ಹಿರ್ಗಾನ ನೆಲ್ಲಿಕಟ್ಟೆಯಲ್ಲಿ ಭಕ್ತರ ದಂಡು: ಮೊದಲ ನೇಮೋತ್ಸವ ಸಂಭ್ರಮ:












ಹಿರ್ಗಾನ ನೆಲ್ಲಿಕಟ್ಟೆಯಲ್ಲಿ ಭಕ್ತರ ದಂಡು:
ಮೊದಲ ನೇಮೋತ್ಸವ ಸಂಭ್ರಮ:
ಪತ್ರನಾಜೆಯ ಬಳಿಕ ಕರಾವಳಿ ಕರ್ನಾಟಕದಲ್ಲಿ ನಡೆಯುವ ಮೊತ್ತಮೊದಲ ನೇಮೋತ್ಸವ ಕಾರ್ಕಳ ತಾಲೂಕಿನ ಹಿರ್ಗಾನ ಹಾಡಿ ಶ್ರೀ ಬ್ರಹ್ಮ ಬೈದರ್ಕಳ:
ಮಾಯಂದಾಲ ದಏವಿ ಸನ್ನಿಧಿಯಲ್ಲಿ ಶನಿವಾರ ಮತ್ತು ಭಾನುವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಸಿಂಹ ಸಂಕ್ರಮಣದ ದಿನದಂದು ಆರಂಭವಾಗಿ ಮೂರುದಿನಗಳ ಬಾರಿ ಸಂಖ್ಯೆಯ ಭಕ್ತಾಭಿಮಾನಿಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು. ಭಾನುವಾರ
ಶನಿವಾರ ರಾತ್ರಿ ೮.೩೦ ರಿಂದ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಿತು. ಅದಕ್ಕೂ ಮುನ್ನ ಬ್ರಹ್ಮೆರ್ ಬಲಿ ಸೇವೆ ನಡೆಯಿತು.
ಇಲ್ಲಿನ ಮಾಯಂದಲ ದೇವಿಯು ಬಹಳ ಪ್ರಸಿದ್ಧಿಯಾಗಿದ್ದು ದೇವಿಯ ನೇಮೋತ್ಸವ ಭಾನುವಾರ ೧೧.೩೦ ರಿಂದ ಆರಂಭವಾಗಿ ರಾತ್ರಿಯವರೆಗೆ ಮುಂದುವರೆಯಿತು.
ಸಂತಾನ, ಮದುವೆಗಾಗಿ, ಕಳೆದು ಹೋದ ವಸ್ತುಗಳಿಗಾಗಿ ಇಲ್ಲಿಗೆ ಹರಕೆ ಸಲ್ಲಿಸಿ ಫಲ ಪಡೆದವರು ಮಾಯಂದಲ ದೇವಿಯಿಂದ ಪ್ರಸಾದ ಸ್ವೀಕರಿಸಿ
ಧನ್ಯರಾಗುವ ಕ್ಷಣಗಳು ದಾಖಲಾದವು.
ಶಿವಮೊಗ್ಗ, ಮುಂಬಯಿ, ಬೆಂಗಳೂರು, ಪೂನಾ, ವಿದೇಶದಲ್ಲಿರುವವರು ಮತ್ತು ಕರಾವಳಿಯ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಸಾಮಾಜಿಕ ನ್ಯಾಯ ವ್ಯವಸ್ಥೆ
ಭಕ್ತ ವರ್ಗಕ್ಕೆ ಸೇರಿದವರ ಧಾರ್ಮಿಕ, ಸಾಮಾಜಿಕ ಮತ್ತು ಕೌಂಟುಂಬಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಶ್ನೆ ಕಾರ್ಯಕ್ರಮ ಸುಮಾರು ಎಂಟು ಗಂಟೆಗಳ ಕಾಲ ನಡೆಯುತ್ತದೆ.
ಪ್ರವೀಣ್ ಭಟ್ ಕನಂಗಿ ಪ್ರಧಾನ ತಂತ್ರಿಗಳು ಪ್ರಶ್ನೆ ಮತ್ತು ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.
ಆಡಳಿತ ಸಮಿತಿಯ ಅಧ್ಯಕ್ಷ ಎಚ್. ಶಿವಣ್ಣ, ಕಾರ್ಯದರ್ಶಿ ರವೀಂದ್ರ ಪೂಜಾರಿ, ಪ್ರಧಾನ ಅರ್ಚಕ ಕೃಷ್ಣಪ್ಪ ಪೂಜಾರಿ ಮತ್ತು ನೂರಾರು ಸ್ವಯಂ ಸೇವಕರು ವ್ಯವಸ್ಥೆಯಲ್ಲಿ ಸಹಕರಿಸಿದರು.
ವರ್ಷಾವಧಿ ಉತ್ಸವದ ಮೊದಲ ದಿನವಾದ ಶುಕ್ರವಾರ ಶ್ರೀನಿವಾಸ ಕೃಪಾ ಕಾನಂಗಿ ಅವರ ಸೇವೆಯಾಗಿ ಅನ್ನ ಸಂತರ್ಪಣೆ ನಡೆಯಿತು.
ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆಯನ್ನು ೧.೫೭ ಕೋಟಿ ರೂಪಾಯಿಯ ಯೋಜನೆಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದು ಸಂಪೂರ್ಣ ಶಿಲಾಮಯವಾಗಿ ನವೀಕರಿಸಲಾಗುತ್ತಿದೆ.

Pages 371234 »
Twitter Facebook Delicious Digg Favorites More

 
Twitter Facebook Delicious Digg Favorites More