’ಕಂಬಳ ಬುಕ್’ ಅಂತರ್ಜಾಲ ಆವೃತ್ತಿ
ಫೆಬ್ರವರಿ ೨೯ ರಂದು ಬಿಡುಗಡೆ
ಕಂಬಳದ ಕುರಿತು ಪತ್ರಕರ್ತ ಶೇಖರ ಅಜೆಕಾರು ಅವರು ಬರೆದಿರುವ ಕಂಬಳ ಬುಕ್ -೧ ಇದರ ಅಂತರ್ಜಾಲ ಆವೃತ್ತಿಯನ್ನು ಫೆಬ್ರವರಿ ೨೯ ರಂದು ಮಂಗಳೂರು ಉರ್ವ ಪತ್ರಿಕಾಭವನದಲ್ಲಿ ಕರ್ನಾಟಕ ಸರ್ಕಾರದ ವಿರೋಧ ಪಕ್ಷದ ಮುಖ್ಯ ಸಚೇತಕ ಕೆ.ಅಭಯಚಂದ್ರ ಬಿಡುಗಡೆ ಮಾಡಲಿರುವರು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು ಮುದ್ರಿತ ಆವೃತ್ತಿಯನ್ನು ಜಪ್ಪಿನ ಮೊಗರು ಕಂಬಳದ ದಿನ ಮಂಜೊಟ್ಟಿಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಕಂಬಳ ಕೋಣದ ಧಣಿ ಬಾರ್ಕೂರು ಶಾಂತರಾಮ ಶೆಟ್ಟಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದ್ದರು. ಕಾರ್ಯಕ್ರಮದಲ್ಲಿ ಕಂಬಳ ಸಮಿತಿಯ ಅಧ್ಯಕ್ಷ ಡಾ.ಜೀವಂಧರ್ ಬಲ್ಲಾಳ್, ಲೇಖಕ ಬೋಲ ಚಿತ್ತರಂಜನ್ ಶೆಟ್ಟಿ, ದೈಜಿ ವರ್ಲ್ಡ್ ಆಂಗ್ಲ ವಾರ ಪತ್ರಿಕೆಯ ಸಂಪಾದಕ ಹೇಮಾಚಾರ್ಯ ಮೊದಲಾದವರು ಉಪಸ್ಥಿತರಿರುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಪುಸ್ತಕವನ್ನು ತಿತಿತಿ.ಚಿರಿeಞಚಿಡಿ.ಛಿo.ಛಿಛಿ ನಲ್ಲಿ ನೋಡ ಬಹುದಾಗಿದೆ.
’ಕಂಬಳ ಬುಕ್’ ಅಂತರ್ಜಾಲ ಆವೃತ್ತಿ ಬಿಡುಗಡೆ ಮಂಗಳವಾರ

