ಪ್ರಕಾಶ್ ಕಾಬೆಟ್ಟು ತನ್ನ ತೃತೀಯ ಚಿತ್ರ ಪಕ್ಕಿಲು ಮೂಜಿ ಚಿತ್ರೀಕರಣ pakkilu muuji cenema

ಕಾರ್ಕಳ : ಒಪೆರ ಡ್ರೀಮ್ ಮೂವೀಸ್ ಬ್ಯಾನರಿನಡಿ ಪ್ರಕಾಶ್ ಕಾಬೆಟ್ಟು ತನ್ನ ತೃತೀಯ ಚಿತ್ರ ನಿಮರ್ಿಸುತ್ತಿದ್ದಾರೆ.ಕಳೆದ ವರ್ಷ ಭವ ಕನ್ನಡ ಚಿತ್ರ ಬಿಡುಗಡೆಗೊಂಡಿದ್ದು ನಂತರ 'ನನ್ನ ಪ್ರೀತಿಯ ಮುನ್ಷಿ' ಸಂಪೂರ್ಣಗೊಂಡು ಬೆಳ್ಳಿಪರದೆಯಲ್ಲಿ ಮಿಂಚಲು ಸಿದ್ಧಗೊಂಡಿದೆ.ಈ ಚಿತ್ರ ಬಿಡುಗಡೆಗೆ ಸೂಕ್ತ ಸಮಯವನ್ನು ಎದುರು ನೋಡುತ್ತಿದ್ದಂತೆಯೇ ಪ್ರಕಾಶ್ ಕಾಬೆಟ್ಟುತಮ್ಮ ತೃತೀಯ ಕಾಣಿಕೆಯಾಗಿ 'ಪಕ್ಕಿಲು ಮೂಜಿ'ತುಳು ಸಿನಿಮಾ ನಿಮರ್ಿಸುತ್ತಿದ್ದಾರೆ.ತುಳುರಂಗದ ಪ್ರಬುದ್ಧ ಕಲಾವಿದರಾದ ಅರವಿಂದ ಬೋಳಾರ್,ಸತೀಶ್ ಬಂದಳೆ ಮುಂತಾದವರು ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮಂಗಳೂರಿನ ಬೆಡಗಿ ಹೀರಾ ಸನಿಲ್ ನಾಯಕಿಯಾಗಿದ್ದಾರೆ. 'ಪಕ್ಕಿಲು ಮೂಜಿ' ಚಿತ್ರವು ಹಾಸ್ಯ ಪ್ರಧಾನವಾಗಿದ್ದು ಪ್ರತಿಕಾರದ ಎಳೆಯನ್ನು ಇದಕ್ಕೆ ಪೋನಿಸಿ ಒಮದು ಕುತೂಹಲ ಭರಿತ ಕಥೆಯನ್ನು ಹೇಳುತ್ತದೆ ಎನ್ನುತ್ತಾರೆ ಪ್ರಕಾಶ್.ಚಿತ್ರದ ಬಹುತೇಕ ಭಾಗ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಕಾರ್ಕಳ ಮೂಡುಬಿದಿರೆ ಮಂಗಳೂರು,ಹೆಬ್ರಿ ಮತ್ತು ಕಾಪುವಿನಲ್ಲಿ ಚಿತ್ರಕರಣ ಸಾಗುತ್ತಿದೆ. 
ಚಿತ್ರಕ್ಕೆ ಸಂಗೀತ ರಾಜೇಶ್ ಭಟ್,ಚಿತ್ರೀಕರಣ ವೀಡಾ ಮೆಂಡೋನ್ಸ,ಪತ್ರಿಕಾ ಸಂಪರ್ಕ ಪಿಆರ್ಒ ಹೆಬ್ರಿ ಉದಯ ಕುಮಾರ್ ಶೆಟ್ಟಿ,ತಾಂತ್ರಿಕ ನಿರ್ಹಹಣೆ ಸಹಾಯಕನಾಗಿ ಕಿಶನ್ ಶೆಟ್ಟಿ ಸಹಕರಿಸುತ್ತಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿಮರ್ಾಪಕ ನಿದರ್ೇಶಕ ಪ್ರಕಾಶ್ ಕಾಬೆಟ್ಟು ತಿಳಿಸಿದ್ದಾರೆ.
 pakkilu muuji cenema

Twitter Facebook Delicious Digg Favorites More

 
Twitter Facebook Delicious Digg Favorites More