ಅಜೆಕಾರು ಶಾಲೆಗೆ ಶತಮಾನೋತ್ಸವ ಸಂಭ್ರಮ ಅಜೆಕಾರು ಪರಿಸರದ ಜನರಿಗೆ ನೂರು ವರ್ಷಗಳಿಂದ ಶಿಕ್ಷಣ ನೀಡುತ್ತ ಬಂದಿರುವ ಆಜೆಕಾರು ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮುಂದಿನ ಫೆಬ್ರವರಿಯಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಲಿದೆ.ಈಗಾಗಲೇ ಸಮಿತಿ ಹತ್ತು ಹಲವು ಸಭೆಗಳನ್ನು ನ್ದೆಸಿದೆ.ಮುಂಬಯಿಯ ಉದ್ಯಮಿ ಶಿವರಾಮ ಶೆಟ್ಟಿ ಅವರು ತಮ್ಮ ಒಂದು ಲಕ್ಷ ರೂಪಾಯಿಯ ಕೊಡುಗೆ ನೀಡಿರುವುದಲ್ಲದೆ ತಮ್ಮ ಗೆಳೆಯರಿಂದ ನಾಲ್ಕು ಲಕ್ಷ ಒತ್ತು ಮಾಡಿ ಕೊಟ್ಟಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಅವರು ಸಮಿತಿಯ ಆಧ್ಯಕ್ಷರಾಗಿದ್ದಾರೆ.ಚಿನ್ನ ದೇವದಾಸ್ ಅಂಡಾರು ಅವರು ಕಾರ್‍ಯಾಧ್ಯಕ್ಷರಾಗಿದ್ದಾರೆ.ಮುಖ್ಯೋಪಾದ್ಯಾಯರಾದ ಮಂಜುನಾಥ್ ನಾಯ್ಕ್ ಪ್ರಢಾನ ಕಾರ್ಯದರ್ಶಿ.