ಮಾರ್ಚ್ ೮ ರಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ:






ಮಾರ್ಚ್ ೮ ರಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ:
ವಿದ್ಯಾರ್ಥಿಗಳಿಗೆ, ಕವಿಗಳಿಗೆ ಆಹ್ವಾನ
ಮೂಡುಬಿದಿರೆ: ಮೂರನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನವು ಕಾರ್ಕಳದಲ್ಲಿ ಮಾಚ್ ೮ ರಂದು ನಡೆಯಲಿದ್ದು ನಡುರಾತ್ರಿ ಕವಿಗೋಷ್ಟಿಗಾಗಿ ಕವಿತೆಗಳನ್ನು ಆಹ್ವಾನಿಸಲಾಗಿದೆ.ನಡುರಾತ್ರಿ
ಭಾಗವಹಿಸಲಿಚ್ಚಿಸುವ ಕವಿ- ಕವಯತ್ರಿಯರು ತಮ್ಮ ಅಪ್ರಕಟಿತ ೪ ಕವಿತೆಗಳನ್ನು ಫೆಬ್ರವರಿ ೨೯ ರೊಳಗಾಗಿ ಕಳುಹಿಸ ಬಹುದಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಬೊರ್ಗಲ್ ಗುಡ್ಡೆ ಮಂಜುನಾಥ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಮತ್ತು ಮೊದಲ ಬಾರಿಗೆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳಿಗೆ ಶೇಕಡಾ ೫೦ ಅವಕಾಶವನ್ನು ಕಾಯ್ದಿರಿಸಲಾಗಿದೆ.ಕವಿಗಳು ತಮ್ಮ ವಿಳಾಸ ಮತ್ತು ಸರಿಯಾದ ಮೊಬಾಯಿಲ್ ಸಂಖ್ಯೆ, ಈ ಮೇಲ್ ಐಡಿ ( ಇದ್ದರೆ) ತಿಳಿಸುವ ಮುಲಕ ಸಹಕರಿಸ ಬೇಕು ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು:
ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ "ಸಾಹಿತ್ಯ ತಿಳಿಯೋಣ -ನಕ್ಕು ನಲಿಯೋಣ" ಹೆಸರಿನ ಸ್ಪರ್ಧೆಯನ್ನು ನಡುರಾತ್ರಿ ಆಯೋಜಿಸಲಾಗಿದ್ದು ಇದೊಂದು ವಿಶಿಷ್ಟ ಪ್ರಯೋಗವಾಗಿದೆ. ಕಾಲೇಜಿನಿಂದ ಭಾಗವಹಿಸುವವರು ಒಂದು ತಂಡದಲ್ಲಿ ಹತ್ತು ಜನ ಭಾಗವಹಿಸಬಹುದಾಗಿದ್ದು ಕಾಲೇಜಿನ ಅಧಿಕೃತ ಪತ್ರಗಳನ್ನು ಅಥವಾ ಕಾಲೇಜಿನ ಪ್ರಸಕ್ತ ವರ್ಷದ ಗುರುತು ಪತ್ರ ಹೊಂದಿರ ಬೇಕು ಸಾರ್ವಜನಿಕ ವಿಭಾಗದಲ್ಲಿ ಭಾಗವಹಿಸಲು ನಿಬಂಧನೆಗಳಿರುವುದಿಲ್ಲ.
ವಿಳಾಸ: ಅಧ್ಯಕ್ಷರು, ಬೆಳದಿಂಗಳ ಸಾಹಿತ್ಯ ಸಮ್ಮೆಳನ ಸಮಿತಿ, ಶ್ರೀ ಕಾಲೇಜು ,ಕಾಯರ್ ಮಂಜ್ ಮೂಡುಬಿದಿರೆ-೫೭೪೨೨೭ ದೂರವಾಣಿ ಈ ವಿಳಾಸಕ್ಕೆ ತಲುಪಿಸ ಬಹುದಾಗಿದೆ.

Twitter Facebook Delicious Digg Favorites More

 
Twitter Facebook Delicious Digg Favorites More