ಕಲಿಕೆಯ ಆಸೆಗೆ ತಣ್ಣೀರೆರಚಿದ ವಿಧಿ

ಆರ್.ಬಿ ಜಗದೀಶ್ ಕಾರ್ಕಳ: ಜೀವನದಲ್ಲಿ ಅದೇನೋ ಕನಸ್ಸು ಕಂಡು ದುಡಿಯಲು ಹೋಗಿದ್ದ ಯುವಕನಿಗೆ ಗ್ರಹಚಾರ ಉಲ್ಟಹೊಡೆಯಿತೋ ಅಥವಾ ಕಾಲವಿಧಿಯೋ ಒಟ್ಟಿನಲ್ಲಿ ಹೇಳುವುದಾದರೆ ಆಯತಪ್ಪಿ ವಿದ್ಯುತ್ ಕಂಬದಿಂದ ಬಿದ್ದವನು ಇನ್ನೂ ಹಾಸಿಗೆಯಿಂದ ಎದ್ದೇಳದೇ ಏಳು ವರ್ಷ ಕಳೆದಿದೆ. ಆತನ ಹೆಸರು ನಾಗರಾಜಶೆಟ್ಟಿ(೩೪). ಕಾರ್ಕಳ ತಾಲೂಕು ಅಜೆಕಾರು ಬಂಗ್ಲೆಗುಡ್ಡೆಯ ನಿವಾಸಿಯಾಗಿದ್ದಾನೆ. ಕೃಷ್ಣಯ್ಯ ಶೆಟ್ಟಿ ಹಾಗೂ ಪ್ರೇಮ ದಂಪತಿಗಳ ಇಬ್ಬರು ಗಂಡು ಮಕ್ಕಳಲ್ಲಿ ಈತ ಕಿರಿಯವನು. ಬಡತನದ ಬೇಗೆಯಲ್ಲಿ ಓದಿನ ಕಡೆಗೆ ಹೆಚ್ಚಿನ ಆಸಕ್ತಿವಹಿಸಿದ ಈತ ಪಿಯುಸಿಯ ಬಳಿಕ ಡಿಪ್ಲೋಮಾ ವ್ಯಾಸಂಗ ಮಾಡಬೇಕೆಂಬ ಕನಸ್ಸು ಹೊತ್ತುಕೊಂಡು ದುಡಿಯಲು ಹೋಗಿರುವುದರಿಂದ ಆತ ಶಾಶ್ವತವಾಗಿ ಮೂಲೆಗುಂಪಿಗೆ ಸೇರಿದ್ದಾನೆ. ಬೆನ್ನಿನ ಮೂಳೆ ಮುರಿತಕ್ಕೊಳಗಾಗಿದೆ. ಕಮಚಿ ಮಲಗಿಕೊಂಡು ಸಾವು- ಬದುಕಿನ ನಡುವೆ ಹೋರಾಡುತ್ತಿರುವ ನತದೃಷ್ಟ ಆತನಾಗಿದ್ದಾನೆ. ೨೦೦೫ ಏಪ್ರಿಲ್ ೪ರಂದು ಜಾರ್ಕಳ ಮುಂಡ್ಲಿ ಎಂಬಲ್ಲಿ ಹೊಸ ವಿದ್ಯುತ್‌ಮಾರ್ಗ ಕಾಮಗಾರಿಯ ವೇಳೆಗೆ ಕಂಬಕ್ಕೇರಿದ ಆತ ಆಕಸ್ಮಿಕವಾಗಿ ಜಾರಿ ನೆಲಕ್ಕುರಿಳಿದ್ದನು. ಕೋಮಾಸ್ಥಿತಿಯಲ್ಲಿದ್ದ ಆತನಿಗೆ ಕಾರ್ಕಳ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿರಿಸಿದ ಆತನಿಗೆ ಇದುವರೆಗೆ ಏಳು ಬಾರಿ ಶಸ್ತ್ರಚಕಿತ್ಸೆ ನಡೆಸಲಾಗಿದೆ. ಬೆನ್ನಮೂಳೆ, ಕೈ ಮೂಳೆ, ಎರಡು ಬಾರಿ ಪ್ಲಾಸ್ಟಿಕ್‌ಸರ್ಜರಿ, ಮೂರು ಬಾರಿ ಮೂತ್ರಕೋಶಕ್ಕೆ ಸಂಬಂಧಿಸಿದ ಶಸ್ರಚಿಕಿತ್ಸೆಗಳು ನಡೆದಿದೆ. ವಿದ್ಯುತ್ ಕಂಟ್ರಾಕ್ಟರ್ ಅಶೋಕ್ ಎಂಬವರೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆ ದಿನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಕಂಟ್ರಾಕ್ಟರ್, ಕೇಸು ದಾಖಲಿಸದಂತೆ ಮನೆಮಂದಿಯರಲ್ಲಿ ಒತ್ತಡ ಹೇರಿ ಆಸ್ಪತ್ರೆಯ ಖರ್ಚಿಗೆಂದು ೨೫,೦೦೦ ರೂಪಾಯಿ ನೀಡಿದನಂತೆ. ಆ ಸಂದರ್ಭದಲ್ಲಿ ಚಿಕಿತ್ಸೆ ವೆಚ್ಚ ಭರಿಸಲು ಅಶಕ್ತರಾಗಿದ್ದ ಮನೆಮಂದಿ ಕಂಟ್ರಾಕ್ಟರ್‌ದಾರರೊಂದಿಗೆ ರಾಜಿಸಂಧಾನಕ್ಕೆ ಮುಂದಾಗಿದ್ದರಂತೆ. ಶಸ್ತ್ರಚಿಕಿತ್ಸೆ ಒಳಗಾಗಿದ್ದ ಭಾಗದಲ್ಲಿ ಗಾಯವು ಮತ್ತಷ್ಟು ಉಲ್ಭಣಿಸಿದಾಗ ಶಿರ್ಲಾಲಿನ ಸುಂದರ ಎಂಬವರಲ್ಲಿ ಊರ ಔಷಧಿಯನ್ನು ಮಾಡಿದ ಪರಿಣಾಮವಾಗಿ ಗಾಯವು ಶಮನಗೊಂಡಿತ್ತು. ಇದುವರೆಗೆ ಸಾಲ-ಮೂಲದಲ್ಲಿ ನಾಲ್ಕು ಲಕ್ಷ ರೂಪಾಯಿ ತನಕ ಖರ್ಚು ಮಾಡಲಾಗಿದೆ ಎಂದು ತಿಳಿಸಿರುವ ಆತನ ತಂದೆ ಕೃಷ್ಣಯ್ಯ ಶೆಟ್ಟಿ ಅವರು, ’ನಾನೊಬ್ಬ ಅಂಗವಿಕಲಚೇತನನಾಗಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಮಗನ ಸ್ಥಿತಿ ಕಂಡು ದೈನಂದಿನ ಮಾನಸಿಕವಾಗಿ ಕೊರಗುತ್ತಿದ್ದೇನೆ’ ಎಂದರು. ಪ್ರತಿತಿಂಗಳು ಸುಮಾರು ಐದು ಸಾವಿರ ರೂಪಾಯಿ ಆತನ ಔಷಧಿಗೆ ಕಾದಿರಿಸಬೇಕು. ಮೂತ್ರ ಶೇಖರಣ ಪ್ಲಾಸ್ಟಿಕ್ ಚೀಲ ಬದಲಾವಣೆಯನ್ನು ಪ್ರತಿತಿಂಗಳು ಮಾಡಲೇ ಬೇಕು. ಅದಕ್ಕಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ. ಇಂತಹ ಸಂದಿಗ್ವ ಪರಿಸ್ಥಿತಿಯಲ್ಲಿ ಮಗನಿಗೆ ತಮ್ಮಿಂದಾಗುವ ನೆರವನ್ನು ನೀಡುವಂತೆ ಅವರು ಕೋರುತ್ತಿದ್ದಾರೆ. ಬ್ಯಾಂಕ್ ಖಾತೆಯ ನಂಬ್ರ ಈ ರೀತಿಯಂತಿದೆ-ಸಿಂಡಿಕೇಟ್ ಬ್ಯಾಂಕ್ ಮುನಿಯಾಲು ಶಾಖೆ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ೦೧೭೦೨೨೦೦೦೩೦೮೩೩


Twitter Facebook Delicious Digg Favorites More

 
Twitter Facebook Delicious Digg Favorites More