ಕುರ್ಪಾಡಿ ಶ್ರೀ ಪುರಾತನ ಬೊಬ್ಬರ್ಯ ಸ್ಥಾನ
ಆಜೆಕಾರಿನಿಂದ ಒಂದೂವರೆ ಕಿಮಿ ದೂರದಲ್ಲಿರುವ ಕುರ್ಪಾಡಿ ಶ್ರೀ ಪುರಾತನ ಬೊಬ್ಬರ್ಯ ಸ್ಥಾನ ಪರಿಸರ ಭಕ್ತರ ಇಷ್ಟಾರ್ಥ ಸಿದ್ದಿಯ ಕ್ಷೇತ್ರವಾಗಿ ಜನಮನದಲ್ಲಿ ಪ್ರತಿಷ್ಠಾಪಿಸಲ್ಫಟ್ಟಿದೆ.
ಅನಾದಿ ಕಾಲದಿಂದಲೂ ಆ ಕರೆಯ ಜನರ ಆರಾಧ್ಯ ದೈವವಾಗಿ ಪೂಜಿಸಲ್ಪಟ್ಟಿರುವ ಬೊಬ್ಬರ್ಯ ನೆಲೆಯಾದದ್ದು ಯಾವಾಗ ಎಂಬುದು ಖಚಿತವಾಗಿ ಗೊತ್ತಿಲ್ಲವಾದರೂ ನೂರಕ್ಕೂ ವರ್ಷಗಳಷ್ಟು ಹಿಂದೆಯೇ ಇಲ್ಲಿ ಕೋಲ ನಡೆಯುತ್ತಿದ್ದುದು ಹಿರಿಯರಿಂದ ತಿಳಿದು ಬರುತ್ತದೆ.
ಪ್ರತೀ ಸಂಕ್ರಾತಿಗೆ ಇಲ್ಲಿ ಪೂಜೆ ನಡೆಯುತ್ತಾ ಬಂದಿದೆ.
ಮುಲತಹ ಬೊಬ್ಬರ್ಯನ್ನು ಜಾನುವಾರುಗಳ ರಕ್ಷಕ ದೈವವೆಂದು ನಂಬಲಾಗಿದೆ.ಹಾಗಾಗಿ ದನ ಕರುಗಳಿಗೆ ಏನಾದರೂ ತೊಂದರೆಯಾದರೆ ಅಥವಾ ಅವು ತಪ್ಪಿಸಿ ಕೊಂಡರೆ ಜನ ಬೊಬ್ಬರ್ಯನಿಗೇ ಹರಕೆ ಹೇಳುವುದು.ಹಾಗೆ ನೋಡಿದರೆ ಈ ಬೊಬ್ಬರ್ಯನ ಮೂಲ ಮೂಲ್ಕಿಯ ಬಪ್ಪ ಬ್ಯಾರಿಯೊಂದಿಗೆ ತಳಕು ಹಾಕುತ್ತದೆ. ಹಾಗಾಗಿ ಇದೊಂದು ಧರ್ಮ ಸಾಮರಸ್ಯದ ದೈವ. ಮುಸ್ಲಿಮ್ ದೈವ ಹಿಂದುಗಳಿಂದ ಪೂಜೆ ಇದು ಇಲ್ಲಿನ ವಿಶೇಷ.
ಮೊದಲು ಮಿತ್ತಬೆಟ್ಟಿನ ಶಿವಣ್ಣ ಶೆಟ್ಟಿ ಪೂಜೆಗಳನ್ನು ನೆರವೇರಿಸುತ್ತಿದ್ದರು.ಅವರು ಒಮ್ಮೆ ಅನಾರೋಗ್ಯ ಹೊಂದಿದಾಗ ತನಗೆ ಈ ಕೆಲಸದಿಂದ ನಿವ್ರತ್ತಿ ನೀಡ ಬೇಕೆಂದು ದೈವದ ಕೋಲದ ವೇಳೆ ಬೇಡಿ ಕೊಂಡರು.
"ಆಗ ನಿನಗೆ ಆರೋಗ್ಯ ಮರಳಿಸಿದರೆ ಸೇವೆ ಮಾಢಲು ಮನಸ್ಸಿದೆಯಾ " ಎಂದಾಗ ಹೌದು ಒಂದೆರಡು ವರ್ಷವಾದರೂ ಮಾಡಬೇಕೆಂದಿದ್ದೇನೆ. ಎಂದರು.
ಆ ಬಳಿಕ ಪವಾಡ ಸದ್ರಶ ಎಂಬಂತೆ ಅವರು ಮುಂದಿನ ಎರಡು ವರ್ಷ ಸೇವೆ ಸಲ್ಲಿಸಿ ಆ ಪಟ್ಟವನ್ನು ಆಕಾಶ ಬೆಟ್ಟಿನ ಕೃಷ್ಣ ಶೆಟ್ಟಿಯವರಿಗೆ ವಹಿಸಿದರು.ಇತ್ತೀಚೆಗೆ ಶಿವಣ್ಣ ಶೆಟ್ಟಿ ನಿಧನರಾದರು.
ಈಗ ಕಳೆದ ಕೆಲವರ್ಷಗಳಿಂದ ವಾರ್ಷಿಕ ಕೋಲ ಸೇವೆಯು ಬಹಳ ಅರ್ಥಪೂರ್ಣವಾಗಿ ನಡೆಯುತ್ತಿದೆ.ಸಂಬಂಧ ಪಟ್ಟ ಮನೆಯವರ ವಂತಿಕೆಯಿಂದ ಈ ಕೋಲ ನಡೆಯುತ್ತಿದೆ.
ಈ ಕ್ಷೇತ್ರವನ್ನು ಧಾರ್ಮಿಕ,ಸಾಂಸ್ಕ್ರತಿಕ ಕೇಂದ್ರವಾಗಿ ಬೆಳೆಸುವ ಬಗೆಗೆ ಆ ಕ್ಷೇತ್ರದ ವ್ಯಾಪ್ತಿ ನಿವಾಸಿ,ಸಂಘಟಕ ಶೇಖರ ಅಜೆಕಾರು ಕೇಳಿದಾಗ ದೈವದ ಅಪ್ಪಣೆಯಾಗಿದೆ.
ಈ ವರ್ಷ ಅದಕ್ಕೊಂದು ಸಮಿತಿ ರಚಿಸಿ ಕಾರ್ಯ ಪ್ರವ್ರತ್ತರಾಗುವಲ್ಲಿ ಕ್ಷೇತ್ರದ ಮುಂದಾಳುಗಳಲ್ಲಿ ಒಬ್ಬರಾಗಿರುವ ಬೈರೊಟ್ಟು ಶಿವಣ್ಣ ಶೆಟ್ಟಿ ಅವರೂ ಉತ್ಸುಕರಾಗಿದ್ದಾರೆ.
ಗ್ರಾಮೋತ್ಸವ:
ಗ್ರಾಮೋತ್ಸವಕ್ಕೂ ಈ ಬೊಬ್ಬರ್ಯ ಸ್ಥಾನಕ್ಕೂ ನೇರ ಸಂಬಂಧವಿದೆ.ಜಾತಿ ಮತ ಬೇಧ ಲಿಂಗ ಮರೆತು ನಾವೆಲ್ಲರೂ ಒಂದೇ ಎಂಬ ಮಂತ್ರದೊಂದಿಗೆ ನಾನು ಊರವರ ಸಹಕಾರ ಪಡೆದು ಗ್ರಾಮೋತ್ಸವ ಆಚರಿಸಲು ಹನ್ನೊಂದು ವರ್ಷಗಳ ಹಿಂದೆ ಹೆಜ್ಜೆ ಇರಿಸಿದಾಗ ಮೊದಲು ನೆನೆದದ್ದು ಬೊಬ್ಬರ್ಯ ದೈವವನ್ನೇ.
ಆಂದಿನಿಂದ ಇಂದಿನವರೆಗೆ ಅನೇಕ ಅಡ ತಡೆಗಳನ್ನು ದಾಟಿ,ಅನೇಕ ಗಣ್ಯ ಮಾನ್ಯರ ಪಾಲ್ಗೊಳ್ಳುವಿಕೆಯೊಂದಿಗೆ, ಹತ್ತಿರ ಹತ್ತಿರ ೪೦ ಮಂದಿ ಪ್ರತಿಭಾನ್ವಿತರನ್ನು ಗೌರವಿಸಿ,ಅನೇಕ ಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನದ ಮೊದಲ ವೇದಿಕೆಯಾಗಿ, ಸರ್ವ ಧರ್ಮದವರ ಭಾಗವಹಿಸುವ ಕಾರ್ಯಕ್ರಮವಾಗಿ ಮೂಡಿ ಬಂದಿದೆ.
ದಶಮಾನೋತ್ಸವ ನೆನಪಿಗಾಗಿ ನಡೆದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಾಹಿತ್ಯ ಲೋಕದ ಇತಿಹಾಸದಲ್ಲಿಯೇ ಹೊಸ ದಾಖಲೆ ನಿರ್ಮಿಸಿದೆ.ಡುಂಡಿರಾಜ್ ಅವರ ಅಧ್ಯಕ್ಷತೆ ಯಿತ್ತು.
ವಿವಿಧ ಧರ್ಮೀಯರಿಗೆ ಅವರವರ ಹಬ್ಬಗಳಿವೆ.ಗ್ರಾಮೋತ್ಸವ ಒಂದು ಧರ್ಮದವರ ವೇದಿಕೆ ಆಗ ಬಾರದು ಅದು ಸರ್ವಧರ್ಮ ಸಮನ್ವಯದ ಹಬ್ಬವಾಗ ಬೇಕು.
ಕಳೆದ ಹತ್ತು ವರ್ಷಗಳಲ್ಲಿ ಕರಾವಳಿಯಲ್ಲಿ ನೂರಾರು ಗ್ರಾಮೋತ್ಸವಗಳು ನಡೆಯುತ್ತಿವೆ. ಈ ಹೆಸರನ್ನು ಬಳಸಿ ಕಾರ್ಯಕ್ರಮವು ಎಲ್ಲಾ ಧರ್ಮದವರಿಗಾಗಿ ಎಂಬುದನ್ನು ಮನಗಾಣ ಬೇಕು.
ಕಾರ್ಕಳ ಅಜೆಕಾರು ಹಾದಿಯ ನೆಲ್ಲಿಕಟ್ಟೆಯಲ್ಲಿ ಒಂದು ಗ್ರಾಮೋತ್ಸವ ನಡೆಯುತ್ತದೆ ಅದು ಶುದ್ಧ ಹಿಂದು ಸಮಾವೇಶದಂತೆ.ದಯವಿಟ್ಟು ಅಂತವರು ಹಿಂದು ಮಹೋತ್ಸವವನ್ನೇ ಮಾಡಲಿ.ಗ್ರಾಮೋತ್ಸವ ದೇಶದ ಸಮಗ್ರತೆಯ ಹಬ್ಬವಾಗ ಬೇಕು ಎಂಬ ಆಸೆಯೊಂದಿಗೆ ಈ ಹಬ್ಬವನ್ನು ಆಯೋಜಿಸಿದ್ದೇವೆ.ಇದನ್ನು ಅರಿತು ಇನ್ನಷ್ಟು ಗ್ರಾಮೋತ್ಸವಗಳು ನಡೆಯಬೇಕು.
ಚಿತ್ರಗಳು:ವರದಿ: ಶೇಖರ ಅಜೆಕಾರು

Twitter Facebook Delicious Digg Favorites More

 
Twitter Facebook Delicious Digg Favorites More