೩ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನ:
೧೨ ಮಂದಿ,೬ ಸಂಸ್ಥೆಗಳಿಗೆ ಗೌರವ ಜಯಂತ ಕಾಯ್ಕಿಣಿ ಅಧ್ಯಕ್ಷತೆ:
ಕಾರ್ಕಳ: ಸಾಹಿತ್ಯ ಸಮ್ಮೇಳನದ ಹೊಸ ಇತಿಹಾಸ ಬರೆಯುವ ಹಾದಿಯಲ್ಲಿ ನಡೆಯುತ್ತಿರುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಗುರುವಾರ ಸಂಜೆ ೬.೦೦ ರಿಂದ ಮರುದಿನ ಬೆಳಗ್ಗೆ ವರೆಗೆ ಕಾರ್ಕಳದ ಗೋಮಟೇಶ್ವರ ಬೆಟ್ಟದಲ್ಲಿ ನಡೆಯಲಿದೆ,
ಕನ್ನಡದ ವಿಶಿಷ್ಟ ಬರಹಗಳ ಮೂಲಕ ಇಪ್ಪತ್ತಕ್ಕೂ ಹೆಚ್ಚು ಕೃತಿ ಬರೆದು ಖ್ಯಾತರಾಗಿರುವ ಮತ್ತು ಅತೀ ಕಡಿಮೆ ವಯಸ್ಸಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಜಯಂತ ಕಾಯ್ಕಿಣಿ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದು ಸಾಹಿತ್ಯ ಸಮ್ಮೇಳನ ಸರ್ವಾಂಗಗಳನ್ನು ಒಳಗೊಂಡು ಸಮ್ಮೇಳನ ರಾತ್ರಿ ನಡೆಯಲಿದೆ.
ಸಂಜೆ ಆರಕ್ಕೆ ಮೆಟ್ಟಿಲುಗಳ ಮೂಲಕ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳು ಬೆಟ್ಟಕ್ಕೆ ಆಗಮಿಸಲಿದ್ದು ಆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು ಸಹಕರಿಸ ಬೇಕೆಂದು ಸಮಿತಿಯ ಅಧ್ಯಕ್ಷ ಮತ್ತು ಈ ಪರಿಕಲ್ಪನೆಯನ್ನು ನೀಡಿದ ಶೇಖರ ಅಜೆಕಾರು ಅವರು ವಿನಂತಿಸಿದ್ದಾರೆ.
ಮೋದಲ ಸಮ್ಮೇಳನ ಅಜೆಕಾರಿನಲ್ಲಿ ನಡೆದ ದಿನ ತುಳು ನಾಡಿನ ಕೆಡ್ಡೆಸ ಸಂಭ್ರಮವಿತ್ತು, ಈಗ ಮಹಿಳಾ ದಿನಾಚರಣೆ ಮತ್ತು ಹೋಳಿ ಹುಣ್ಣಮೆಯ ಸಂಭ್ರಮವಿದೆ.
ಮೆರವಣಿಗೆಯ ಬಳಿಕ ಗೋಮಟೇಶ್ವರ ಸ್ವಾಮಿಗೆ ಪೂಜೆ ನಡೆದು ಬಳಿಕ ಬಾಲ ಪ್ರತಿಭೋತ್ಸವ ದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಅಯನಾ ವಿ ರಮಣ್,ಶ್ವೇತಾ, ವಿಜೇತ್ ಉಳ್ಳಾಲ್,ಅಭಿಷೇಕ್ ಎಂ.ಬಿ, ಕೃಷ್ಣಪ್ರಸಾದ್,ಅನನ್ಯ ರೈ ಬಾಲ ಪ್ರತಿಭೋತ್ಸವದಲ್ಲಿ ಭಾಗವಹಿಸಿ ಬಾಲ ಪ್ರತಿಭಾ ಗೌರವ ಸ್ವೀಕರಿಸಲಿರುವರು.
ಬೆಳದಿಂಗಳ ಸಮ್ಮೇಳನದ ಗೌರವ
ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಂಪ್ರದಾಯದಂತೆ ರಾಜ್ಯದ ವಿವದೆಡೆಗಳ ೧೨ ಮಂದಿ ಗಣ್ಯರು, ೬ ಸಂಸ್ಥೆಗಳು ಮತ್ತು ದಂಪತಿಗಳನ್ನು ಬಿರುದಿನೊಂದಿಗೆ ಗೌರವಿಸಲಾಗುವುದು.
ಕೋಡು ಭೋಜ ಶೆಟ್ಟಿ ಮುಂಬಯಿ( ಕರ್ನಾಟಕ ಹೊರನಾಡ ರತ್ನ ), ಕೆ.ಪಿ.ನಂಜುಂಡಿ ವಿಶ್ವಕರ್ಮ, ಬೆಂಗಳೂರು (ಕರ್ನಾಟಕ ಕಲಾ- ಸಮಾಜ)ರತ್ನ), ಕು. ಗೋ ಉಡುಪಿ ( ಕರ್ನಾಟಕ ಹಾಸ್ಯ- ಸಾಹಿತ್ಯ ರತ್ನ), ರಾಮ್ ಶೆಟ್ಟಿ ಮುಂಬಯಿ,( ಕರ್ನಾಟಕ ಸಿನಿಮಾ ರತ್ನ), ನವೀನ್ ಡಿ ಪಡೀಲ್ ( ಕರ್ನಾಟಕ ತುಳುವ ರತ್ನ), ಮೆಲ್ವಿನ್ ರಾಡ್ರಿಗಸ್ ( ಕರ್ನಾಟಕ ಕೊಂಕಣಿ ರತ್ನ ), ಗಣೇಶ್ ಕೊಲಕಾಡಿ ( ಕರ್ನಾಟಕ ಯಕ್ಷ ಸಾಹಿತ್ಯ ರತ್ನ),ಪಟ್ಟಾಭಿರಾಮ ಸುಳ್ಯ ( ಕರ್ನಾಟಕ ಕಲಾ ರತ್ನ), ಎಚ್. ಗೋಪಾಲ ಭಂಡಾರಿ (ಕರ್ನಾಟಕ ರಾಜಕೀಯ ರತ್ನ), ಸ್ಟಿಪನ್ ಮೆಂಡಿಸ್ ( ಕರ್ನಾಟಕ ಉದ್ಯಮ ರತ್ನ ), ಎಸ್, ಜಯರಾಂ ( ಕರ್ನಾಟಕ ಮಾಧ್ಯಮ ರತ್ನ ), ಭಾರತಿ ಮರವಂತೆ( ಕರ್ನಾಟಕ ಕಲಾ ಮಾಧ್ಯಮ ರತ್ನ) ಗೌರವಕ್ಕೆ ಪಾತ್ರವಾಗಲಿದ್ದಾರೆ.
ಸಾಹಿತ್ಯ ಸಮ್ಮೇಳನದ ಕರ್ನಾಟಕ ಸಾಹಿತ್ಯ ದಂಪತಿ ಗೌರವವನ್ನು ಡಾ.ವಾಮನ ನಂದಾವರ ಮತ್ಯು ಚಂದ್ರಕಲಾ ನಂದಾವರ ಸ್ವೀಕರಿಸಲಿರುವರು.
ಉಡುಪಿಯ ಯಕ್ಷ ಕಲಾ ರಂಗ, ಮುಂಬಯಿಯ ಚಿನ್ನರ ಬಿಂಬ, ನಂದಿಕೇಶ್ವರ ನಾಟಕ ಸಂಘ, ಶಾಸ್ತ್ರೀಯ ಸಂಗೀತಾ ಸಭಾ ಎಕ್ಸ್ ಪೋರ್ಟ್, ಸ್ಪೂರ್ತಿ ಧಾಮ ಸಾಂಸ್ಥಿಕ ಸೇವಾ ಗೌರವವನ್ನು ಸ್ವೀಕರಿಸಲಿರುವರು..
ಡಾ.ಗೀತಾ ಅವರ ಕಣ್ಣೀರಿನ ಕವನಗಳು ಮತ್ತು ಪೆಗಾಸಿಸ್ ಎರಡು ಕವನಗಳ ಬಿಡುಗಡೆಯಾಗಲಿದೆ.
ಉದ್ಘಾಟನೆ, ಬಾಲ ಪ್ರತಿಭೋತ್ಸವ, ಮಹಿಳಾ ಗೋಷ್ಠಿ, ನಡುರಾತ್ರಿ ಕವಿಗೋಷ್ಟಿ, ಯುವ ಗೋಷ್ಟಿ, ಯಕ್ಷ-ಗಾನ- ಆಶು ವೈಭವ ಸೇರಿದಂತೆ ಆಹೋರಾತ್ರಿ ಗೋಮಟೇಶ್ವರನ ಸನ್ನಿಧಿಯಲ್ಲಿ ಸಾಹಿತ್ಯ ಸಮಾರಾಧನೆ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
೩ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನ: ೧೨ ಮಂದಿ,೬ ಸಂಸ್ಥೆಗಳಿಗೆ ಗೌರವ ಜಯಂತ ಕಾಯ್ಕಿಣಿ ಅಧ್ಯಕ್ಷತೆ:

