ಸಾಣೂರು ಪಂಚಾಯತ್‌ನಲ್ಲಿ ಸಂವಾದ ಕುಡಿಯುನೀರು ಯೋಜನೆಯ ಅನುಷ್ಠಾನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಮಾದರಿಯಾಗಿರುವ ಸಾಣೂರು ಗ್ರಾಮ ಪಂಚಾಯತಿಗೆ ಜೂ। ೨೭ ರಂದು ಮೂರನೇ ಹಣಕಾಸು ಆಯೋಈಗದ ಅಧ್ಯಕ್ಷ ಎ.ಜಿ. ಕೋಡ್ಗಿ ಭೇಟಿ ನೀಡಿದರು. ಅವರು ಪಂಚಾಯತಿನ ವಿವಿಧ ಸಮಸ್ಯೆಗಳು, ಸಂಪನ್ಮೂಲ ಕ್ರೋಢೀಕರಣ ಕುರಿತಂತೆ ಪಂಚಾಯತ್ ಸದಸ್ಯರೊಂದಿಗೆ ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಿದರು. ಪಂಚಾಯತ್ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಅಧ್ಯಕ್ಷತೆ ವಹಿಸಿ ಉಪಯುಕ್ತ ಮಾಹಿತಿ ನೀಡಿದರು. ತಾ. ಪಂ. ಕಾರ್ಯ ನಿರ್ವಾಹಣಾ ಅಧಿಕಾರಿ ರಾಜೇಂದ್ರ ಬೇಕಲ್, ಎ. ಪಿ. ಎಂ. ಸಿ ಅಧ್ಯಕ್ಷ ನಕ್ರೆ ಅಂಥೋನಿ ಡಿ’ಸೋಜ , ತಾ. ಪಂ. ಅಧ್ಯಕ್ಷ ವಿಕ್ರಮ್ ಹೆಗ್ಡೆ, ಜಿ. ಪಂ. ಸದಸ್ಯೆ ವೀಣಾ ವಾಸು ಶೆಟ್ಟಿ , ತಾ. ಪಂ. ಸದಸ್ಯ ಸುಭಾಸ್ ಪಿ. ಕಾಮತ್, ಜಲಾನಯನ ಅಧಿಕಾರಿ ಶಾಂತಾರಾಮ ಶೆಟ್ಟಿ ಯುವ ಜನ ಅಧಿಕಾರಿ ಗಣಪಯ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಪತ್ರಕರ್ತರ ವೇದಿಕೆ (ರಿ) ಬೆಂಗಳೂರು ಇದರ ಉಡುಪಿ ಘಟಕವು ಸಾಣೂರು ಪಂಚಾಯತ್ ಸಹಯೋಗದೊಂದಿಗೆ ಸಾಣೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಕಾಶಕ.ಕಾಂನ ಸಂಪಾದಕ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಪತ್ರಕರ್ತ ರಾಜೇಶ್ ಶಿಬಾಜೆ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎ. ಜಿ. ಕೋಡ್ಗಿ ಪ್ರಶಸ್ತಿ ಪ್ರಧಾನಿಸಿದರು,