ಅಜೆಕಾರು ಶಾಲೆಗೆ ಶತಮಾನೋತ್ಸವ ಸಂಭ್ರಮ /अजेकर school

ಅಜೆಕಾರು ಶಾಲೆಗೆ ಶತಮಾನೋತ್ಸವ ಸಂಭ್ರಮ ಅಜೆಕಾರು ಪರಿಸರದ ಜನರಿಗೆ ನೂರು ವರ್ಷಗಳಿಂದ ಶಿಕ್ಷಣ ನೀಡುತ್ತ ಬಂದಿರುವ ಆಜೆಕಾರು ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮುಂದಿನ ಫೆಬ್ರವರಿಯಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಲಿದೆ.ಈಗಾಗಲೇ ಸಮಿತಿ ಹತ್ತು ಹಲವು ಸಭೆಗಳನ್ನು ನ್ದೆಸಿದೆ.ಮುಂಬಯಿಯ ಉದ್ಯಮಿ ಶಿವರಾಮ ಶೆಟ್ಟಿ ಅವರು ತಮ್ಮ ಒಂದು ಲಕ್ಷ ರೂಪಾಯಿಯ ಕೊಡುಗೆ ನೀಡಿರುವುದಲ್ಲದೆ ತಮ್ಮ ಗೆಳೆಯರಿಂದ ನಾಲ್ಕು ಲಕ್ಷ ಒತ್ತು ಮಾಡಿ ಕೊಟ್ಟಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಅವರು ಸಮಿತಿಯ ಆಧ್ಯಕ್ಷರಾಗಿದ್ದಾರೆ.ಚಿನ್ನ ದೇವದಾಸ್ ಅಂಡಾರು ಅವರು ಕಾರ್‍ಯಾಧ್ಯಕ್ಷರಾಗಿದ್ದಾರೆ.ಮುಖ್ಯೋಪಾದ್ಯಾಯರಾದ ಮಂಜುನಾಥ್ ನಾಯ್ಕ್ ಪ್ರಢಾನ ಕಾರ್ಯದರ್ಶಿ.

Ajekar/ಅಜೆಕಾರು ಸುದ್ದಿ

ಅಜೆಕಾರ್ ಡಾಟ್ ಕಾಮ್ ತಿಂಗಳ ಸುದ್ದಿ: ಪ್ರತಿ ತಿಂಗಳೂ ಅಜೆಕಾರು ಗ್ರಾಮದ ಸುದ್ದಿಗಳನ್ನು ಸೇರಿಸಲು ಪ್ರಯತ್ನಿಸುತ್ತೇನೆ. ಹಾಗಾಗಿಅಜೆಕಾರು (ಮರ್ಣೆ) ಗ್ರಾಮಕ್ಕೆ ಸಂಬಂಧಿಸಿದವರು, ಎಲ್ಲೇ ಇದ್ದರೂ ಚಿತ್ರ ಸಹಿತ ಸುದ್ದಿ ಕಳುಹಿಸಿ ಕೊಡಿ.-- ಸಂಪಾದಕ.ಸೈಟಿಗೆ ಸ್ವಾಗತ:ವಿಶ್ವ ಗ್ರಾಮವಾಗುತ್ತಿರುವಾಗ ಈ ನಮ್ಮ ಗ್ರಾಮವನ್ನು ವಿಶ್ವದ ಜೊತೆಗೆ ಲಿಂಕ್ ಮಾಡುವ ಯತ್ನ ಇದು. ಇದೊಂದು ಸಾಹಸ ಎಂದು ಹೇಳಲಾರೆ. ನನ್ನ ಕುತೂಹಲ, ನಮ್ಮೂರಿನ ಬಗೆಗಿನ ಪ್ರೀತಿ, ವಿಶ್ವಾಸ ಈ ಸೈಟ್ ಆರಂಭಿಸಲು ಪ್ರೇರಣೆಯಾಯಿತು. ಭಾವೈಕ್ಯದ ಕ್ಷೇತ್ರ ಸಂತ ಲಾರೆನ್ಸರ ಅತ್ತೂರು ಈ ಪುಸ್ತಕ ಬರೆಯುತ್ತಿರುವಾಗ ಈ ಪುಸ್ತಕ ದೂರ ದೂರದ ಊರಿನ ಮಿತ್ರರುನೋಡುವಂತಾಗಬೇಕು ಎಂಬ ಭಾವನೆ ಬಲವಾಯಿತು.
ಹೆಮ್ಮೆಯಿಂದ ಹೇಳುತ್ತಿದ್ದೇನೆ. ಆದಿನ ಜ ೨೪ರ ಸಂಜೆ ೭.೧೦ಕ್ಕೆ ಪುಸ್ತಕ ಅತ್ತೂರಲ್ಲಿ ಬಿಡುಗಡೆಯಾದಾಗ ಆ ಪುಸ್ತಕ ಆ ಕ್ಷಣದಲ್ಲಿಯೇ ಅಂತರ್ ಜಾಲದಲ್ಲಿ ಲಭ್ಯವಿತ್ತು. ಹೀಗೆ ಏಕಕಾಲದಲ್ಲಿ ಕನ್ನಡದ ಪುಸ್ತಕ ಮುದ್ರಣ ಮತ್ತು ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟವಾದುದನ್ನು ನಾನು ಕೇಳಿದ್ದಿಲ್ಲ. ಈ ಹೊಸತನ ದಾಖಲೆ ಮುದ ನೀಡಿದೆ. ಅಜೆಕಾರು (ಮರ್ಣೆ)ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪೂರ್ಣ ವಿವರಗಳನ್ನು ಛಾಯಾಚಿತ್ರಗಳೊಂದಿಗೆ ಅಳವಡಿಸಲು ಯತ್ನಿಸುತ್ತಿದ್ದೇನೆ.ಬೇರೆ ಬೇರೆ ದೇಶದಲ್ಲಿರುವ ಊರುಗಳಲ್ಲಿರುವ ಅಜೆಕಾರು ಮೂಲದ ಸಾಧಕರನ್ನು ಜನರನ್ನು ಗುರುತಿಸುವ ಸಂಪರ್ಕಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಬೇಕು. ದೇವರ ದಯೆಯಿಂದ ಇಷ್ಟು ಯೋಚನೆ ಸಾಕಾರಗೊಂಡಿದೆ. ಇನ್ನಷ್ಟು ಬಯಕೆಗಳಿವೆ. ತಂದೆ,ತಾಯಿಯರನ್ನು, ಬಂಧು ಬಳಗದವರನ್ನು, ಗುರು ಹಿರಿಯರನ್ನು ಮಾಧ್ಯಮ ಸ್ನೇಹಿತರನ್ನು ಸ್ಮರಿಸುತ್ತೇನೆ. ಮತ್ತೆ ಸಿಗೋಣ, ಮತ್ತೊಂದು ದಾಖಲೆಯೊಂದಿಗೆ............
ಶೇಖರ ಅಜೆಕಾರು, ಸಂಪಾದಕ

Kannada Sahitya Sammelana Udupi- photos





































Kannada Sahitya Sammelana Udupi- photos

ಪತ್ರಕರ್ತರ ವೇದಿಕೆ (ರಿ) ಬೆಂಗಳೂರು ಇದರ ಉಡುಪಿ ಘಟಕ



ಸಾಣೂರು ಪಂಚಾಯತ್‌ನಲ್ಲಿ ಸಂವಾದ ಕುಡಿಯುನೀರು ಯೋಜನೆಯ ಅನುಷ್ಠಾನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಮಾದರಿಯಾಗಿರುವ ಸಾಣೂರು ಗ್ರಾಮ ಪಂಚಾಯತಿಗೆ ಜೂ। ೨೭ ರಂದು ಮೂರನೇ ಹಣಕಾಸು ಆಯೋಈಗದ ಅಧ್ಯಕ್ಷ ಎ.ಜಿ. ಕೋಡ್ಗಿ ಭೇಟಿ ನೀಡಿದರು. ಅವರು ಪಂಚಾಯತಿನ ವಿವಿಧ ಸಮಸ್ಯೆಗಳು, ಸಂಪನ್ಮೂಲ ಕ್ರೋಢೀಕರಣ ಕುರಿತಂತೆ ಪಂಚಾಯತ್ ಸದಸ್ಯರೊಂದಿಗೆ ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಿದರು. ಪಂಚಾಯತ್ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಅಧ್ಯಕ್ಷತೆ ವಹಿಸಿ ಉಪಯುಕ್ತ ಮಾಹಿತಿ ನೀಡಿದರು. ತಾ. ಪಂ. ಕಾರ್ಯ ನಿರ್ವಾಹಣಾ ಅಧಿಕಾರಿ ರಾಜೇಂದ್ರ ಬೇಕಲ್, ಎ. ಪಿ. ಎಂ. ಸಿ ಅಧ್ಯಕ್ಷ ನಕ್ರೆ ಅಂಥೋನಿ ಡಿ’ಸೋಜ , ತಾ. ಪಂ. ಅಧ್ಯಕ್ಷ ವಿಕ್ರಮ್ ಹೆಗ್ಡೆ, ಜಿ. ಪಂ. ಸದಸ್ಯೆ ವೀಣಾ ವಾಸು ಶೆಟ್ಟಿ , ತಾ. ಪಂ. ಸದಸ್ಯ ಸುಭಾಸ್ ಪಿ. ಕಾಮತ್, ಜಲಾನಯನ ಅಧಿಕಾರಿ ಶಾಂತಾರಾಮ ಶೆಟ್ಟಿ ಯುವ ಜನ ಅಧಿಕಾರಿ ಗಣಪಯ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಪತ್ರಕರ್ತರ ವೇದಿಕೆ (ರಿ) ಬೆಂಗಳೂರು ಇದರ ಉಡುಪಿ ಘಟಕವು ಸಾಣೂರು ಪಂಚಾಯತ್ ಸಹಯೋಗದೊಂದಿಗೆ ಸಾಣೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಕಾಶಕ.ಕಾಂನ ಸಂಪಾದಕ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಪತ್ರಕರ್ತ ರಾಜೇಶ್ ಶಿಬಾಜೆ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎ. ಜಿ. ಕೋಡ್ಗಿ ಪ್ರಶಸ್ತಿ ಪ್ರಧಾನಿಸಿದರು,



ಅಜೆಕಾರು ಈ ಹೆಸರು ಬರಲು ಕಾರಣ

ಅಜೆಕಾರು ಈ ಹೆಸರು ಬರಲು ಕಾರಣ ಅಲ್ಲಿ ಬಹಳ ಹಿಂದೆ ಅಜನೆಂಬ ಸನ್ಯಾಸಿ ತಪಸ್ಸು ಆಚರಿಸಿರುವುದು ಕಾರಣ ಎನ್ನುತ್ತಾರೆ.ಬಹಳ ದೊಡ್ಡ ಕಾಡು ಇದ್ದುದು ಕಾರಣ ಅನ್ನುವುದು ಇನ್ನೊಂಉ ವಾದ.ಅಜ ತಪಸ್ಸು ಮಾಡಿದ ಸ್ಟಳದಲ್ಲಿ ಈಗ ದೇವಾಲಯವಿದೆ.

ShekarAjekar Journalist from Ajekar honoured with Viswa Chethana award

ShekarAjekar Journalist from Ajekar honoured with Viswa Chethana award recently by than Chief Minister of Karnataka for his Excellency in Journalism.

Twitter Facebook Delicious Digg Favorites More

 
Twitter Facebook Delicious Digg Favorites More