ಅಜೆಕಾರಿಗೊಂದು ಎ.ಸಿ ಹೋಟೇಲು ಆತಿಥ್ಯ

ಚಿತ್ರ,ವರದಿ: ಶೇಖರ ಅಜೆಕಾರು ಅಜೆಕಾರಿನ ಪಾರಂಪರಿಕಾ ಹೋಟೇಲುಗಳ ನಡುವೆ ಈಗಿನ ಜನಾಂಗಕ್ಕೆ ಬೇಕಾಗುವಂತಹ ಹೊಸ ಶೈಲಿಯ ಹೋಟೇಲ್ ಆತಿಥ್ಯ ಪೇಟೆಯ ಹೃದಯ ಭಾಗದ ಲೋಬೋ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾರಂಭಗೊಳಿಸಿದೆ. ಹೋಬಳಿ ಕೇಂದ್ರವಾಗಿದ್ದರೂ ನಾನಾ ಕಾರಣಗಳಿಗಾಗಿ ಬೆಳೆಯದ ಈ ಪೇಟೆಗೆ ಈಗ ಹೊಸ ಹೋಟೇಲು ಹವಾ ನಿಯಂತ್ರಿತ (ಎ.ಸಿ)ಕೋಣೆಯನ್ನು ಪರಿಚಯಿಸಿದೆ. ಅಜೆಕಾರಿನವರಾಗಿದ್ದು ವಿವಿದೆಡೆಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಇರುವ ಯುವಕರ ತಂಡ ಈ ಹೋಟೇಲನ್ನು ಊರಿಗೆ ಸಮರ್ಪಿಸಿದ್ದು, ಬೇಕಾದಷ್ಟು ಪಾರ್ಕಿಂಗ್ ಜಾಗ ಸುತ್ತ ಮುತ್ತ ಇರುವುದು ಪ್ಲಸ್ ಪಯಿಂಟ್. ಪ್ರಸಿದ್ಧ ಜೈನ ಕ್ಷೇತ್ರ ವಾರಂಗಕ್ಕೆ ಬರುವ ಯಾತ್ರಾರ್ಥಿಗಳು ಕಾರ್ಕಳ- ಮೂಡುಬಿದಿರೆ ಕಡೆ ಹೋಗುವವರಿಗೆ ಅನುಕೂಲ.ಪ್ರವಾಸಿಗಳಿಗೂ ಈ ಭಾಗದಲ್ಲಿ ಊಟ ಉಪಹಾರಕ್ಕೆ ಉತ್ತಮ ಅವಕಾಶ.ಬೆಳಗ್ಗೆ ೬.೦೦ ರಿಂದ ರಾತ್ರಿ ಹತ್ತರವರೆಗೆ ಸೇವೆ ನೀಡುತ್ತೇವೆ ಅಂತಾರೆ ಯುವಕರು.ನಗರಕ್ಕೆ ವಲಸೆ ಹೋಗದೆ ತಮ್ಮ ತಮ್ಮ ಊರಲ್ಲಿದ್ದು ಕೊಂಡು ಸಾಧನೆ ಮಾಡುವವರಿಗೆ ಇದು ಶುಭ ಸುದ್ಧಿ.


Twitter Facebook Delicious Digg Favorites More

 
Twitter Facebook Delicious Digg Favorites More