ಕ್ರಿ.ಶ. 17ನೆಯ ಶತಮಾನದ ಅಂತ್ಯಾವಧಿಯಲ್ಲಿ ಬೆಂಗಳೂರನ್ನು ಆಳುತ್ತಿದ್ದ ಚಿಕ್ಕದೇವರಾಯ ಶ್ರೀ ವೈಷ್ಣವರನ್ನು ಆಡಳಿತದ ಆಯಕಟ್ಟಿನ ಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ. ಮಧುರೆಯ ನಾಯಕರ ದಿವಾನನಾಗಿದ್ದ ತಿರುಮಲಾರ್ಯ ಚಿಕ್ಕದೇವರಾಯನಿಂದ ಮಂತ್ರಿಯಾಗಿ ನೇಮಕಗೊಂಡ. ಅವನ ಪ್ರಭಾವ ಮತ್ತು ಜಾತೀಯ ಪಕ್ಷಪಾತದಿಂದ ಅರ್ಚನೆ ಹಾಗೂ ಪ್ರಮುಖ ಹುದ್ದೆಗಳಲ್ಲಿ ತಮಿಳುನಾಡಿನಿಂದ ಶ್ರೀವೈಷ್ಣವರನ್ನು ತಂದು ತುಂಬಿದ. ನೈಪುಣ್ಯ, ಕೌಶಲಗಳ ನೆವದಿಂದ ಅಯ್ಯರ್ ಸಮುದಾಯವನ್ನೂ ಆಮದಿಸಿಕೊಂಡ. ಈ ಸಮಯದಲ್ಲಿ ತಮಿಳುನಾಡಿನ ಹನ್ನೆರಡು ಸಾವಿರಕ್ಕೂ ಹೆಚ್ಚು ಬಟ್ಟೆ ನೇಯುವ ವೃತ್ತಿಯವರು ಇಲ್ಲಿಗೆ ಬಂದು ಝಾಂಡಾ ಊರಿದರು. ಹೈದರ್ಅಲಿಯ ಆಡಳಿತವಿದ್ದಾಗ ಬೆಂಗಳೂರಿನಲ್ಲಿ ಆತ ಪ್ರಾರಂಭಿಸಿದ್ದ ಲಾಲ್ಬಾಗ್(ಕೆಂಪುತೋಟ)ನ ದೇಖಬಾಲಿಗೆಂದು ತಮಿಳು ಪ್ರದೇಶದಿಂದ ಬಹು ಸಂಖ್ಯೆಯ ಮಾಲಿಗಳು, ತೋಟಗಾರಿಕೆಯ ಇನ್ನಿತರ ಕೆಲಸಗಳನ್ನು ನಿಭಾಯಿಸುವ ಮಂದಿ ಬೆಂಗಳೂರಿನಲ್ಲಿ ಆಶ್ರಯ ಪಡೆದರು. ಇವರಲ್ಲಿ ಅನೇಕರು ರಾಜಧಾನಿಗೆ ಸಮೀಪದ ಸೇಲಂ ಜಿಲ್ಲೆಯವರು. ಹಾಗೆಯೇ, ಅರಮನೆಯ ಪರಿಚರ್ಯೆಗೆ ಮರಾಠಿಗರನ್ನು ಸೇರಿಸಿಕೊಂಡ ಟಿಪ್ಪೂ ಸುಲ್ತಾನ್ ಅಂದಿನ ರಾಜಕೀಯದ ಕಾರಣಕ್ಕೆ ಮೈಸೂರಿಗರನ್ನು ನೆಚ್ಚದೆ, ಅವರಿಗೆ ಮೀಸಲಾಗಿದ್ದ ಸೇನೆ ಮತ್ತಿತರ ಹುದ್ದೆಗಳಿಗೆ ಮರಾಠಿ ಮಂದಿಯನ್ನು ತಂದು ಗಿಡಿದ; ಸ್ಥಳೀಯರು ಮೇಲೇರಿ ಬಾರದಿರಲು ಅವರನ್ನು ಬಳಸಿದ. ಆಗಿನ ಮೈಸೂರಿನ ಒಡೆಯರಿಗೆ ತಮ್ಮ ಸ್ಥಾನಮಾನದ, ಸಿಂಹಾಸನದ ಭದ್ರತೆ ಮುಖ್ಯವಾಗಿತ್ತು. ಆ ಕಾರಣಕ್ಕೆ ಈಸ್ಟ್ ಇಂಡಿಯಾ ಕಂಪೆನಿಯ ಧಣಿಗಳೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಬದ್ಧರಾಗಿ, ಅಸಹಾಯಕರಾಗಿ ಅವರ ಅಪ್ಪಣೆಯಂತೆ ತಮಿಳುನಾಡಿನ ದಿವಾನರನ್ನು ತಂದು ಆದರಿಸಿದರು. ಅವರ ಆಡಳಿತಾವಧಿಯಲ್ಲಿ ಮೈಸೂರು ಸಕರ್ಾರದ ಬಹುತರ ಎಲ್ಲ ಪ್ರಮುಖ ಉದ್ಯೋಗಗಳಲ್ಲೂ ನೆರೆ ರಾಜ್ಯದವರು ಸೊಕ್ಕಲಾರಂಭಿಸಿದರು. ವಲಸೆಯ ವ್ಯಾಧಿ ಉಲ್ಬಣಾವಸ್ಥೆಗೆ ಏರಿದ್ದು ಈ ಸಂಕ್ರಮಣ ಕಾಲದಲ್ಲಿ. ಈ ದಿವಾನರುಗಳ ಮುಖ್ಯ ವಹಿವಾಟುಗಳೆಲ್ಲ ಬೆಂಗಳೂರಿನಿಂದ ನೆರವೇರುತ್ತಿದ್ದುದರಿಂದ ವಲಸಿಗರು ಒಂದು ಕಡೆ ಸ್ವಜಾತಿ ಪ್ರಿಯ ದಿವಾನರುಗಳ ರಕ್ಷಣೆಯಿಂದ, ಮತ್ತೊಂದು ಕಡೆ ಬಿಳಿಯ ದೊರೆಗಳ ಸೇವೆಯ ಬಳುವಳಿ ರೂಪದ ಭದ್ರತೆಯ ವರದಾನದಿಂದ ದಂಡು ಮತ್ತು ನೆರೆಯ ಪ್ರದೇಶಗಳಲ್ಲಿ ತಮ್ಮದೇ ವಸಾಹತನ್ನು ಸ್ಥಾಪಿಸಿಕೊಂಡು ಜೀವಿಸತೊಡಗಿದರು. ಬ್ರಿಟಿಷರ ಕೃಪಾವಲೋಕನದ ಇನ್ನೊಂದು ದುಷ್ಫಲವೆಂದರೆ, ಕನ್ನಡ ನಾಡಿನ ಗಣಿಗಳಲ್ಲಿ, ಫ್ಯಾಕ್ಟರಿ ಮಿಲ್ಲುಗಳಲ್ಲಿ, ಸೇನಾ ಕಛೇರಿಗಳಲ್ಲಿ, ಕೈಗಾರಿಕೆಗಳಲ್ಲಿ, ಅಣೆಕಟ್ಟುಗಳ ನಿಮರ್ಾಣ ಕಾರ್ಯದಲ್ಲಿ -ಹೀಗೆ, ಎಲ್ಲೆಲ್ಲೂ ಉದ್ಯೋಗಗಳನ್ನು ದೋಚಿಕೊಂಡದ್ದು. ಕೂಲಿಯಿಂದ ಮಾಲಿಯವರೆಗೆ, ಬಾಣಸಿಗರಿಂದ ಬಚ್ಚಲು ಸಫಾಯಿ ಮಾಡುವವನವರೆಗೆ, ಶ್ವೇತ ದೊರೆಗಳು ಮದ್ರಾಸು ಪ್ರಾಂತ್ಯದಿಂದ ಹಿಂಡು ಹಿಂಡಾಗಿ ಜನರನ್ನು ಕರೆತಂದರು. ಗಾಯದ ಮೇಲೆ ಬರೆ ಎಳೆದಂತೆ ಇಂತಹ ತಡೆಯಿಲ್ಲದ ವಲಸೆಗೆ ಮತ್ತೊಂದು ಕಾರಣ ಒದಗಿತು. 1898ರಲ್ಲಿ ಬೆಂಗಳೂರು ನಗರ ಪ್ಲೇಗ್ ವ್ಯಾಧಿಯಿಂದ ತತ್ತರಿಸಿದಾಗ, ವಸ್ತ್ರ ತಯಾರಿಕೆಯ ಎರಡು ಪ್ರಮುಖ ಗಿರಣಿಗಳು ನೆಲ ಕಚ್ಚಿದವು. ಅವುಗಳ ಪುನರಾರಂಭದ ದೆಸೆಯಿಂದ ನೆರೆ ಪ್ರಾಂತ್ಯದ ಆಕರ್ಾಟ್ ಜಿಲ್ಲೆಯಿಂದ ಒಂದು ಸಾವಿರದ ಆರು ನೂರು ವೃತ್ತಿಕಾರರನ್ನು ಕರೆತರಲಾಯಿತು. ಈ ಹತ್ತಿ ನೇಯ್ಗೆಯ ಮಿಲ್ಲುಗಳ ಸ್ಥಾಪನೆಯಿಂದ ಹೊರಗಿನ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಅವರು ಬೇರು ಹರಡಲು ಕಾರಣವಾಯಿತು. ಇದಷ್ಟೇ ಅಲ್ಲದೆ, ಪಟ್ಟಭದ್ರರ ಶ್ರೀರಕ್ಷೆಯ ಧೈರ್ಯದಿಂದ ಇಲ್ಲಿನವನರನ್ನು ಶೋಷಿಸಿ, ಅವಮಾನಿಸುವ ಪ್ರಕ್ರಿಯೆಗೆ ನಾಂದಿಯಾಯಿತು. ಹೀಗಾಗಿ, ಸ್ಥಳೀಯರು ನಿರಾಶ್ರಿತರಾದರು; ವಲಸೆಗಾರರು ಲಂಗೂ ಲಗಾಮಿಲ್ಲದೆ ವಿಜೃಂಭಿಸಿದರು. -ಹೀಗೆ, ಒಂದು ಕಾಲಕ್ಕೆ ಪಕ್ಕದ ಪ್ರಾಂತ್ಯದಿಂದ ದುಸ್ಸಹ ದಮನಕ್ಕೆ ಈಡಾಗಿದ್ದ ನಾಡು, ನುಡಿ ಈಗ ಸುತ್ತುವರಿದ ಎಲ್ಲ ರಾಜ್ಯಗಳಿಂದಲೂ ಕಿರುಕುಳವನ್ನು ಅನುಭವಿಸುತ್ತಿದೆ. ಇಷ್ಟು ಸಾಲದೆಂಬಂತೆ, ಲೆಕ್ಕವಿರದ ಔತ್ತರೇಯ ರಾಜ್ಯದವರ ವ್ಯಾವಹಾರಿಕ ಒತ್ತಡದಿಂದಲೂ ನಲುಗುವಂತಾಗಿದೆ. ಕನ್ನಡ ಮನಸ್ಸು ಸಂಯೋಜನೆ, ನಿಟ್ಟೆಚ್ಚರ, ಆತ್ಮಾಭಿಮಾನಗಳನ್ನು ಹಿಂದಿಗಿಂತ ಇಂದು ಅಧಿಕ ಪ್ರಮಾಣ ಮತ್ತು ತೀವ್ರತೆಯಲ್ಲಿ ತೊಡಗಿಸಿಕೊಳ್ಳಬೇಕಾದ ಜರೂರು ಎದುರಾಗಿದೆ. ಕನ್ನಡಪರ ಚಳವಳಿಗಳ ಪಾತ್ರದ ಮಹತ್ವ ಮತ್ತು ಅನಿವಾರ್ಯತೆ ಮನೋವೇದ್ಯವಾಗುವುದು ಇಂತಹ ಸಂದಿಗ್ಧ ಮತ್ತು ದುರ್ಭರ ಸಂದರ್ಭದಲ್ಲಿ. ಕನ್ನಡಿಗರ ಮೃದು ಧೋರಣೆ, ಅನಗತ್ಯವಾದ ಸಹನಾಶೀಲತೆ, ಔದಾಸೀನ್ಯ ಪ್ರವೃತ್ತಿ ಹಾಗೂ ಸ್ವಂತದ್ದರ ಬಗೆಗೆ ಅವಜ್ಞೆ, ಪರರ ಬಗೆಗಿನ ಆರಾಧನಾ ಭಾವಗಳನ್ನು ತೊರೆದಾಗ ಕನ್ನಡಕ್ಕೆ, ಕನ್ನಡಿಗ, ಕನರ್ಾಟಕಕ್ಕೆ ನಿಜವಾದ ಹಿರಿಮೆ ಗರಿಮೆಗಳು ದಕ್ಕುತ್ತವೆ. ಕೊನೆಯಲ್ಲಿ, ಎರಡು ದಶಕಗಳ ಹಿಂದೆ ನಾನು ರಚಿಸಿದ ನಾಡ ನುಡಿಗಳ ಬಗೆಗಿನ ಅಭಿಮಾನಪೂರ್ವಕ ಭಾವಗೀತವೊಂದನ್ನು ಓದಿ ನನ್ನ ಮಾತುಗಳನ್ನು ಮುಗಿಸುತ್ತೇನೆ

Twitter Facebook Delicious Digg Favorites More

 
Twitter Facebook Delicious Digg Favorites More