ಅಜೆಕಾರ್ ಡಾಟ್ ಕಾಮ್ ತಿಂಗಳ ಸುದ್ದಿ: ಪ್ರತಿ ತಿಂಗಳೂ ಅಜೆಕಾರು ಗ್ರಾಮದ ಸುದ್ದಿಗಳನ್ನು ಸೇರಿಸಲು ಪ್ರಯತ್ನಿಸುತ್ತೇನೆ. ಹಾಗಾಗಿಅಜೆಕಾರು (ಮರ್ಣೆ) ಗ್ರಾಮಕ್ಕೆ ಸಂಬಂಧಿಸಿದವರು, ಎಲ್ಲೇ ಇದ್ದರೂ ಚಿತ್ರ ಸಹಿತ ಸುದ್ದಿ ಕಳುಹಿಸಿ ಕೊಡಿ.-- ಸಂಪಾದಕ.ಸೈಟಿಗೆ ಸ್ವಾಗತ:ವಿಶ್ವ ಗ್ರಾಮವಾಗುತ್ತಿರುವಾಗ ಈ ನಮ್ಮ ಗ್ರಾಮವನ್ನು ವಿಶ್ವದ ಜೊತೆಗೆ ಲಿಂಕ್ ಮಾಡುವ ಯತ್ನ ಇದು. ಇದೊಂದು ಸಾಹಸ ಎಂದು ಹೇಳಲಾರೆ. ನನ್ನ ಕುತೂಹಲ, ನಮ್ಮೂರಿನ ಬಗೆಗಿನ ಪ್ರೀತಿ, ವಿಶ್ವಾಸ ಈ ಸೈಟ್ ಆರಂಭಿಸಲು ಪ್ರೇರಣೆಯಾಯಿತು. ಭಾವೈಕ್ಯದ ಕ್ಷೇತ್ರ ಸಂತ ಲಾರೆನ್ಸರ ಅತ್ತೂರು ಈ ಪುಸ್ತಕ ಬರೆಯುತ್ತಿರುವಾಗ ಈ ಪುಸ್ತಕ ದೂರ ದೂರದ ಊರಿನ ಮಿತ್ರರುನೋಡುವಂತಾಗಬೇಕು ಎಂಬ ಭಾವನೆ ಬಲವಾಯಿತು.
ಹೆಮ್ಮೆಯಿಂದ ಹೇಳುತ್ತಿದ್ದೇನೆ. ಆದಿನ ಜ ೨೪ರ ಸಂಜೆ ೭.೧೦ಕ್ಕೆ ಪುಸ್ತಕ ಅತ್ತೂರಲ್ಲಿ ಬಿಡುಗಡೆಯಾದಾಗ ಆ ಪುಸ್ತಕ ಆ ಕ್ಷಣದಲ್ಲಿಯೇ ಅಂತರ್ ಜಾಲದಲ್ಲಿ ಲಭ್ಯವಿತ್ತು. ಹೀಗೆ ಏಕಕಾಲದಲ್ಲಿ ಕನ್ನಡದ ಪುಸ್ತಕ ಮುದ್ರಣ ಮತ್ತು ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟವಾದುದನ್ನು ನಾನು ಕೇಳಿದ್ದಿಲ್ಲ. ಈ ಹೊಸತನ ದಾಖಲೆ ಮುದ ನೀಡಿದೆ. ಅಜೆಕಾರು (ಮರ್ಣೆ)ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪೂರ್ಣ ವಿವರಗಳನ್ನು ಛಾಯಾಚಿತ್ರಗಳೊಂದಿಗೆ ಅಳವಡಿಸಲು ಯತ್ನಿಸುತ್ತಿದ್ದೇನೆ.ಬೇರೆ ಬೇರೆ ದೇಶದಲ್ಲಿರುವ ಊರುಗಳಲ್ಲಿರುವ ಅಜೆಕಾರು ಮೂಲದ ಸಾಧಕರನ್ನು ಜನರನ್ನು ಗುರುತಿಸುವ ಸಂಪರ್ಕಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಬೇಕು. ದೇವರ ದಯೆಯಿಂದ ಇಷ್ಟು ಯೋಚನೆ ಸಾಕಾರಗೊಂಡಿದೆ. ಇನ್ನಷ್ಟು ಬಯಕೆಗಳಿವೆ. ತಂದೆ,ತಾಯಿಯರನ್ನು, ಬಂಧು ಬಳಗದವರನ್ನು, ಗುರು ಹಿರಿಯರನ್ನು ಮಾಧ್ಯಮ ಸ್ನೇಹಿತರನ್ನು ಸ್ಮರಿಸುತ್ತೇನೆ. ಮತ್ತೆ ಸಿಗೋಣ, ಮತ್ತೊಂದು ದಾಖಲೆಯೊಂದಿಗೆ............
ಶೇಖರ ಅಜೆಕಾರು, ಸಂಪಾದಕ
Ajekar/ಅಜೆಕಾರು ಸುದ್ದಿ
8:45 PM
tuluva/ಅಜೆಕಾರು