ಅಜೆಕಾರು ಯಕ್ಷಗಾನ ಮಂಡಳಿಯ ಸಾಧನೆ :ದಿನೇಶ್ ಪೂಜಾರಿ ಬರಹರಜತ ಮಹೋತ್ಸವವನ್ನು ಪೂರೈಸಿದ ಅಜೆಕಾರಿನ ಶ್ರೀ ವಿಷ್ಣುಮೂರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯು ನಡೆದು ಬಂದ ಹಾದಿ.
೧೯೮೫ನೇ ಇಸವಿಯಲ್ಲಿ ಬೆವರು ಸುರಿಸಿ ಸಂಘವನ್ನು ಕಟ್ಟಿದಂತಹ ದಿ|ತಿಮ್ಮಪ್ಪ ಶೆಟ್ಟಿಗಾರ್ ಹಾಗೂ ದಿ| ಅಪ್ಪು ಶೆಟ್ಟಿ ಬೋಲ್ದಟ್ಟ ಇವರು ಪ್ರಾತಃಸ್ಮರಣೀಯರು. ಈ ಸಂಸ್ಥೆಯ ಮೊದಲ ಅದ್ಯಕ್ಷರು ಶ್ರೀ ವಿಜಯ ಶೆಟ್ಟಿಯವರು. ಸಂಘದ ಮೊದಲ ಯಕ್ಷಗಾನ ಪ್ರಸಂಗ "ದಕ್ಷಾಧ್ವರ ತಾರಕಾಸುರ ವಧೆ" ಅಂದಿನಿಂದ ಮೊದಲ್ಗೊಂಡು ಇಂದಿಗೆ ೨೬ರ ವರ್ಷ. ಮೊದಲಿನ ಸಧ್ಯಕ್ಷರು ಈಗಲೂ ಅದೇ ಹುಮ್ಮಸ್ಸಿನಲ್ಲಿ ಸಂಘದ ಜೊತೆಗಿದ್ದು ಸಹಕರಿಸುತ್ತಿದ್ದಾರೆ. ನಂತರದಲ್ಲಿ ಇನ್ನಿಬ್ಬರು ಸಂಘದ ಅಧ್ಯಕ್ಷರಾಗಿ ಯಕ್ಷಗಾನ ಮಂಡಳಿಯನ್ನು ಮುನ್ನಡೆಸಿದವರು ಶ್ರೀ ಉಮೇಶ ಶೆಟ್ಟಿ ಹಾಗೂ ಶ್ರೀ ರಂಗನಾಥ ಭಟ್ರವರು.ಕಳೆದ ಹದಿನಾಲ್ಕು ವರ್ಷಗಳಿಮದ ಅಧ್ಯಕ್ಷರಾಗಿ ಸಂಘವನ್ನು ಮುನ್ನೆಡೆಸುತ್ತಿರುವವರು ಡಾ|ಜನಾರ್ದನ ನಾಯಕ್ ರವರು.
ನಮ್ಮ ಯಕ್ಷಗಾನ ಮಂಡಳಿಯ ಸದಸ್ಯರಿಗೆ ಹೆಜ್ಜೆ ಕಲಿಸಿದ ಗುರು ದಿ|ಪುಷ್ಪರಾಜ್ ಎಂ.
ಕಲೆಯ ಬಗೆಗೆ ಸ್ಪೂರ್ತಿ ಕಲಾವಿದ .ಒಂದು ಸಂಸ್ಥೆ ಅಥವಾ ಒಂದು ಕಲೆ ಬೆಳೆಯಬೇಕಾದರೆ ಊರಿನ ಮಹಾನುಭಾವರ ಸಹಾಯ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಶ್ರೀ ಸತೀಶ್ ಶೆಟ್ಟಿ ಪೊಮ್ಮೊಟ್ಟು ಇವರು ಯಕ್ಷಕುಟೀರಕ್ಕಾಗಿ ಸ್ಥಳಾವಕಾಶವನ್ನು ನೀಡಿ ಪ್ರೋತ್ಸಾಹಿಸಿದವರು. ನಂತರ ಎಲ್ಲದಕ್ಕೂ ಶ್ರೀ ವಿಷ್ಣುಮೂರ್ತಿ ದೇವಾಲಯವೇ ಈ ಸಂಸ್ಥೆಗೆ ಆಶ್ರಯ ತಾಣ. ಮತ್ತೆ ನೆಲೆ ದೊರಕ್ಕಿದ್ದು ಸ.ಕಿ.ಪ್ರಾ.ಶಾಲೆ ದಾಸಗದ್ದೆ. ೨೦೦೪-೦೫ ರಲ್ಲಿ ದಿ| ಎಂ.ಪುಷ್ಪರಾಜ್ ಇವರ ಸ್ಮರಣರ್ಥವಾಗಿ ಸ್ವಂತ ಕಟ್ಟಡದ ಯೋಗ. ಈ ಕಟ್ಟಡಕ್ಕೆ ಹೆಚ್ಚಿನ ಸಹಕಾರವನ್ನು ನೀಡಿ ನಮ್ಮ ಸಂಸ್ಥೆಗೆ ಬೆಂಬಲಿಗರಾಗಿರುವವರು ಮುಂಬಯಿಯ ಖ್ಯಾತ ಉದ್ಯಮ ಅಜೆಕಾರಿನ ಹೆಮ್ಮೆಯ ಮಹಾನುಭಾವರಾದ ಶ್ರೀ ಶಿವರಾಮ ಜಿ.ಶೆಟ್ಟಿಯವರು.
೧೯೯೫ನೇ ಇಸವಿಯಲ್ಲಿ ಶ್ರೀ ಅಂಬಾತನಯ ಮುದ್ರಾಡಿ ಹಾಗೂ ಶ್ರೀ ಮುನಿರಾಜ ರೆಂಜಾಳ ಈ ಗಣ್ಯರ ಉಪಸ್ಥಿತಿಯಲ್ಲಿ ಯಕ್ಷಗಾನ ಕಲಾವಿದರು ಹಾಗೂ ಗುರುಗಳಾಗಿದ್ದ ಶ್ರೀ ಪಡ್ರೆ ಚಂದು ಹಾಗೂ ಶ್ರೀ ಮಂಕುಡೆ ಸಂಜೀವ ನಾಯ್ಕ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಈಸಂಸ್ಥೆಯ ದಶಮಾನೋತ್ಸವದ ಸಂದರ್ಬದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿದೆ.
ಕೋಡಪದವಿನ ಹವ್ಯಾಸಿ ಯಕ್ಷಗನ ಕಲಾ ಸಂಘ ಇವರು ಏರ್ಪಡಿಸಿದಂತಹ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ ನಮ್ಮ ಈ ಸಂಸ್ಥೆಗೆ ಪುಂಡುವೇಷದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ, ಮಹಾಗಣಪತಿ ದೇವದ್ಥಾನ ಕಾಟಿಪಳ್ಳ ಸುರತ್ಕಲ್ ಈ ಸಂಸ್ಥೆಯವರು ಏರ್ಪಡಿಸಿದ ಸ್ಫರ್ಧೆಯಲ್ಲಿ ಸ್ತ್ರೀವೇಷ, ರಾಜವೇಷ ಹಾಗೂ ಹಾಸ್ಯವೇಷಕ್ಕೆ ಪ್ರಥಮ ಬಹುಮಾನ, ಅಲ್ಲದೇ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ eನ ಮಂದಿರದಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರೋತ್ಸಾಹಕ ಬಹುಮಾನ ಕೂಡಾ ಲಭಿಸಿರುತ್ತದೆ.
ಅಲ್ಲದೇ ವಿಶೇಷವಾಗಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ, ಹಾಗೂ ಅತ್ತೂರು ಪದವಿನಲ್ಲಿ ಜರುಗಿದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದ ಜೋಡಾಟದಲ್ಲಿ ಭಾಗವಹಿಸಿದ ಕೀರ್ತಿ ನಮ್ಮ ಈ ಸಂಸ್ಥೆಗಿದೆ.
ಪೌರಾಣಿಕ ಪ್ರಸಂಗಗಳನ್ನೇ ನೆಚ್ಚಿಕೊಂಡಂತಹ ನಮ್ಮ ಈ ಸಂಸ್ಥೆಯು ಶ್ರೀ ದೇವೀ ಮಹಾತ್ಮೆ, ಕೊಲ್ಲೂರು ಕ್ಷೇತ್ರ ಮಹಾತ್ಮೆ, ಪಾಂಡಾಶ್ವಮೇಧ, ರಾಣಿ ಶಶಿಪ್ರಭೆ, ಭಸ್ಮಾಸುರ ಮೋಹಿನಿ ಇತ್ಯಾದಿ ಇತ್ಯಾದಿ ಪ್ರಸಂಗಗಳ ಜೊತೆಗೆ ನಮ್ಮ ತುಳುನಾಡಿನ ಹೆಮ್ಮೆಯ ಅವಳಿ ವೀರರಾದ "ಕೋಟಿ ಚೆನ್ನಯ"ಹಾಗೂ ದಿ| ಪುಷ್ಪರಾಜ್ ವಿರಚಿತ ನಾಗಾಭರಣ ಹಾಗೂ ರಾಣಿ ಚಂದ್ರಪ್ರಭೆ ಇಂತಹ ಪ್ರಸಂಗಗಳನ್ನು ನಮ್ಮ ಸುತ್ತ ಮುತ್ತಲಿನ ಊರಿನಲ್ಲಿ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದೇವೆ.
ನಮ್ಮ ಈ ಯಕ್ಷಗಾನ ಮಂಡಳಿ ಕೇವಲ ಯಕ್ಷಗಾನ ಪ್ರದರ್ಶನಕ್ಕೆ ಮಾತ್ರ ಸೀಮಿತವಲ್ಲದೇ ಪ್ರತೀ ವರ್ಷವು ನಮ್ಮ ಈ ವಿಷ್ಣುಮೂರ್ತಿ ದೇವಸ್ಥಾನದ ಇತರ ಸಾಂಸ್ಕೃತಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗುವಂತೆ ಸಹಕರಿಸುತ್ತೇವೆ. ಅಲ್ಲದೇ ಪ್ರತೀ ವರ್ಷವೂ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿ ಕಲಾ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ.
ಈ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾರಂಭದಂದಿನಿಂದಲೂ ಶ್ರಮಿಸುತ್ತಿರುವ ಮಾಜಿ ಅಧ್ಯಕ್ಷರುಗಳು , ಮಾಜಿ ಸದಸ್ಯರು, ಪ್ರಸ್ತುತ ಸದ್ಯಕ್ಷರು, ಸರ್ವಸದಸ್ಯರಿಗೂ ,ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲಾ ದಾನಿಗಳಿಗೆ ತುಂಬು ಹೃದಯದ ಕೃತಜ್ಞತೆಗಳೊಂದಿಗೆ ಇನ್ನು ಮುಂದೆಯೂ ಈ ಸಂಸ್ಥೆಯ ಸರ್ವತೋಮುಖ ಅಭಿವೃಧ್ಧಿಗೆ ತಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಾ, ಕಲೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಧರ್ಮ ಈ ನಿಟ್ಟಿನಲ್ಲಿ ಕರಾವಳಿ ಗಂಡುಕಲೆಯದ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಶ್ರೀ ವಿಷ್ಣುಮೂರ್ತಿ ದುರ್ಗಪರಮೇಶ್ವರಿ ಯಕ್ಷಗಾನ ಮಂಡಳಿಯ ಹಿರಿಮೆ ಗರಿಮೆ ಇನ್ನಷ್ಟು ಎತ್ತರದಲ್ಲಿ ಮೆರೆಯಲಿ ಎಂದು ಆಶಿಸುವ
ಶ್ರೀ ದಿನೇಶ್ ಅಜೆಕಾರ್.
"ಯಕ್ಷಗಾನಂ ಗೆಲ್ಗೆ"

ಅಜೆಕಾರಿನ ಶ್ರೀ ವಿಷ್ಣುಮೂರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ
ಪ್ರಸ್ತುತ ಸದಸ್ಯರ ವಿವರ
ಸರ್ವಶ್ರೀಗಳಾದ
ಡಾ|ಜನಾರ್ದನ ನಾಯಕ್ ಉಮೆಶ್ ಶೆಟ್ಟಿ, ಹರೀಶ್ ನಾಯಕ್,
ಪ್ರಶಾಂತ ಕೆ. ದಿನೇಶ್ ಸಾಲ್ಯಾನ್, ಕರುಣಾಕರ ಶೆಟ್ಟಿ
ದಿನೇಶ್ ಶೆಟ್ಟಿ ರಾಘವೇಂದ್ರ ಪಾಟ್ಕರ್ ದಿನೇಶ್ ಪ್ರಜಾರಿ
ಸಂತೋಷ ಪೂಜಾರಿ ಹರೀಶ್ ಸಾಲ್ಯಾನ್ ಪ್ರಸಾದ್ ಆಚಾರ್ಯ
ದಿನೇಶ್ ನಾಯಕ್ ಪ್ರಭಾಕರ ಶೆಟ್ಟಿ ಶಿವಪ್ರಸಾದ್ ಶೆಟ್ಟಿ
ವಸಂತ, ಅಶೋಕ ನಿತೇಶ್
ಸಂದೀಪ್ ಸಚಿನ್

Twitter Facebook Delicious Digg Favorites More

 
Twitter Facebook Delicious Digg Favorites More