ಕಂಬಳ ಬುಕ್ ಇಂಟರ್ ನೆಟ್ ಆವೃತ್ತಿ ಬಿಡುಗಡೆ:

ಕಂಬಳ ಬುಕ್ ಇಂಟರ್ ನೆಟ್ ಆವೃತ್ತಿ ಬಿಡುಗಡೆ:
ಲೇಖಕ ಶೇಖರ ಅಜೆಕಾರು ಅವರಿಂದ ಹೊಸ ಪರಿಕಲ್ಪನೆ

ಮಂಗಳೂರು: ತನ್ನ ವೇಗವನ್ನು ಹೆಚ್ಚಿಸಿಕೊಂಡು ಹೋಗುತ್ತಿರುವ ಕಂಬಳಕ್ಕೆ ಆಧುನಿಕ ತಂತ್ರಜ್ಞಾನದ ಕೊಡುಗೆಯಾದ ಅಂತರ್‌ಜಾಲದ ಸ್ಪರ್ಶ ಬೇಕಿತ್ತು ಅದನ್ನು ಶೇಖರ ಅಜೆಕಾರು ನೀಡಿದ್ದಾರೆ ಎಂದು ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ಜೀವಂಧರ್ ಬಲ್ಲಾಳ್ ಅವರು ಹೇಳಿದರು.ಅವರು ಶೇಖರ ಅಜೆಕಾರು ಅವರ ಕಂಬಳ ಬುಕ್ -೧ ರ ಅಂತರ್ ಜಾಲ ಆವೃತ್ತಿಯನ್ನು ಮಂಗಳೂರಿನ ಪತ್ರಿಕಾಭವನದಲ್ಲಿ ಮಂಗಳವಾರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ದೇಶ ವಿದೇಶದಿಂದ ಬಂದವರು ಕಂಬಳದ ಬಗ್ಗೆ ಮಾಹಿತಿ ಇದೆಯಾ ಎಂದು ಕೇಳುತ್ತಾರೆ.ಅವರಿಗೆ ಇದು ತುಂಬಾ ಉಪಯೋಗಕಾರಿಯಾಗಿದೆ.ಇಂತಹ ಪಯತ್ನಗಳು ನಿರಂತರ ನಡೆಯುತ್ತಿರಲಿ ಎಂದು ಸಮಿತಿ ಆಶಿಸುತ್ತದೆ ಎಂದು ಅವರು ನುಡಿದರು.
ಕರಾವಳಿಯ ಕಂಬಳಕ್ಕೆ ಕಾಲ ಕಾಲಕ್ಕೆ ದಾಖಲೆಯ ಅಗತ್ಯವಿದೆ. ಈ ದೃಷ್ಟಿಯಿಂದ ಇಂತಹ ಪುಸ್ತಕಗಳು ಅಗತ್ಯ.ಡಾ.ಜೀವಂಧರ್ ಬಲ್ಲಾಳ್ ಅವರಂತಹ ಮಹನೀಯರು ಕಂಬಳವನ್ನು ನಡೆಸಿಕೊಂಡು ಆ ಕ್ಷೇತ್ರಕ್ಕೆ ಕೊಡುಗೆ ಕೊಟ್ಟವರು, ಅವರು ನಿಜವಾದ ಕಂಬಳ ಕರ್ತರು ಎಂದು ಅತಿಥಿಗಳಾಗಿದ್ದ ಲೇಖಕ ಬೋಲ ಚಿತ್ತರಂಜನ ಶೆಟ್ಟಿ ಅವರು ಹೇಳಿದರು.
ಗೆಳೆಯರೆಲ್ಲಾ ಸೇರಿ ವಿದೇಶದಲ್ಲಿ ಸ್ಥಾಪಿಸಿದ ದೈಜಿ ದುಬಾಯಿಯಂತಹ ಸಂಸ್ಥೆಗಳು ಅಲ್ಲಿ ಆಟ, ನಾಟಕ, ಕೋಳಿ ಅಂಕ ಸಹಿತ ಬಹುತೇಕ ಪ್ರಕಾರಗಳನ್ನು ಅಲ್ಲಿ ಮಾಡಿ ತೋರಿಸಿದ್ದಾವೆ.ಆದರೆ ಕಂಬಳ ಮಾತ್ರ ಮಾಡಲಾಗಿಲ್ಲ. ಈಗ ಅಂತರ್ ಜಾಲದ ಮೂಲಕ ಆ ಕುರಿತು
ಸಾರ್ವಜನಿಕರಿಗೆ ತಿಳಿಯುಂತೆ ಪುಸ್ತಕವೊಂದರ ಪ್ರಕಟಣೆ ಖುಷಿ ಕೊಡುವಂತಹದ್ದು ಎಂದು ಮಂಗಳೂರಿನ ಏಕೈಕ ಇಂಗ್ಲಿಷ್ ವಾರಪತ್ರಿಕೆ ದೈಜಿವರ್ಲ್ಡ್ ವೀಕ್ಲಿಯ ಸಂಪಾದಕ ಹೇಮಾಚಾರ್ಯ ಅವರು ಅಭಿಪ್ರಾಯ ಪಟ್ಟರು.
ಶಾಸಕ ಕೆ.ಅಭಯಚಂದ್ರ ಅನುಪಸ್ಥಿತಿಯಲ್ಲಿ ಬಲ್ಲಾಳ್ ಅವರು ಅಂತರ್‌ಜಾಲ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಿದರು.
ಯಾವುದೇ ಕನ್ನಡ ಪಾಂಟ್ ( ಅಕ್ಷರ) ಇಲ್ಲದೆಯೂ ಕನ್ನಡಿಗರು ನೋಡಬಹುದಾಗಿದೆ.
ಲೇಖಕ ಶೇಖರ ಅಜೆಕಾರು ಮಾತನಾಡಿ ಇದೊಂದು ಹೊಸ ಪ್ರಯತ್ನ. ಮುದ್ರಿತ ಪುಸ್ತಕವನ್ನು ದ.ಕ.ಉಸ್ತುವಾರಿ ಸಚಿವ ಜೆ, ಕೃಷ್ಣ ಪಾಲೇಮಾರ್ ಅವರು ಜಪ್ಪಿನ ಮೊಗರು ಕಂಬಳದ ಮಂಜೊಟ್ಟಿಯಲ್ಲಿ ಬಿಡುಗಡೆಗೊಳಿಸಿದ್ದರು. ಈಗ ಅದು ವಿಶ್ವದ ಇಲ್ಲರಿಗೂ ಸಿಗುವಂತಾಗಲಿ ಎಂಬ ಉದ್ದೇಶ ಈಡೇರಿದೆ. ಬಹಳ ಸಂತಸವಾಗಿದೆ ಎಂದರು. ಕಂಬಳ ಬುಕ್ ೧೪೮ ಮಂದಿಯನ್ನು ಸಂದರ್ಶಿಸಿ ಪಡೆದ ಮಾಹಿತಿಯ ಆಧಾರದಲ್ಲಿ ಕಂಬಳ ಬುಕ್ ನೀಡುವ ಗೌರವ ವಿಜೇತರ ಪಟ್ಟಿ ಬಿಡುಗಡೆ ಮಾಡಿದರು.
ವಿಜೇತರು:
ಕಂಬಳ ಬುಕ್ ಜೀವಿತ ಶ್ರೇಷ್ಠ ಗೌರವ: ಬಾರಾಡಿ ಸೂರ್ಯ-ಚಂದ್ರ ಕಂಬಳ
ಕಂಬಳ ಬುಕ್ ವರ್ಷದ ಶ್ರೇಷ್ಠ ಕಂಬಳ: ೧:ಮೂಡುಬಿದಿರೆ ಕೋಟಿ- ಚೆನ್ನಯ ಕಂಬಳ
ಕಂಬಳ ಬುಕ್ ವರ್ಷದ ಶ್ರೇಷ್ಠ ಕಂಬಳ:೨: ಮಿಯಾರು ಲವ-ಕುಶ ಕಂಬಳ
ಕಂಬಳ ಬುಕ್ ವರ್ಷದ ಶ್ರೇಷ್ಠ ಕಂಬಳ:೩:ಪುತ್ತೂರು ಕೋಟಿ-ಚೆನ್ನಯ ಕಂಬಳ
ಕಂಬಳ ಬುಕ್ ವರ್ಷದ ಶ್ರೇಷ್ಠ ಕಂಬಳ ಪ್ರೋತ್ಸಾಹಕ:ಬಾರಾಡಿ ಸೂರ್ಯ-ಚಂದ್ರ ಕಂಬಳ
ಪಿಳಿಕುಳ ನೇತ್ರಾವತಿ -ಪಲ್ಗುಣಿ ಕಂಬಳ
ಕಂಬಳಬುಕ್ ಯುವ ಸಾಧಕ: ಚಂದ್ರಹಾಸ ಸಾಧು ಸನಿಲ್ ಮೂಡುಬಿದಿರೆ.
ಮುಂದಿನ ಕಾರ್ಯಕ್ರಮದಲ್ಲಿ ಈ ಗೌರವ ಫಲಕಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

Twitter Facebook Delicious Digg Favorites More

 
Twitter Facebook Delicious Digg Favorites More