ಅಜೆಕಾರಿನ ನಿರಂತರ ನೇತಾರ: ಡಾ.ಸಂತೋಷ್ ಕುಮಾರ‍್ ಶೆಟ್ಟಿ

ರಾಜಕೀಯ, ಧಾರ್ಮಿಕ, ಸಾಮಾಜಿಕ,ವೈದ್ಯಕೀಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಾದ ಡಾ.ಸಂತೋಷ ಕುಮಾರ‍್ ಶೆಟ್ಟಿ ಅವರು ಅಜೆಕಾರಿನ ಪ್ರಶ್ನಾತೀತ ನೇತಾರರು. ಅಜೆಕಾರಿನ ಕೆಲ ಪುಡಿ ರಾಜಕಾರಣಿಗಳ ಅರಾಜಕೀಯದ ನಡುವೆ ಬೆಳೆದು ಬಂದ ಕೃಷಿ ಕುಟುಂಬದಿಂದ ಮತ್ತು ದೊಡ್ಡ ಹಿನ್ನಲೆಯ ಕುಟುಂಬದಿಂದ ಬಂದವರು ಅವರು. ೧೯೯೮-೯೯ ರ ತಾಲೂಕು ಸಾಹಿತ್ಯ ಸಮ್ಮೇಳನಗಳ ತಾಲೂಕು ಸಮ್ಮೇಳನಗಳಿಗೆ ಮೇಲ್ಪಂಕ್ತಿಯಾಗಿದ್ದು ಅದರ ನೇತೃತ್ವ ವಹಿಸಿದವರು ಅವರು. ಜಿಲ್ಲಾ ಪಂಚಾಯತ್ ಸದಸ್ಯರಾಗಿ, ವಿವಿಧ ಸಂಸ್ಥೆಗಳ ಪದಾಧಿಕಾರಿಗಳಾಗಿ,ಆದಿ ಗ್ರಾಮೋತ್ಸವದಂತಹ ವಿಶಿಷ್ಟ ಕಾರ್ಯಕ್ರಮದ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಮಾತಿನಂತೆ ಅವರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷಗಿರಿ ಸಿಗ ಬೇಕಿತ್ತು,ಸಿಗದಿದ್ದಾಗ ಒಂದು ಸೊಲ್ಲನ್ನು ಎತ್ತದ ರಾಜಕಾರಣಿ.ಮುಂದಿನ ಅವಧಿಯಲ್ಲಿ ಮೀಸಲಾತಿಯ ಕಾರಣದಿಂದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಜನಪ್ರಿಯರಾದರು. ತನ್ನ ಕ್ಷೇತ್ರವನ್ನು ಮಹಿಳಾ ಕ್ಷೇತ್ರವಾಗಿಸಿ ಎದುರು ಪಕ್ಷದವರು ಅವರ ರಾಜಕೀಯ ಮುಗಿಸಲು ಯತ್ನಿಸಿದರು.ರಾಜಕೀಯದಲ್ಲಿ ಸೋಲು ಗೆಲುವು ಒಂದೇ ಎಂದು ತಿಳಿದು ತನ್ನ ಪಕ್ಷಕ್ಕೆ ನೂರು ಶೇಕಡಾ ಪ್ರತಿ ಕೂಲ ಪರಿಸ್ಥಿತಿ ಇದ್ದ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋಲನ್ನು ಅನುಭವಿಸಿದರೂ ಇಂದಿಗೂ ತನ್ನ ಪಕ್ಷದಲ್ಲಿ ಈಗಿನ ಎಂಎಲ್ಎ ಅಭ್ಯರ್ಥಿಯನ್ನು ಬಿಟ್ಟರೆ ಎರಡನೇ ಸ್ಥಾನಕ್ಕೆ ಅಗತ್ಯ ಬಿದ್ದರೆ ಆ ಸ್ಥಾನಕ್ಕೂ ಅರ್ಹ ಮತ್ತು ಅವಿರೋಧ ಆಯ್ಕೆಯ ಅಭ್ಯರ್ಥಿ ಎಂಬುದು ಅವರ ಸಾರ್ಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


Twitter Facebook Delicious Digg Favorites More

 
Twitter Facebook Delicious Digg Favorites More