
ಶ್ರೀ ಜಯಪ್ರಕಾಶ್ ಮಾವಿನಕುಳಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಮೂಡಬಿದ್ರೆ: ನ.೧ ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‌ನ ಪ್ರಾಯೋಜಕತ್ವದ ೨೦೧೪ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಶ್ರೀ ಜಯಪ್ರಕಾಶ್ ಮಾವಿನಕುಳಿ ಅವರ ’ಕಾಲಯಾನ’ ಎಂಬ ಕವನಸಂಕಲನ ಹಸ್ತಪ್ರತಿಯು ಗೆದ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷರಾದ ಡಾ. ನಾ.ಮೊಗಸಾಲೆಯವರು ಪ್ರಕಟಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಒಟ್ಟು ೯೭ ಹಸ್ತಪ್ರತಿಗಳು ಬಂದಿದ್ದು, ವಿಮರ್ಶಕರೂ, ಕವಿಗಳೂ ಆಗಿರುವ ಡಾ. ವಸಂತಕುಮಾರ್ ಪೆರ್ಲ ಮಂಗಳೂರು,ಶ್ರೀ ಸುಬ್ರಾಯ ಚೊಕ್ಕಾಡಿ, ಡಾ.ಎಸ್.ಆರ್. ಅರುಣಕುಮಾರ್ ಅವರುಗಳು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ. ೧೯೭೯ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ...