ಕೃಷ್ಣನೇ ಮೊಸರು ಕುಡಿಕೆ ಒಡೆಯುವ ರಾಷ್ಟ್ರದ ವಿಶೇಷ:


ಕೃಷ್ಣನೇ ಮೊಸರು ಕುಡಿಕೆ ಒಡೆಯುವ ರಾಷ್ಟ್ರದ ವಿಶೇಷ:
 ಕರಾವಳಿಯ ಮೂಡುಬಿದಿರೆಯಲ್ಲಿ ಶ್ರೀ ಕೃಷ್ಣನೇ
ಮೊಸರು ಕುಡಿಕೆ ಒಡೆಯುವ ಸಂಪ್ರದಾಯ. ಇಲ್ಲಿ ಕೃಷ್ಣನಲ್ಲದೆ ಬೇರೆ ಯಾರೂ ಮೊಸರು ಕುಡಿಕೆ ಒಡೆಯುವಂತಿಲ್ಲ. ಒಡೆಯುವುದಿಲ್ಲ.
ರಾಷ್ಟ್ರದಾದ್ಯಂತ ಆಗಸ್ಟ್ 28- 29ರಂದು ಶ್ರೀ ಕೃಷ್ಣಾಷ್ಟಮಿ ಮತ್ತು ಅದರ ಪ್ರಯುಕ್ತ ಮೊಸರು ಕುಡಿಕೆ ಉತ್ಸವಗಳು ನಡೆಯುವುದು ಮತ್ತು ಮಾನವ ಶಕ್ತಿಯಿಂದ ಅದನ್ನು ಒಡೆಯುವುದು ಸಂಪ್ರದಾಯವಾದರೆ ಇಲ್ಲಿ ಅದಕ್ಕೆ ತದಿರುದ್ಧವಾಗಿ ಶ್ರೀ ಕೃಷ್ಣನೇ ಬೀದಿಗಳಿದು ರಸ್ತೆಯುದ್ಧಕ್ಕೂ ಕಟ್ಟಲಾದ ಮೊಸರು- ಬಣ್ಣದುಂಬಿದ ಮತ್ತು ಇತರ ವಸ್ತುಗಳಿಂದ ಕೂಡಿದ ಮೊಸರು ಕುಡಿಕೆಗಳನ್ನು ಒಡೆಯುವುದು ವಿಶೇಷ.
ಹಾಗಾದ್ರೆ ಕೃಷ್ಣ ಯಾರು? ಬರುವುದು ಎಲ್ಲಿಂದ ಎಂಬುದು ಇಲ್ಲಿ ಮುಖ್ಯವಾಗುತ್ತದೆ.
 ಮೂಡುಬಿದಿರೆ ಕೆಳ ಪೇಟೆಯ ಶ್ರೀ ಕೃಷ್ಣ ದೇವಾಲಯದಿಂದ ಯಕ್ಷಗಾನ ರೂಪಿ ಅಂದ್ರೆ ತೆಂಕು ತಿಟ್ಟಿನ ವೇಷಧಾರಿ ಕೃಷ್ಣ ಮಧ್ಯಾಹ್ನದ ಪೂಜೆ ಮುಗಿಸಿ ಹೊರಟರೆ ಮತ್ತೆ ದೇವಾಲಯ ಸೇರುವುದು ರಾತ್ರಿಯೇ ಸರಿ.
ದಾರಿಯುದ್ದಕ್ಕೂ ಅಂಗಡಿ- ವಹಿವಾಟುದಾರರು ಮತ್ತು ವಿವಿಧ ಸಂಸ್ಥೆಗಳು ಕಟ್ಟುವ ಮಡಕೆಗಳನ್ನು ಯಕ್ಷಗಾನ ಹಿಮ್ಮೇಳದೊಂದಿಗೆ ಕುಣಿದು  ಕೃಷ್ಣ ವೇಷಧಾರಿ ಒಡೆಯುತ್ತಾ ಹೋಗುವುದು ತೀರಾ ವಿಶಿಷ್ಟವಾದ ಮತ್ತು ಮೂಡುಬಿದಿರೆಗೆ ಮಾತ್ರ ಇರುವ ವಿಶೇಷ ಆಕರ್ಷಣೆ.
ನಾಗರ ಕಟ್ಟೆ ಮತ್ತು ವೆಂಕಟರಮಣ ದೇವಾಲಯದ ವಠಾರದಲ್ಲಿ ಕೃಷ್ಣ ಮಿತ್ರ ಮಂಡಳಿಗಳು ಅಷ್ಟಮಿ ಪ್ರಯುಕ್ತ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿವೆ. ಸಾವಿರಾರು ಮಂದಿ ಕಾರ್ಯಕ್ರಮವನ್ನು ಆಸ್ವಾದಿಸಿದರು.

Twitter Facebook Delicious Digg Favorites More

 
Twitter Facebook Delicious Digg Favorites More