ಮಾನವೀಯತೆ ಮರೆಯಲು ಪೀಠಿಕೆಯಾದ ಫೇಸ್‌ಬುಕ್ ಏಳುವರ್ಷದಿಂದ ಎದ್ದೇಳದ ಯುವಕನಿಗೆ ಭಾರೀ ನೆರವು

ಕಾರ್ಕಳ: ದುಡಿಯುತ್ತಿದ್ದಾಗ ವಿದ್ಯುತ್ ಕಂಬದಿಂದ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದು ಬೆನ್ನುಮೂಳೆ ಮುರಿದುಕೊಂಡು ಕಳೆದ ಏಳುವರ್ಷಗಳಿಂದ ಹಾಸಿಗೆ ಹಿಡಿದ ಯುವಕನ ಕರುಣಾಜನಕ ವ್ಯಥೆಯ ವರದಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುದನ್ನು ಗಮನಿಸಿರುವ ಯುವಜನಾಂಗವು ಹಾಸಿಗೆ ಹಿಡಿರುವ ಯುವಕನ ನೆರವಿಗೆ ಮುಂದಾಗಿದೆ. ಅಜೆಕಾರು ಬಂಗ್ಲೆಗುಡ್ಡೆಯ ಕೃಷ್ಣಯ್ಯ ಶೆಟ್ಟಿ ಮತ್ತು ಪ್ರೇಮ ದಂಪತಿಗಳ ಕಿರಿಯ ಮಗ ನಾಗರಾಜ ಶೆಟ್ಟಿ ಈ ವರದಿಯ ಕೇಂದ್ರ ಬಿಂದುವಾಗಿದ್ದಾನೆ. ಬಡತನ ಬೇಗೆಯ ನಡುವೆ ಪಿಯುಸಿ ಕಲಿತ್ತಿರುವ ನಾಗರಾಜ ಡಿಪ್ಲೋಮಾ ವ್ಯಾಸಂಗ ಮಾಡಬೇಕು. ತಾನೊಬ್ಬ ವಿದ್ಯಾವಂತನಾಗಬೇಕು. ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಕನಸ್ಸು ಕಂಡನಾದರೂ ವಿಧಿ ಮಾತ್ರ ಬಿಡಲಿಲ್ಲ. ೨೦೦೫ ಏಪ್ರಿಲ್ ೪ರಂದು ಜಾರ್ಕಳ ಮುಂಡ್ಲಿಯಲ್ಲಿ ವಿದ್ಯುತ್ ಲೈನ್ ಕಾಮಗಾರಿಯ ಸಂದರ್ಭದಲ್ಲಿ ಕಂಬಕ್ಕೇರಿದ ಕ್ಷಣಮಾತ್ರದಲ್ಲಿ ನೆಲಕ್ಕೆ ಬಿದ್ದು ತೀವ್ರತರದಲ್ಲಿ ಗಾಯಗೊಂಡಿದ್ದನು. ಕೋಮಾಸ್ಥಿತಿಯಲ್ಲಿದ್ದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದುವರೆಗೆ ಏಳು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಪ್ಲಾಸ್ಟಿಕ್ ಸರ್ಜರಿ ನಡೆದಿದೆ. ಇಂತಹ ದುರ್ಘಟನೆಯಿಂದ ಬಡಕುಟುಂಬ ಆ ಸಂದರ್ಭದಲ್ಲಿ ನಾಲ್ಕು ಲಕ್ಷ ರೂಪಾಯಿ ಖರ್ಚುಮಾಡಿದೆ. ಬೆನ್ನುಮೂಳೆ ಮುರಿತ ಉಂಟಾಗಿರುವುದರಿಂದ ಪತ್ರಿತಿಂಗಳ ಚಿಕಿತ್ಸೆ ಖರ್ಚಿಗಾಗಿ ಐದು ಸಾವಿರ ಕಾದಿರಿಸಿಡಬೇಕಾಗಿದೆ ಎಂದು ಆತನ ಮನೆ ಮಂದಿ ನೊಂದು ನುಡಿದಿರುವ ಬಗ್ಗೆ ’ವಿಜಯವಾಣಿ’ ಸಮಗ್ರ ಮಾಹಿತಿ ಪ್ರಕಟಿಸಿ ಆತನಿಗೆ ಸಮಾಜ ನೆರವಾಗುವಂತೆ ಕೋರಲಾಗಿತ್ತು. ನೆರವಾಯಿತು ಫೇಸ್‌ಬುಕ್ ಫೇಸ್‌ಬುಕ್ ಅಂದ ಕೂಡಲೇ ಬೆಚ್ಚಿಬೀಳುವವರ ಸಂಖ್ಯೆ ಹೆಚ್ಚು. ಅದನ್ನು ದುರ್ಬಳಕೆ ಮಾಡಿರುವುದು ಇದಕ್ಕೆ ಕಾರಣವಾಗಿದ್ದರೂ, ಅದನ್ನು ಸದ್ಬಳಕೆ ಮಾಡಿ ಸಮಾಜಕ್ಕೆ ನೆರವು ನೀಡಬಹುದೆಂದು ತೋರಿಸಿಕೊಟ್ಟವರು ತುಳು ಯೂತ್ ರಾಕ್ಸ್ ಮತ್ತು ತುಳು ಯಂಗ್ ಸ್ಟಾರ್‌ನ ಸದಸ್ಯರು. ಫೇಸ್‌ಬುಕ್‌ನಲ್ಲಿ ತುಳು ಯೂತ್ ರಾಕ್ಸ್ ಫೇಸ್ ನಾಮಾಂಕಿತದೊಂದಿಗೆ ನೆರವಿಗೆ ಮುಂದಾಗಿರುವ ಸಂಘಟನೆಯು ಟಿವೈಆರ್ ಟಿವೈಎಸ್ ಹೆಲ್ತ್ ಪೌಂಡೇಷನ್ ಹುಟ್ಟು ಹಾಕಿದರು. ತನ್ಮೂಲಕ ಸ್ಥಳೀಯವಾಗಿ ಅತೀ ಕಡುಬಡತನದಲ್ಲಿರುವ, ರೋಗ ರುಜಿನಗಳಿಂದ ಬಳಲುತ್ತಿರುವರನ್ನು ಗುರುತಿಸಿ ಅವರಿಗೆ ನೆರವಾಗುವುದೇ ಸಂಘಟನೆಯ ಸದ್ದುದ್ದೇಶವಾಗಿದೆ. ಪತ್ರಿಕೆಯಲ್ಲಿ ಬಂದಿದ್ದ ವರದಿ ಹಾಗೂ ಛಾಯಾಚಿತ್ರವನ್ನು ಯಥಾವತ್ತಾಗಿ ಫೆಸ್‌ಬುಕ್‌ಗೆ ಅಳವಡಿಸಿ ಸಹಾಯ ನೀಡುವಂತೆ ಅದರ ಸದಸ್ಯ ಕಾರ್ಕಳದ ಗನಿದೇವ್ ಮನವಿಮಾಡಿಕೊಂಡಿದ್ದರು. ಇದಕ್ಕೆ ಸ್ವಂದಿಸಿರುವ ಸದಸ್ಯರಿಂದ ಸಂಗ್ರಹಿಸಿದ ಮೊತ್ತ ೫೦ ಸಾವಿರ ರೂಪಾಯಿ. ರವಿವಾರ ಬೆಳಿಗ್ಗೆ ಸಂಸ್ಥೆಯ ಸದಸ್ಯರು ’ವಿಜಯವಾಣಿ’ ವರದಿಗಾರ ಜಗದೀಶ್ ಆರ್.ಬಿ ಜೊತೆಗೂಡಿ ಗಾಯಾಳು ಯುವಕ ನಾಗರಾಜನ ಮನೆಗೆ ಭೇಟಿನೀಡಿ ೫೦ ಸಾವಿರ ರೂಪಾಯಿ ಮುಖಬೆಲೆಯ ಚೆಕ್ ವಿತರಿಸಿ ಕೃತಜ್ಞರಾಗಿದ್ದಾರೆ. ಗನಿದೇವ್, ರೋಹಿತ್ ಕುಡ್ಲ, ಶ್ರೇಯ ಸನ್ನಿದ್ಧಿ, ರಾಘುವೇಂದ್ರ ರೈ, ಸುದೀಪ್ ಶೆಟ್ಟಿ, ಅಭಿಜಿತ್, ಅಭಿಲಾಷ್, ಜಿಲ್ಲಾ ಪಂಚಾಯತ್ ಮಾಜಿಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ತೆರೆಯ ಮರೆಯಲ್ಲಿ ಯುವಜನಾಂಗ ತೆರೆಮರೆಯಲ್ಲಿ ತುಳುನಾಡ ಯುವಜನಾಂಗ ನಿಶಕ್ತರಿಗೆ ಸಹಾಯ ನೀಡಲು ಮುಂದಾಗುತ್ತಿರುವುದು ಕಂಡು ಬೆರಗುಗೊಳಿಸುತ್ತಿದೆ. ಯಾವುದೇ ಪ್ರಚಾರವಿಲ್ಲದೇ ಸಂಘಟನೆ ಮಾಡುತ್ತಿರುವ ಕಾರ್ಯ ಮೆಚ್ಚುವಂತದಾಗಿದೆ. -ಡಾ. ಸಂತೋಷ್‌ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿಉಪಾಧ್ಯಕ್ಷರು. ಕೃತಜ್ಷತೆಗಳು ನೊಂದ ಈ ಜೀವಕ್ಕೆ ಸಹಾಯ ನೀಡಲು ಮುಂದಾಗಿರುವ ತುಳು ಯೂತ್ ರಾಕ್ಸ್ ಹಾಗೂ ತುಳು ಯಂಗ್ ಸ್ಟಾರ್ ಸದಸ್ಯರಿಗೆ ಕೃತಜ್ಞತೆಗಳು. ನೋವಿಗೆ ಸ್ವಂದಿಸಿ ವರದಿ ಪ್ರಕಟಿಸಿದ ಪತ್ರಿಕೆಗೂ ಕೃತಜ್ಞತೆಗಳು. -ನಾಗರಾಜ ಶೆಟ್ಟಿ,ಗಾಯಾಳು


Twitter Facebook Delicious Digg Favorites More

 
Twitter Facebook Delicious Digg Favorites More