ಪತ್ರಕರ್ತ ಶೇಖರ ಅಜೆಕಾರು ಅವರ ಚೆಲುವ ಮೂಡುಬಿದಿರೆ ಬಿಡುಗಡೆ

ಮೂಡುಬಿದಿರೆ:

ಚೆಲುವ ಮೂಡುಬಿದಿರೆ ಪುಸ್ತಕವನ್ನು ನಗರದ ಹಿರಿಯ ವಾಹನ ಚಾಲಕ ಗುಮ್ಮಣ್ಣ ಅವರು ಮೂಡುಬಿದಿರೆಯ ಬಸ್ ಸ್ಟ್ಯಾಂಡ್ ರಿಕ್ಷಾ ಪಾರ್ಕ್‌ನಲ್ಲಿ ಬಿಡುಗಡೆಗೊಳಿಸಿದರು. ಅವರು ಇಂತಹ ಪ್ರಯತ್ನಗಳಿಗೆ ಶುಭಗಳಿರಲಿ ಎಂದು ಹಾರೈಸಿದರು. ಈಗ ತಂತ್ರಜ್ಞಾನ ಯುಗ ಸರ್ವರಿಗೂ ಸಮಾನ ಅವಕಾಶಗಳು ದೊರೆಯುವ ಕಾಲ.ಹಿಂದಿನ ಕಾಲದಲ್ಲಿ ವಿದ್ಯೆ ಸೇರಿದಂತೆ ಎಲ್ಲವೂ ಶ್ರೀಮಂತಾಳರಿಗೆ ಇರುತ್ತಿತ್ತು. ಜನ ಸಾಮಾನ್ಯರು ಕೂಡಾ ಈಗ ತಮ್ಮ ಮಕ್ಕಳಿಗೆ ಕಲಿಸಿ ಅವರನ್ನು ದೊಡ್ಡ ದೊಡ್ಡ ಹುದ್ದೆಗಳಿಗೆ ಹೋಗುವಂತೆ ಮಾಡ ಬಹುದು ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಅಭಯಚಂದ್ರ ಅವರು ಹೇಳಿದರು. ಊರಿನ ಬಗೆಗಿನ ಪುಸ್ತಕಗಳು ಊರಿನ ಕೀರ್ತಿಯನ್ನು ನಾಲ್ಕು ದೆಸೆಗೆ ಪಸರಿಸಲು ಕಾರಣವಾಗುತ್ತದೆ.ಊರಿಗೆ ಬರುವವರಿಗೂ ಕೂಡಾ ಇದು ಮಹತ್ವದ್ದು ಎಂದು ಅವರು ಹೇಳಿದರು. ಊರಿನ ಪುಸ್ತಕ ಊರಿನ ಜನರಿಗೆ ಜನರಿಗೆ ಮತ್ತು ಹೊರ ಊರಿನವರಿಗೂ ಮಾರ್ಗದರ್ಶಿಯಾಗಿದೆ ಎಂದು ಅತಿಥಿಗಳಾಗಿದ್ದ ಪುರ ಸಭಾ ಅಧ್ಯಕ್ಷ ರತ್ನಾಕರ ದೇವಾಡಿಗ ಹೇಳಿದರು. ಕಾಳಿಕಾ ಗ್ರಾಫಿಕ್ಸ್ ನ ಮಾಲಕಿ ಶಾಂತಲಾ ಎಸ್.ಆಚಾರ್ಯ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಶಾಂತ್ ಅಂಚನ್, ಉಪಾಧ್ಯಕ್ಷ ನಾರಾಯಣ್,ಸೌಮ್ಯಶ್ರೀ ಶೇಖರ ಅಜೆಕಾರು ಮತ್ತು ಪತ್ರಕರ್ತ ಬಂಧುಗಳು ಉಪಸ್ಥಿತರಿದ್ದರು. ಲೇಖಕ ಶೇಖರ ಅಜೆಕಾರು ಅವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Twitter Facebook Delicious Digg Favorites More

 
Twitter Facebook Delicious Digg Favorites More